ಅರುಣಾಚಲ ಪ್ರದೇಶದಲ್ಲಿ ಭೂಕುಸಿತ : 8 ತಿಂಗಳ ಮಗು ಸೇರಿ ಮಲಗಿದ್ದಾಗಲೇ ಮಣ್ಣಾದ್ರು ನಾಲ್ಕು ಜನ!

ಭಾರಿ ಮಾಳೆಯಿಂದಾಗಿ ಭೂಕುಸಿತ ಉಂಟಾದ ಪರಿಣಾಮ 8 ತಿಂಗಳ ಮಗು ಸೇರಿ ನಾಲ್ಕು ಜನ ಸಾವಿಗೀಡಾದ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.

ಅರುಣಾಚಲ ಪ್ರದೇಶದ ಪಾಪುಮ್ ಪಾರೆ ಜಿಲ್ಲೆಯ ಟಿಗ್ಡೊ ಗ್ರಾಮದಲ್ಲಿ ಅಪ್ರಾಪ್ತ ವಯಸ್ಕ ಸೇರಿದಂತೆ ನಾಲ್ಕು ಜನರನ್ನು ಭಾರಿ ಮಳೆಯಿಂದ ಉಂಟಾದ ಭೂಕುಸಿತ ಬಲಿ ಪಡೆದುಕೊಂಡಿದೆ. ಮುಂಜಾನೆ 2.30 ರ ಸುಮಾರಿಗೆ ಭೂಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಮುಂಜಾನೆ 2.30 ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅವರ ನಿವಾಸದಲ್ಲೇ ಮಣ್ಣು, ಕೆಸರಿನಿಂದ ಅವರನ್ನು ಜೀವಂತವಾಗಿ ಸಮಾಧಿಯಾದ ಕರುಳಾಜನಕ ದೃಶ್ಯವನ್ನು ನೋಡಿ ನೂರಾರು ಜನ ಕಂಬನಿ ಮಿಡಿದಿದ್ದಾರೆ.

ಮೃತರನ್ನು ತಾನಾ ಮಾರ್ಟಿನ್, ತಾನಾ ಜಾನ್, ತಾನಾ ಯಸುಮ್ ಮತ್ತು ಯಾಬುಂಗ್ ಲಿಂಡಮ್ ಎಂದು ಗುರುತಿಸಲಾಗಿದೆ. ಪಾಪುಮ್ ಪಾರೆ ಜಿಲ್ಲಾಡಳಿತ, ಪೊಲೀಸರು ಮತ್ತು ಸ್ಥಳೀಯರು ಎಲ್ಲಾ ಶವಗಳನ್ನು ಅವಶೇಷಗಳಿಂದ ವಶಪಡಿಸಿಕೊಂಡಿದ್ದಾರೆ. ವಿಶೇಷವೆಂದರೆ, ಎರಡು ತಿಂಗಳೊಳಗೆ ಇದು ಮೂರನೇ ಬಾರಿಗೆ ಭೂಕುಸಿತದಿಂದಾಗಿ ಗಡಿಯಲ್ಲಿರುವ ಜನರು ಸಾವನ್ನಪ್ಪಿದ್ದಾರೆ.

ಜೊತೆಗೆ ಘಟನೆಯಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ 4 ಲಕ್ಷ ಪರಿಹಾರ ಘೋಷಿಸಿದ್ದಾರೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಭೂ ಕುಸಿತವಾಗುತ್ತಿದೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಿಎಂ ಆತಂಕ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights