ಫ್ಯಾಕ್ಟ್‌ಚೆಕ್: ಹೆತ್ತ ಮಕ್ಕಳನ್ನೆ ಮದುವೆಯಾದ ಮುಸ್ಲಿಂ ದಂಪತಿ ಎಂಬುದು ಸಂಪೂರ್ಣ ಸುಳ್ಳು ಸುದ್ದಿ

“ತಂದೆ ತಾಯಿಗಳು ತಮ್ಮ ಮಕ್ಕಳನ್ನೇ ಮದುವೆಯಾಗಿದ್ದಾರೆ. ಇಸ್ಲಾಂ ಇಷ್ಟೊಂದು ಪವಿತ್ರ ನೋಡಿ” ಎಂಬ ಹೇಳಿಕೆಯೊಂದಿಗೆ ಎರಡು ಕೊಲಾಜ್ ಮಾಡಲಾದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಸುದ್ದಿ ಎಲ್ಲಿಯದ್ದು, ಇದರ ಸತ್ಯಾಸತ್ಯತೆ ಏನು ಎಂದು ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್:

ಪೋಟೋ-1

ಪೋಸ್ಟ್‌ನಲ್ಲಿ ಪ್ರತಿಪಾದಿಸಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಲಾಗಿದ್ದು ಎರಡು ಫೋಟೋ ಬೇರೆ ಬೇರೆ ಎಂದು ತಿಳಿದು ಬಂದಿದೆ. ಎಡ ಭಾಗದಲ್ಲಿರುವ ಫೋಟೋ ಕನಿಷ್ಠ 2016 ರಿಂದಲೂ  ಅಂತರ್ಜಾಲದಲ್ಲಿ ಲಭ್ಯವಿರುವುದಾಗಿ ತಿಳಿದು ಬಂದಿದೆ. ತಂದೆ ಮತ್ತು ಮಗಳು ಒಂದೇ ಬಾರಿಗೆ ಕುರಾನ್ ಅಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಲಾಗಿದೆ ಎಂದು ವಿವರಣೆಯನ್ನು ನೀಡಲಾಗಿದೆ. ಹಫೀಜ್-ಎ-ಕುರಾನ್ ಪೂರ್ಣಗೊಳಿಸಿದ್ದಾರೆ ಎಂದರೆ ಮುಸ್ಲಿಂ ಸಮುದಾಯದಲ್ಲಿ ಹೆಚ್ಚು ಗೌರವಕ್ಕೆ ಅರ್ಹರು ಎಂದರ್ಥ. ಇಲ್ಲಿ ತಂದೆ ಮತ್ತು ಮಗಳು ಇಬ್ಬರು ಒಮ್ಮೆಗೆ ಕುರಾನ್ ಫಠಣವನ್ನು ಮುಗಿಸಿದ್ದ ಕಾರಣಕ್ಕೆ ಅವರನ್ನು ಅಭಿನಂಧಿಸಲಾಗಿದೆ. ಆದರೆ ಪೋಟೋವನ್ನು ತೆಗೆದು ತಪ್ಪು ಹೇಳಿಕೆಗಳೊಂದಿಗೆ ಮುಸ್ಲಿಮರ ಮೇಲೆ ಕೆಟ್ಟದ್ದಾಗಿ ಪೋಸ್ಟ್ ಮಾಡಲಾಗಿದೆ.

ಫೋಟೊ-2

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಎರಡನೇ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ  ಅದೇ ಫೋಟೋವನ್ನು ಹಂಚಿಕೊಂಡಿರುವ ಹಳೆಯ ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದು ಲಭ್ಯವಾಗಿದೆ.  ಈ ಫೋಟೋ ಜನವರಿ 2020 ರಿಂದ ಇಂಟರ್ನೆಟ್‌ನಲ್ಲಿ ಲಭ್ಯವಿದೆ. ಈ ಪೋಸ್ಟ್‌ಗೆ ಸಂಬಂಧಿಸಿದ ವಿವರಣೆಯ ಪ್ರಕಾರ, ಮಗನ ಕುರಾನ್ ಪಠಣ ಸಮಾರಂಭದ ಸಂದರ್ಭದಲ್ಲಿ ತಾಯಿ ಮತ್ತು ಮಗ ಪೋಸ್ ನೀಡುತ್ತಿರುವುದು ಎಂದು ವಿವರಣೆಯಲ್ಲಿದೆ. ಪೋಸ್ಟ್‌ನಲ್ಲಿ ಉರ್ದುವಿನ ವಿವರಣೆಯಲ್ಲಿ ‘ಇಂದು ನನ್ನ ಮಗ ಕುರಾನ್ ಪಠಣವನ್ನು ಪೂರ್ಣಗೊಳಿಸಿದ ದಿನ ಎಂದು ಹೇಳುತ್ತದೆ.

ಇದಲ್ಲದೆ, ಇದೇ ಫೋಟೋವನ್ನು ಒಂದೆರಡು ವರ್ಷಗಳ ಹಿಂದೆ ತನ್ನ ಪತಿ ತೀರಿಕೊಂಡ ನಂತರ ಸೌದಿ ಮಹಿಳೆ ತನ್ನ ಮಗನನ್ನು ಮದುವೆಯಾಗಿದ್ದಾಳೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿತ್ತು.  ಆದರೆ ಇತ್ತೀಚಿನ ಪೋಸ್ಟ್‌ನಲ್ಲಿಎರಡು ಫೋಟೋಗಳನ್ನು ಕೊಲಾಜ್ ಮಾಡಿ, ಪತಿಯು ತನ್ನ ಮಗಳನ್ನು ಮದುವೆಯಾಗಿದ್ದಕ್ಕೆ ಪ್ರತೀಕಾರವಾಗಿ ಮಹಿಳೆ ತನ್ನ ಸ್ವಂತ ಮಗನನ್ನು ಮದುವೆಯಾಗಿದ್ದಾಳೆ ಎಂದು ತಪ್ಪಾಗಿ ಮುಸ್ಲಿಂ ಸಮುದಾಯದ ಮೇಲೆ ಕೆಟ್ಟ ಅಭಿಪ್ರಾಯ ಮೂಡುವಂತೆ ಹೇಳಿಕೆಯನ್ನು ನೀಡಿ ಪೋಸ್ಟ್ ಮಾಡಲಾಗಿದೆ.

ಹಾಗಾಗಿ ಪೋಟೋಗೆ ಸಂಬಂಧಿಸಿದಂತೆ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ಸುಳ್ಳು. ಅಂತರ್ಜಾಲದಲ್ಲಿ ಈ ಫೋಟೋಗಳು ತನ್ನ ಟೈಮ್‌ಲೈನ್‌ನ ಹೇಳಿಕೆಯಲ್ಲಿ (ಚಿತ್ರಗಳು 1 ಮತ್ತು 2) ಈ ಚಿತ್ರಗಳು ಕುರಾನ್ ಪಠಣ ಸಮಾರಂಭಕ್ಕೆ ಸಂಬಂಧಿಸಿವೆ ಆದರೆ ಎರಡೂ ಫೋಟೋಗಳು ಬೇರೆ ಬೇರೆ ಯಾಗಿದೆ. ಪೋಸ್ಟ್‌ನಲ್ಲಿ ಪ್ರತಿಪಾದಿಸಿರುವಂತೆ ಅವರಿಬ್ಬರು ಗಂಡ ಹೆಂಡತಿಯೇ ಅಲ್ಲ.

         

ಸಾಮಾನ್ಯವಾಗಿ, ಹಫೀಜ್ ಕುರಾನ್ ಅನ್ನು ಕಂಠಪಾಠ ಮಾಡುವ ಜನರನ್ನು ‘ಕುರಾನ್ ಅನ್ನು ಹೃದಯದಿಂದ ತಿಳಿದಿರುವ ವ್ಯಕ್ತಿ ಎನ್ನುವ ಗೌರವವನ್ನು ನೀಡುತ್ತಾರೆ.  ಹಫೀಜ್-ಎ-ಕುರಾನ್ ಮುಸ್ಲಿಂ ಸಮುದಾಯದಲ್ಲಿ ಜನಪ್ರಿಯ ಧಾರ್ಮಿಕ ಆಚರಣೆಯಾಗಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈವೆಂಟ್‌ಗೆ ಸಂಬಂಧಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಇವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕುರಾನ್ ಪಠಣ ಸಮಾರಂಭಕ್ಕೆ ಸಂಬಂಧಿಸಿದ ಚಿತ್ರಗಳನ್ನು ಮುಸ್ಲಿಂ ಪೋಷಕರು ತಮ್ಮ ಸ್ವಂತ ಮಕ್ಕಳನ್ನು ಮದುವೆಯಾಗುತ್ತಿದ್ದಾರೆ ಎಂದು ಸುಳ್ಳು ಹೇಳಲಾಗಿದೆ.

ಕೃಪೆ:ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕೊರೊನಾ ಸಾವುಗಳ ಕುರಿತು ರಾಹುಲ್ ಗಾಂಧಿ ಬಗ್ಗೆ ಸುಳ್ಳು ಹೇಳಿದ ಪೋಸ್ಟ್ ಕಾರ್ಡ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights