ದೆಹಲಿ ಪೊಲೀಸರು ಹಾಕಿದ ಕಬ್ಬಿಣದ ಮೊಳೆಗಳ ಪಕ್ಕ ಹೂವಿನ ಗಿಡ ನೆಟ್ಟ ರೈತರು!

ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರದ ರೈತರು ಶುಕ್ರವಾರ ರಸ್ತೆಯ ಉದ್ದಕ್ಕೂ ಹೂವಿನ ಸಸಿಗಳನ್ನು ನೆಟ್ಟಿದ್ದಾರೆ. ಈ ಪ್ರದೇಶದಲ್ಲಿ ಪೊಲೀಸರು ಹೆದ್ದಾರಿಯಲ್ಲಿ ಹಾಕಿದ ಕಬ್ಬಿಣದ ಮೊಳೆಗಳಿಗೆ ಇದು ಅವರ ಪ್ರತಿಕ್ರಿಯೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಜನವರಿ 26 ರ ಹಿಂಸಾಚಾರದ ಹಿನ್ನೆಲೆಯಲ್ಲಿ ರೈತರ ಪ್ರತಿಭಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಬ್ಬಿಣದ ಮೊಳೆಗಳ ಜೊತೆಗೆ ಮಲ್ಟಿ-ಲೇಯರ್ಡ್ ಬ್ಯಾರಿಕೇಡಿಂಗ್, ಕನ್ಸರ್ಟಿನಾ ತಂತಿಗಳಂತಹ ಕಠಿಣ ಭದ್ರತಾ ಗೋಡೆಗಳನ್ನು ನಿರ್ಮಿಸಲಾಗಿದೆ.

ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕೈಟ್, “ಪೊಲೀಸರು ಪ್ರತಿಭಟನಾ ರೈತರ ಸ್ಥಳಗಳ ಸುತ್ತಲು ಕಬ್ಬಿಣದ ಚೂಪಾದ ಮೊಳೆಗಳನ್ನು ಹಾಕಿದ್ರುದಾರೆ ಆದರೆ ನಾವು ಅದಕ್ಕೆ ಪ್ರತಿಯಾಗಿ ಹೂವುಗಳನ್ನು ನೆಡಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.

ಮಾರಿಗೋಲ್ಡ್ ಹೂವುಗಳ ಗಿಡಗಳನ್ನು ಗಡಿ ಭಾಗದಲ್ಲಿ ಹಾಕಲಾದ ಮೊಳೆಗಳ ಜೊತೆಗೆ ಹಾಕಲಾಗಿದೆ. “ದೆಹಲಿ-ಡಾಬರ್ ತಿರಾಹಾ ರಸ್ತೆಯಲ್ಲಿ ಹೂವಿನ ಉದ್ಯಾನವನ್ನು ರಚಿಸಲಾಗುತ್ತಿದೆ. ಇದು ರಸ್ತೆ ವಿಸ್ತಾರದಲ್ಲಿ ಮಲಗಿರುವ ಕೊಳೆಯನ್ನು ಆವರಿಸುತ್ತದೆ ಮತ್ತು ಸುಗಂಧವನ್ನು ಹೊರಹೊಮ್ಮಿಸುತ್ತದೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸುಧಾರಿಸುತ್ತದೆ” ಎಂದು ಬಿಕೆಯು ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ಹೇಳಿದ್ದಾರೆ.

ಹತ್ತಿರದ ನರ್ಸರಿಗಳಿಂದ ಹೂವಿನ ಸಸಿಗಳನ್ನು ಪಡೆಯುತ್ತಿರುವ ರೈತರು ತಾವು ಶಾಂತಿಯುತ ಪ್ರದರ್ಶನದ ಹಾದಿಯಲ್ಲಿದ್ದಾರೆ ಎಂದು ಹೂವಿನ ಗಿಡಗಳನ್ನು ನೆಡುತ್ತಿದ್ದಾರೆ.

ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ್ ಮತ್ತು ರಾಜಸ್ಥಾನ ಸೇರಿದಂತೆ ರೈತರು ತಾತ್ಕಾಲಿಕ ಟಾರ್ಪಾಲಿನ್ ಆಶ್ರಯದಲ್ಲಿ ಕ್ಯಾಂಪಿಂಗ್ ಮಾಡುತ್ತಿದ್ದರೆ, ಅನೇಕರು ತಮ್ಮ ಟ್ರಾಕ್ಟರ್-ಟ್ರೇಲರ್‌ಗಳನ್ನು ತಮ್ಮ ವಿಶ್ರಾಂತಿ ಸ್ಥಳವಾಗಿ ಮಾಡಿಕೊಂಡಿದ್ದಾರೆ. ಗಾಜಿಪುರದ ಹೊರತಾಗಿ, 2020 ರ ನವೆಂಬರ್‌ನಿಂದ ದೆಹಲಿಯ ಹೊರವಲಯದಲ್ಲಿರುವ ಟಿಕ್ರಿ ಮತ್ತು ಸಿಂಗ್‌ನಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights