‘ಕೊರೊನವೈರಸ್’ ಪದ ಬಳಕೆಯನ್ನೇ ನಿಷೇಧಿಸಿದ ತುರ್ಕಮೇನಿಸ್ಥಾನ

ಕೇಂದ್ರ ಏಷ್ಯಾ ದೇಶವಾದ ತುರ್ಕಮೇನಿಸ್ಥಾನದಲ್ಲಿ ಮಾಧ್ಯಮಗಳು ‘ಕೊರೊನವೈರಸ್’ ಪದ ಬಳಸದಂತೆ ನಿಷೇಧ ಹೇರಿದೆ. ಇಲ್ಲಿಯವರೆಗೂ ಒಂದೂ ನಾವೆಲ್ ಕೊರೊನ ಪ್ರಕರಣಗಳು ದಾಖಲಾಗದ ಈ ದೇಶದ ಶಾಲೆಗಳಲ್ಲಿ, ಆಸ್ಪತ್ರೆಗಳಲ್ಲಿ ಮತ್ತು ಇತರ ಕಾರ್ಯಕ್ಷೇತ್ರಗಳಲ್ಲಿ ಹಂಚಲಾಗಿದ್ದ ಆರೋಗ್ಯ ಮಾಹಿತಿ ಕೈಪಿಡಿಗಳಲ್ಲಿಯೂ ಆ ಪದವನ್ನು ಕೈಬಿಡಲಾಗಿದೆ.

ವಿಶ್ವ ಮಾಧ್ಯಮ ಸ್ವಾತಂತ್ರ್ಯ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುವ ಈ ದೇಶದಲ್ಲಿ ಸರ್ವಾಧಿಕಾರವಿದೆ. ಅನಿಲ ಸಂಪನ್ಮೂಲಗಳನ್ನು ದೊಡ್ಡ ಮಟ್ಟದಲ್ಲಿ ಹೊಂದಿರುವ ಮಾಜಿ ಸೋವಿಯತ್ ಒಕ್ಕೂಟ ರಾಷ್ಟ್ರ ಜಗತ್ತಿನ ಸಂಪರ್ಕವನ್ನು ಕಡಿದುಕೊಂಡಿರುವ ರಾಷ್ಟ್ರಗಳಲ್ಲಿ ಒಂದು. 44 ಸಾವಿರ ಕೊರೊನ ಸೋಂಕಿನ ಪ್ರಕರಣ ಹೊಂದಿರುವ ಇರಾನ್ ಜೊತೆಗೆ ಗಡಿಯನ್ನು ಈ ದೇಶ ಹಂಚಿಕೊಳ್ಳುತ್ತದೆ.

ಮುಖಕವಚಗಳನ್ನು ಧರಿಸುವ ಜನರನ್ನು ಮತ್ತು ಕೊರೊನ ವೈರಸ್ ಬಗ್ಗೆ ಮಾತನಾಡಿಕೊಳ್ಳುತ್ತಿರುವ ಜನರನ್ನು ಸಮವಸ್ತ್ರ ಧರಿಸದ ಪೊಲೀಸರು ಬಂಧಿಸುತ್ತಿದ್ದಾರೆ ಎಂದು ಪ್ಯಾರಿಸ್ ಮೂಲದ ‘ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್’ ಸಂಸ್ಥೆಯ ಪತ್ರಕರ್ತರು ವರದಿ ಮಾಡಿರುವುದಾಗಿ ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ತುರ್ಕಮೇನಿಸ್ಥಾನದ ರಕ್ಷಕ ಎಂದು ಸ್ವತಃ ಕರೆದುಕೊಂಡಿರುವ ಅಧ್ಯಕ್ಷ ಗುರ್ಬಂಗುಲಿ ಬರ್ದಿಮುಖಮೆದೊವ್ 2006 ರಿಂದ ದೇಶವನ್ನು ಸ್ವಶೈಲಿಯಲ್ಲಿ ಆಳುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights