ಪಾಕಿಸ್ತಾನ ಪರ ಘೋಷಣೆ: ಗುರುಗ್ರಾಮ ನಿವಾಸಿ ವಿರುದ್ಧ ಪ್ರಕರಣ ದಾಖಲು; ಆತ ಖಿನ್ನತೆಗೆ ಒಳಗಾಗಿದ್ದಾನೆ ಎಂದ ಪತ್ನಿ!

ಗುರುಗ್ರಾಮದ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ನಿಂತು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಅನ್ವರ್ ಸೈಯದ್ ಫೈಜುಲ್ಲಾ ಹಶ್ಮಿ ಎಂಬಾತನ ವಿರುದ್ದ ಹರಿಯಾಣ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಆತ ಪಾಕಿಸ್ಥಾನ ಜಿಂದಾಬಾದ್ ಎಂದು ಅಪಾರ್ಟ್‌ಮೆಂಟ್‌ನಲ್ಲಿ ಘೋಷಣೆ ಕೂಗಿದ್ದಾನೆ ಎಂದು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅನ್ವರ್ ಸೈಯದ್ ಫೈಜುಲ್ಲಾ ಹಶ್ಮಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 153 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ತಲೆಮರೆಸಿಕೊಂಡಿದ್ದಾನೆ ಮತ್ತು ಆತನನ್ನು ಹುಡುಕಲಾಗುತ್ತಿದೆ” ಎಂದು ರಾಜೇಂದ್ರ ಪಾರ್ಕ್ ಪೊಲೀಸ್ ಠಾಣೆಯ ಪೊಲೀಸರು ಹೇಳಿದ್ದಾರೆ.

ಶನಿವಾರ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಗುರುಗ್ರಾಮದ ವಸತಿ ಸಮುಚ್ಚದಲ್ಲಿ ಆರೋಪಿಯು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲು ಮಗುವನ್ನು ಒತ್ತಾಯಿಸುತ್ತಿರುವುದು ಕಂಡುಬಂದಿದೆ.

Read Also: ಮುಸ್ಲಿಂ ವಿರೋಧಿ ಘೋಷಣೆ ಕೂಗಿದ್ದ ಹಿಂದೂ ರಕ್ಷಣಾ ದಳದ ಪಿಂಕಿ ಚೌದರಿ ಪೊಲೀಸರಿಗೆ ಶರಣಾಗತಿ!

ಗುರುಗ್ರಾಮದ “ಇಂಪೀರಿಯಲ್ ಗಾರ್ಡನ್ಸ್ ಸೊಸೈಟಿ” ನಿವಾಸಿಗಳು ದೂರು ನೀಡಿದ್ದಾರೆ. ಬಾಲ್ಕನಿಯಲ್ಲಿ “ಪಾಕಿಸ್ತಾನ ಜಿಂದಾಬಾದ್” ಘೋಷಣೆಗಳನ್ನು ಕೂಗುವ ವಿಡಿಯೋವನ್ನು ಕೂಡ ನಿವಾಸಿಗಳು ನೀಡಿದ್ದಾರೆ ಎಂದು ಗುರುಗ್ರಾಮದ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ) ಧಿರಾಜ್ ಸೆಟಿಯಾ ಅವರು ಎಎನ್‌ಐಗೆ ಭಾನುವಾರ ತಿಳಿಸಿದ್ದಾರೆ.

ಏತನ್ಮಧ್ಯೆ, ಆ ವ್ಯಕ್ತಿಯ ಪತ್ನಿ ನೆರೆಹೊರೆಯವರ ವಿರುದ್ಧದ ದೂರು ನೀಡಿದ್ದಾರೆ. ಅದರಲ್ಲಿ ತನ್ನ ಪತಿ ಖಿನ್ನತೆಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

“ಅಪಾರ್ಟ್‌ಮೆಂಟ್‌ನ ನಿವಾಸಿಗಳ ವಿರುದ್ಧ ಆರೋಪಿಯ ಪತ್ನಿ ಧನ್ಕೋಟ್ ಕಿರುಕುಳದ ದೂರು ನೀಡಿದ್ದಾರೆ. ಅದರಲ್ಲಿ ಸಮುಚ್ಚದ ಜನರು ಆಕೆಯ ಮನೆಗೆ ಬಂದು ಅನಗತ್ಯವಾಗಿ ಬೆದರಿಕೆ ಹಾಕಲು ಆರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ತನ್ನ ಆರೋಪಿ ಪತಿಯು ಖಿನ್ನತೆಗೆ ಒಳಗಾಗಿದ್ದಾನೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಆಕೆ ಹೇಳಿದ್ದಾರೆ” ಎಂದು ಡಿಸಿಪಿ ಹೇಳಿದ್ದಾರೆ.

“ಅನ್ವರ್ ನಿಜವಾಗಿಯೂ ಖಿನ್ನತೆಗೆ ಬಲಿಯಾಗಿದ್ದಾನೋ ಇಲ್ಲವೋ ಎಂಬ ಬಗ್ಗೆಯೂ ನಾವು ತನಿಖೆ ನಡೆಸುತ್ತಿದ್ದೇವೆ. ಅವರ ವೈದ್ಯಕೀಯ ದಾಖಲೆಗಳನ್ನು ಸಹ ಪರಿಶೀಲಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

Read Also: ಕೋವಿಡ್ ನಿಯಮ ಉಲ್ಲಂಘನೆ: ಬೆಳಗಾವಿಯಲ್ಲಿ ಓವೈಸಿ ಮತ್ತು 300 ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights