ಫ್ಯಾಕ್ಟ್‌ಚೆಕ್: ಬಾಲಕನೊಬ್ಬ ರಸ್ತೆ ಮಧ್ಯದಲ್ಲಿ ನಮಾಜ್ ಮಾಡುವ ದೃಶ್ಯ ಇದು ಪಾಕ್‌ನಲ್ಲಿ ನಡೆದ ಘಟನೆಯೇ?

ಚಿಕ್ಕ ಹುಡುಗನೊಬ್ಬ ರಸ್ತೆ ಮಧ್ಯದಲ್ಲಿ ಬಟ್ಟೆಯನ್ನು ಹಾಸಿ ನಮಾಜ್ ಮಾಡುವ ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ರಸ್ತೆ ದಾಟಲು ತೊಂದರೆ ಉಂಟಾಗುತಿದ. ಸೆಕ್ಯೂರಿಟಿ ಗಾರ್ಡ್ ಪಕ್ಕಕ್ಕೆ ಸರಿಯುವಂತೆ ಹುಡುಗನನ್ನು ಮನವೊಲಿಸುತ್ತಿರುವ ದೃಶ್ಯಗಳು ಪಾಕಿಸ್ತಾನದ್ದು ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

ನವಭಾರತ್ ಟೈಮ್ಸ್ ಮತ್ತು ಮಹಾರಾಷ್ಟ್ರ ಟೈಮ್ಸ್‌ನಂತಹ ಸುದ್ದಿವಾಹಿನಿಗಳು ಸಹ ಅದೇ ಪ್ರತಿಪಾದನೆಯೊಂದಿಗೆ ವಿಡಿಯೊ ವರದಿ ಮಾಡಿವೆ. ಇದೇ ರೀತಿಯ ಪೋಸ್ಟ್‌ಗಳ ಆರ್ಕೈವ್ ಅನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ಘಟನೆ ನಡೆದಿರುವುದು ಪಾಕಿಸ್ತಾನದಲ್ಲಿ ಅಲ್ಲಾ ಎಂದು ತಿಳಿದು ಬಂದಿದೆ. ಇಂಡಿಯಾ ಟುಡೇ ಕೂಡ ಫ್ಯಾಕ್ಟ್‌ಚೆಕ್ ಮೂಲಕ ಇದು ಪಾಕ್‌ನಲ್ಲಿ ನಡೆದ ಘಟನೆಯಲ್ಲ ಎಂದು ವರದಿ ಮಾಡಿದೆ.

ವಿಡಿಯೋವನ್ನು ಹತ್ತಿರದಿಂದ ನೋಡಿದಾಗ, ‘ತಲಾಬತ್’, ಆಹಾರ ವಿತರಣಾ ವಾಹನವು ವಿಡಿಯೊದಲ್ಲಿ ಕಂಡುಬರುತ್ತದೆ. ಯುಎಇ, ಸೌದಿ ಅರೇಬಿಯಾ, ಕತಾರ್ ಮತ್ತು ಓಮನ್ ಸೇರಿದಂತೆ ಬಹುತೇಕ ಮಧ್ಯಪ್ರಾಚ್ಯ ದೇಶಗಳಲ್ಲಿ ತಲಾಬಾತ್ ಸೇವೆ ನೀಡುತ್ತಿದೆ. ಆದರೆ ಪಾಕಿಸ್ತಾನದಲ್ಲಿ ಈ ಸೌಲಭ್ಯ ಲಭ್ಯವಿಲ್ಲ. ಇದರ ಜೊತೆಗೆ,ಕಾರಿನ  ಸ್ಟೀರಿಂಗ್  ಎಡಭಾಗದಲ್ಲಿ ಕಾಣಬಹುದು, ಆದರೆ ಪಾಕಿಸ್ತಾನದ ಕಾರುಗಳಲ್ಲಿ ಸ್ಟೀರಿಂಗ್ ಬಲ ಭಾಗದಲ್ಲಿರುತ್ತದೆ . ಕಾರಿನ ನಂಬರ್ ಪ್ಲೇಟ್‌ಗಳು ಕೂಡ ಪಾಕಿಸ್ತಾನದಲ್ಲ ಎಂಬುದು ಸ್ಪಷ್ಟವಾಗಿದೆ.

ಪಾಕಿಸ್ತಾನದಲ್ಲಿ ಈ ಘಟನೆ ನಡೆದಿರುವುದು ನಿಜವೇ ಎಂದು ಪರಿಶೀಲಿಸಲು ಮತ್ತಷ್ಟು ಸರ್ಚ್ ನಡೆಸಿದಾಗ, ಹುಡುಗ ಪ್ರಾರ್ಥನೆ ನಡೆಸುವಾಗ ತೆರೆವುಗೊಳಿಸಲು ಮುಂದಾದ  ಸೆಕ್ಯೂರಿಟಿ ಗಾರ್ಡ್‌ನ ಸಮವಸ್ತ್ರದಲ್ಲಿ ಸೆಕ್ಯೂರಿಟಿ ಎಂದು ಅರೆಬಿಕ್ ಭಾಷೆಯಲ್ಲಿ ಬರೆಯಲಾಗಿದೆ. ದುಬೈನಲ್ಲಿರುವ ಭದ್ರತಾ ಕಂಪನಿ ಎಫ್ ಎಜಾದ ವೆಬ್‌ಸೈಟ್‌ ಪ್ರಕಾರ, ಅರ್ಕಾನ್ ದುಬೈ ಮತ್ತು ಅಬುಧಾಬಿಯಲ್ಲಿ ತನ್ನ ಸೇವೆಗಳನ್ನು ಒದಗಿಸುವ ಭದ್ರತಾ ಕಂಪನಿಯಾಗಿದೆ. ಇದಲ್ಲದೆ, YouTube ನಲ್ಲಿ Arkan ಭದ್ರತಾ ಸಿಬ್ಬಂದಿಯ ಸಂದರ್ಶನವನ್ನು ಸಹ ಕಂಡುಕೊಂಡಿದ್ದೇವೆ. ವೈರಲ್ ವಿಡಿಯೋದಲ್ಲಿರುವ ಭದ್ರತಾ ಸಿಬ್ಬಂದಿಯ ಸಮವಸ್ತ್ರಕ್ಕೆ ಅವರ ಸಮವಸ್ತ್ರ ಹೊಂದಿಕೆಯಾಗುತ್ತದೆ.

ವೈರಲ್ ವೀಡಿಯೊದಲ್ಲಿ ಟಿಕ್‌ಟಾಕ್ ವಾಟರ್‌ಮಾರ್ಕ್ ‘ಅಹೋಮ್ 75ಉದ್ದೀನ್’  ಎಂದು ಬರೆಯಲಾಗಿದೆ. ಈ ಪ್ರೊಫೈಲ್ ಅನ್ನು ಸರ್ಚ್ ಮಾಡಿದಾಗ, ವಿಡಿಯೊವನ್ನು ಒಂದು ವಾರದ ಹಿಂದೆ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಅದೇ ವ್ಯಕ್ತಿಯು 11 ಜನವರಿ 2023 ರಂದು ತನ್ನ ಫೇಸ್‌ಬುಕ್ ಪುಟದಲ್ಲಿ ಅದೇ ವೀಡಿಯೊವನ್ನು ಪೋಸ್ಟ್ ಮಾಡಿದ್ದು ಅದನ್ನು ‘ದುಬೈ ಮಸೀದಿ’ ಎಂದು ನಮೂದಿಸಿದ್ದಾರೆ.

ಈ ವೈರಲ್ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ತಾರೆಕ್ ಫತಾಹ್ ಈ ಹಿಂದೆ ರಾಜಸ್ಥಾನದ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರ ನಡುವೆ ಮಾತಿನ ಚಕಮಕಿಯ ಹಳೆಯ ವೀಡಿಯೊವನ್ನು ಪಾಕಿಸ್ತಾನದ ಆಸ್ಪತ್ರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಪೋಸ್ಟ್‌ನಲ್ಲಿ ಹುಡುಗನೊಬ್ಬ ರಸ್ತೆಯ ಮಧ್ಯದಲ್ಲಿ ನಮಾಜ್ ಮಾಡುತ್ತಿದ್ದಾನೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ಪೋಸ್ಟ್‌ ತಪ್ಪಾಗಿದೆ. ಇಂತಹ ಯಾವುದೇ ಘಟನೆಗಳು ನಡೆದಾಗ ಸಾಮಾಜಿಕ ಮಾಧ್ಯಮಗಳಲ್ಲಿ ಪಾಕ್‌ ಹೆಸರನ್ನು ಅಪರಾಧಿ ಎಂಬಂತೆ ಬಿಂಬಿಸಿ ಸುಳ್ಳು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತದೆ. ಆದರೆ ಈ ಘಟನೆ ನಡೆದಿರುವುದು ಪಾಕಿಸ್ತಾನದಲಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಎಂದು ಸುಳ್ಳು ಹೇಳಿ ‘love jihad’ ನಡೆಸಿದನೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights