ರಿಯಲ್ ಹೀರೋ ಸೋನು ಸೂದ್ ವಿರುದ್ಧ ಕೇಸ್ : ಕಾರಣ ಏನು ಗೊತ್ತಾ….?

ಕಷ್ಟಕಾಲದಲ್ಲಿ ಕೈ ಹಿಡಿದವನೇ ದೇವರು. ಈ ಮಾತಿಗೆ ಬಾಲಿವುಡ್ ನಟ ಸೋನು ಸೂದ್ ಸರಿಯಾಗಿ ಹೋಲಿಕೆಯಾಗಿದ್ದಾರೆ. ಆದರೆ ಇದೇ ರಿಯಲ್ ಹೀರೋ ವಿರುದ್ಧ ಸದ್ಯ ದೂರು ದಾಖಲಿಸಲಾಗಿದೆ.

ಹೌದು… ಆರ್ಥಿಕ ಸಂಕಷ್ಟದಲ್ಲಿ ಹಲವಾರು ಮಂದಿಗೆ ಸಹಾಯ ಮಾಡಿ ರಿಯಲ್ ಹೀರೋ ಎನಿಸಿಕೊಂಡ ನಟ ಸೋನು ಸೂದ್ ವಿರುದ್ಧ ಮುಂಬೈ ಮಹಾನಗರ ಪಾಲಿಕೆ ಪೊಲೀಸರಿಗೆ ದೂರು ನೀಡಿದೆ.

ಸೋನು ಸೂದ್ ಅವರು ಅನುಮತಿಯಿಲ್ಲದೇ ಬಹುಮಹಡಿ ಕಟ್ಟಡವನ್ನು ಹೋಟೆಲ್ ಆಗಿ ಪರಿವರ್ತಿಸಿದ ಆರೋಪದಡಿ ಅವರ ವಿರುದ್ಧ ದೂರು ದಾಖಲಾಗಿದೆ.ಸೋನು ಸೂದ್ ಅವರು ಮುಂಬೈನ ಜುಹು ಪ್ರದೇಶದಲ್ಲಿರುವ ಶಕ್ತಿ ನಗರ್ ಎಂಬ ಆರು ಅಂತಸ್ತಿನ ಕಟ್ಟಡವನ್ನು ಪಾಲಿಕೆಯ ಅನುಮತಿ ಪಡೆಯದೇ ಹೋಟೆಲ್ ಆಗಿ ಪರಿವರ್ತಿಸಿದ್ದಾರೆ.

ಇದರ ವಿರುದ್ಧ ಮಹಾರಾಷ್ಟ್ರ ಪ್ರದೇಶ ಮತ್ತು ಪಟ್ಟಣ ಯೋಜನೆ (ಎಂಆರ್‍ಟಿಪಿ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಜುಹು ಪೊಲೀಸರಿಗೆ ಬಿಎಂಸಿ ಆಗ್ರಹಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸೋನು ಸೂದು, ಆರೋಪವನ್ನು ತಳ್ಳಿಹಾಕದ್ದು, ಇಲ್ಲಿ ಯಾವುದೇ ಅವ್ಯವಹಾರವಿಲ್ಲ.ನಾನು ಬಿಎಂಸಿ ಅನುಮತಿ ಪಡೆದಿದ್ದೇನೆ. ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ಅನುಮತಿಗಾಗಿ ಕಾಯುತ್ತಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights