Corona virus :14 ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರು, ರಾಜ್ಯದ 16 ಜಿಲ್ಲೆಗಳಲ್ಲಿ ವೈರಸ್ ಇಲ್ಲ

ಬೆಂಗಳೂರು ದಕ್ಷಿಣ ಮತ್ತು ಹೃದಯ ಭಾಗದಲ್ಲಿ ಜನಸಂಚಾರ ಹೇಗಿದೆ ಎಂದು ಅವಲೋಕಿಸಿದಾಗ, ಸರಕಾರ ಮತ್ತು ಪೊಲೀಸ್ ಇಲಾಖೆಯ ಸತತ ಪ್ರಯತ್ನದ ನಂತರ ಒಂದು ಹಂತಕ್ಕೆ ಕಮ್ಮಿಯಾಗಿದೆ .. ಸಾರ್ವಜನಿಕರು ಇದೇ ರೀತಿ ಆಡಳಿತ ವ್ಯವಸ್ಥೆಗೆ ಸಹಕರಿಸುತ್ತಾ ಬಂದರೆ, ಕೊರೊನಾ ಓಡಿಸಿ, ಏಪ್ರಿಲ್ ಹದಿನೈದರ ನಂತರ ಲಾಕ್ ಔಟ್ ತೆರವುಗೊಳ್ಳಬಹುದು. ಇಲ್ಲದಿದ್ದರೆ, ಮುಖ್ಯಮಂತ್ರಿಗಳು ಈಗಾಗಲೇ ಹೇಳಿದಂತೆ, ಮತ್ತೆ ಮುಂದುವರಿಯಬಹುದು. ಇಲ್ಲವೇ ಹಂತ ಹಂತವಾಗಿ ಲಾಕ್ ಔಟ್ ತೆರವುಮಾಡಬಹುದು..

ಎಷ್ಟು ದಿನಾಂತಾ ಗೃಹ ಬಂಧನದಲ್ಲಿ ಇರುವುದಕ್ಕೆ ಸಾಧ್ಯ ಎಂದು ಸಾರ್ವಜನಿಕರು ಇನ್ನೊಂದೆರಡು ವಾರ ತಾಳ್ಮೆ ಕಳೆದುಕೊಳ್ಳದೇ ಇದ್ದರೆ, ಎಲ್ಲವೂ ಸಸೂತ್ರವಾಗಿ ಹಂತ ಹಂತವಾಗಿ ಸರಿದಾರಿಗೆ ಬರಲಿದೆ. ರಾಜ್ಯದಲ್ಲಿ ಇದುವರೆಗೆ ಮೂವರನ್ನು ಕೊರೊನಾ ಬಲಿ ಪಡೆದುಕೊಂಡಿದೆ. ಒಟ್ಟಿಗೆ ಹನ್ನೆರಡು ಜಿಲ್ಲೆಗಳಲ್ಲಿ ಸೋಂಕಿತರು ಇದ್ದಾರೆ. ಉಳಿದ ಜಿಲ್ಲೆಗಳಲ್ಲಿ ಇದುವರೆಗೆ ಯಾವುದೇ ಸೋಂಕಿತರು (ಕ್ವಾರಂಟೈನ್ ಅಲ್ಲ) ಇಲ್ಲ ಎನ್ನುವುದು ಸಮಾಧಾನದ ವಿಷಯ, ಟಚ್ ವುಡ್ ಹಾಗೇ ಇರಲಿ. ಆ ಜಿಲ್ಲೆಗಳಾವುವು?

ಕೊರೊನಾ ಸೋಂಕಿತರಿಲ್ಲದ  ಜಿಲ್ಲೆಗಳು

1. ಬಾಗಲಕೋಟೆ              2. ಬೆಳಗಾವಿ                     3. ವಿಜಯಪುರ                        4. ಗದಗ

5. ಹಾವೇರಿ                   6. ಮಂಡ್ಯ                           7. ಕೋಲಾರ                            8. ರಾಮನಗರ
9. ಶಿವಮೊಗ್ಗ               10. ಬೀದರ್                            11. ಕೊಪ್ಪಳ                          12. ರಾಯಚೂರು
13. ಯಾದಗಿರಿ            14. ಚಾಮರಾಜನಗರ            15. ಚಿಕ್ಕಮಗಳೂರು                 16. ಹಾಸನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights