ಹೈಟಿಯಲ್ಲಿ ತೀವ್ರ ಭೂಕಂಪನ : ಸಾವಿನ ಸಂಖ್ಯೆ 2,248ಕ್ಕೇರಿಕೆ..!

ಇಸ್ಪೋನಿಯೋಲಾ ದ್ವೀಪದಲ್ಲಿರುವ ಹೈಟಿಯಲ್ಲಿ ಭೂಕಂಪನ ಸಂಭವಿಸಿ 20 ದಿನಗಳು ಕಳೆದರೂ ಸಾವನ್ನಪ್ಪಿದವರ ಸಂಖ್ಯೆ 2,248 ಕ್ಕೆ ಏರಿಕೆಯಾಗಿದ್ದು, 329 ಜನರು ಇನ್ನೂ ಪತ್ತೆಯಾಗಿಲ್ಲ ಎಂದು ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿ ಸೋಮವಾರ ಹೇಳಿದೆ.

ಆಗಸ್ಟ್ 14 ಭೂಕಂಪ ಸಂಭವಿಸಿದ್ದು ಸಾವಿನ ಸಂಖ್ಯೆ 2,248 ಕ್ಕೆ ಏರಿಕೆಯಾಗಿದೆ. 12,763 ಜನರು ಗಾಯಗೊಂಡಿದ್ದು ಇನ್ನೂ 329 ಜನ ಕಾಣೆಯಾಗಿದ್ದರು.

ಹೈಟಿಯಲ್ಲಿ ಆಗಸ್ಟ್ 14 ರಂದು 7.2 ತೀವ್ರತೆಯ ಭೂಕಂಪ ಸಂಭವಿಸಿ ಚಂಡಮಾರುತ ಉಂಟಾಯಿತು. ಅಂದಿನಿಂದ ಇಲ್ಲಿ 900 ಭೂಕಂಪಗಳನ್ನು ನೋಂದಾಯಿಸಲಾಗಿದೆ. ಅವುಗಳಲ್ಲಿ 400 ಭೂಕಂಪನಗಳು 3 ತೀವ್ರತೆಯಿಂದ ಸಂಭವಿಸಿದ್ದು 25,000 ಜನರು ಇನ್ನೂ ಮನೆಗೆ ಮರಳಲು ಸಾಧ್ಯವಾಗಿಲ್ಲ. 53,000 ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಮತ್ತು 83,000 ಕ್ಕೂ ಹೆಚ್ಚು ಜನರ ಮನೆ ಮಟಗಳು ನೈಸರ್ಗಿಕ ವಿಕೋಪದಿಂದ ಹಾನಿಗೊಳಗಾಗಿವೆ.

Haiti saaksha tv

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights