ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ; ನಗ್ನ ಫೋಟೋ ಹೊರಬಂದ ಬಳಿಕ ಕೃತ್ಯ ಬೆಳಕಿಗೆ

ಅಸ್ಸಾಂನ ದಿಬ್ರುಗಢದಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು, ಆಕೆಯ ನಗ್ನ ಚಿತ್ರವನ್ನು ಆಕೆಯನ್ನು ವಿವಾಹವಾಗಲಿದ್ದ ಭಾವಿ ಪತಿಗೆ ಕಳಿಸಲಾಗಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿಯ ನಗ್ನ ಫೋಟೋ ಪ್ರಸಾರ ಮಾಡಿದ ಆರೋಪದ ಮೇಲೆ 21 ವರ್ಷದ ಯುವಕನನ್ನು ಸೋಮವಾರ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಸೋದರ ಸಂಬಂಧಿ ಮತ್ತು ಸ್ನೇಹಿತನೊಬ್ಬನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಶನಿವಾರ ವಿದ್ಯಾರ್ಥಿನಿ ದೂರು ನೀಡಿದ್ದು, ಆರು ತಿಂಗಳ ಹಿಂದೆ ಆರೋಪಿಗಳು ತನಗೆ ನಿದ್ರಾಜನಕ ಪಾನೀಯ ನೀಡಿ, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಕೃತ್ಯ ಎಸಗಿದ ನಂತರ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯ ನಗ್ನ ಫೋಟೋವನ್ನು ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಆಕೆಗೆ ಮದುವೆ ನಿಶ್ಚಯವಾಗಿತ್ತು. ಆಕೆಯನ್ನು ವಿವಾಹವಾಗುವ ಯುವಕನಿಗೆ ಆ ಫೋಟೋಗಳನ್ನು ಕಳಿಸಲಾಗಿದೆ.

ನಗ್ನ ಫೋಟೋ ಹೊರಬಂದ ಬಳಿಕ ಆಕೆಗೆ ಇದೆಲ್ಲವೂ ತಿಳಿದಿದೆ. ಅಲದೆ, ಪೋಟೋ ಹೊರಬಂದ ಬಳಿಕ ಆಕೆಯನ್ನು ಬ್ಲಾಕ್‌ಮೇಲ್ ಮಾಡಲು ಯತ್ನಿಸಲಾಗಿದೆ. ನಂತರ ಯುವತಿ ದೂರು ನೀಡಿದ್ದಾರೆ ಎಂದು ದಿಬ್ರುಗಢ ಪೊಲೀಸರು ತಿಳಿಸಿದ್ದಾರೆ.

ಬೊರ್ಬೊರುವಾ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ.

ಆರು ತಿಂಗಳ ಹಿಂದೆ ಯುವತಿ ದ್ವಿಚಕ್ರ ವಾಹನದಲ್ಲಿ ಪ್ರಮುಖ ಆರೋಪಿಯೊಂದಿಗೆ ಕಾಲೇಜಿಗೆ ಹೋಗುತ್ತಿದ್ದಾಗ. ವಾಹನ ಕೆಟ್ಟು ಹೋಗಿದ್ದು, ಮಾರ್ಗಮಧ್ಯದಲ್ಲಿ ಆತನ ಸಂಬಂಧಿಕರ ಕಾರ್ ನಲ್ಲಿ ಲಿಫ್ಟ್ ತೆಗೆದುಕೊಂಡಿದ್ದಾರೆ.

ಈ ವೇಳೆ ಆಕೆಗೆ ನಿದ್ರಾಜನಕ ಪಾನೀಯ ಕುಡಿದು ಪ್ರಜ್ಞೆತಪ್ಪಿದೆ. ಆಕೆಗೆ ಎಚ್ಚರವಾದ ಸಂದರ್ಭದಲ್ಲಿ ಆರೋಪಿಯ ಸಂಬಂಧಿಕರ ಮನೆಯಲ್ಲಿ ಇಬ್ಬರು ಯುವಕರ ಜೊತೆಗೆ ಆರೋಪಿ ಕೂಡ ಇದ್ದರು ಎಂದು ಯುವತಿ ತಿಳಿಸಿರುವುದಾಗಿ ಡಿಬ್ರುಗಢ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ. ಚೆಟಿಯಾ ಹೇಳಿದ್ದಾರೆ.

ಪ್ರಜ್ಞಾಹೀನಳಾಗಿದ್ದರಿಂದ ಸಂತ್ರಸ್ತೆಗೆ ಅಂದು ನಡೆದ ಘಟನೆಯ ಯಾವುದೇ ಮಾಹಿತಿ ಇರಲಿಲ್ಲ. ಅತ್ಯಾಚಾರ ಎಸಗಿದ ಆರೋಪಿಗಳು ಆಕೆಯ ನಗ್ನ ಫೋಟೋ ತೆಗೆದಿದ್ದಾರೆ. ಇತ್ತೀಚೆಗೆ ಅವುಗಳನ್ನು ಪ್ರಸಾರ ಮಾಡಿದ್ದಾರೆ. ಇದಾದ ನಂತರ ಕೆಲವರು ಆಕೆಯನ್ನು ಬ್ಲಾಕ್ಮೇಲ್ ಮಾಡಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.