ಸೌದಿ ಅರೇಬಿಯಾದಲ್ಲಿ ಫೇಮಸ್ ಆದ ಒಂಟೆ ಮೂತ್ರ ನೀಡುವ ಕೆಫೆ…!
ಚುಮು ಚುಮು ಚಳಿಗೆ ಬಿಸಿ ಬಿಸಿ ಚಹಾ.. ಅದ್ರಲ್ಲೂ ವೆರಾಯಿಟಿ ಚಹಾ ಕುಡಿಯುವುದು ಒಂದು ರೀತಿಯ ಫ್ರೆಶನೆಸ್ ಕೊಡುತ್ತೆ. ಆದ್ರೆ ಇಲ್ಲೊಂದು ಕೆಫೆ ಕೊಂಚ ವಿಭಿನ್ನ. ಯಾಕೆಂದ್ರೆ ಈ ಕೆಫೆಯಲ್ಲಿ ಒಂಟೆ ಮೂತ್ರ ಲಭ್ಯವಾಗುತ್ತದೆ.
ಹೌದು… ಸೌದಿ ಅರೇಬಿಯಾದಲ್ಲಿ ಒಂಟೆ ಮೂತ್ರದಲ್ಲಿ ಪರಿಣತಿ ಪಡೆದ ಮೊದಲ ಇಸ್ಲಾಮಿಕ್ ಕೆಫೆಯನ್ನು ತೆರೆಯಲಾಗುತ್ತಿದೆ. “ಟುಗೆದರ್ ಎಗೇನ್ಸ್ಟ್ ರಿಲಿಜನ್ ಟ್ರೇಡರ್ಸ್” ಟ್ವಿಟ್ಟರ್ ಪುಟದಿಂದ ಮೊದಲು ಹಂಚಲ್ಪಟ್ಟ ವೀಡಿಯೊ ಕ್ಲಿಪ್ ವೈರಲ್ ಆಗಿದ್ದು ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಮರುಭೂಮಿಯಲ್ಲಿ ನಿಂತು ಗಡ್ಡಧಾರಿಯಾದ ಹಲವು ವ್ಯಕ್ತಿಗಳಿಗೆ ಒಂಟೆ ಮೂತ್ರವನ್ನು ವಿತರಿಸುತ್ತಾನೆ.
ಆದರೆ ಈ ವಿಡಿಯೋದ ಸತ್ಯಾಸತ್ಯತೆ ಇನ್ನೂ ತಿಳಿದುಬಂದಿಲ್ಲ. ಆದರೆ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಇದು ಧರ್ಮವೊಂದಕ್ಕೆ ಮಾಡಿದ ಅಪಚಾರ ಎಂದು ನೆಟ್ಟಿಗರು ಗರಂ ಆಗಿದ್ದಾರೆ.