ಕೇರಳದಲ್ಲಿ ಕೊರೊನ ಸೋಂಕಿನಿಂದ ಗುಣಮುಖರಾದ 93 ವರ್ಷದ ವೃದ್ಧ

ಕೇರಳ 93 ವರ್ಷದ ವಯೋವೃದ್ಧ ಥಾಮಸ್ ಅಬ್ರಹಾಂ ಕೊರೊನ ಸೋಂಕಿನಿಂದ ಗುಣಮುಖರಾಗಿದ್ದು, ಇದು ಬಹುತೇಕ ಮಾಂತ್ರಿಕ ಎಂದು ವೈದ್ಯಕೀಯ ಸಮುದಾಯ ಬಣ್ಣಿಸಿದೆ.

ಥಾಮಸ್ ಮತ್ತು 88 ವರ್ಷ ಅವರ ಪತ್ನಿ ಮಾರಿಯಮ್ಮ ಕೂಡ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಟಲಿಯಿಂದ ಹಿಂದಿರುಗಿದ್ದ ತಮ್ಮ ಮಗ, ಸೊಸೆ ಮತ್ತು ಮೊಮ್ಮಗುವಿನಿಂದ ಇವರು ಸೋಂಕು ಪಡೆದಿದ್ದರು. ಆ ಮೂವರೂ ಗುಣಮುಖರಾಗಿ ಈಗ ಆಸ್ಪತ್ರೆಯಿಂದ ಈ ಹಿರಿಯ ದಂಪತಿಗಳು ಬರುವುದನ್ನು ಕಾಯುತ್ತಿದ್ದಾರೆ. ಬುಧವಾರ ಅವರು ಆಸ್ಪತ್ರೆಯಿಂದ ಮನೆಗೆ ಬರುವ ಸಾಧ್ಯತೆ ಇದೆ.

ಕೊರೊನ ವೃದ್ಧರಿಗೆ ಬಹಳ ಅಪಾಯಕಾರಿ ವೈರಸ್ ಆಗಿ ಪರಿಣಮಿಸಿದೆ. ಈ ವೃದ್ಧರ ಆರೋಗ್ಯ ಕೂಡ ಗಂಭೀರವಾಗಿ ಕೊಟ್ಟಾಯಂ ವೈದೀಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಅವರ ಆರೋಗ್ಯಕರ ಜೀವನ ಶೈಲಿಯಿಂದ ಅವರು ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯವಾಗಿರಬಹುದು ಎಂದಿದ್ದಾರೆ ಅವರ ಮೊಮ್ಮಗ ರಿಜೋ ಮಾನ್ಸಿ. ಎಂದಿಗೂ ಮದ್ಯಪಾನ ಮತ್ತು ಧೂಮಪಾನ ಮಾಡದ ರೈತ ಥಾಮಸ್ ಎಂದು ತಿಲಿದುಬಂದಿದೆ.

“ಅವರು ಈ ಸಾಂಕ್ರಾಮಿಕವನ್ನು ಗೆದ್ದಿರುವುದು ಮ್ಯಾಜಿಕಲ್. ಇದಕ್ಕಾಗಿ ವೈದರು ಮತ್ತು ಆರೋಗ್ಯ ಕಾರ್ಯಕರ್ತರು ಸಾಕಷ್ಟು ಕೆಲಸ ಮಾಡಿದ್ದಾರೆ” ಎಂಡು ಇಟಲಿಯಲ್ಲಿ ರೇಡಿಯೋಲಾಜಿ ವಿಭಾಗದಲ್ಲಿ ಕೆಲಸ ಮಾಡುವ ರಿಜೋ ಹೇಳಿದ್ದಾರೆ.

ಕೊರೊನ ಸಾಂಕ್ರಾಮಿಕದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಿರುವ ರಾಜ್ಯ ಸರ್ಕಾರವನ್ನೂ ಈ ಕುಟುಂಬ ಶ್ಲಾಘಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights