ಮುಸ್ಲಿಂ ವಿರೋಧಿ ಘೋಷಣೆ ಕೂಗಿದ್ದ ಹಿಂದೂ ರಕ್ಷಣಾ ದಳದ ಪಿಂಕಿ ಚೌದರಿ ಪೊಲೀಸರಿಗೆ ಶರಣಾಗತಿ!

ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ರಕ್ಷಣಾ ದಳದ ಮುಖ್ಯಸ್ಥ ಭೂಪಿಂದರ್ ತೋಮರ್ ಅಲಿಯಾಸ್ ಪಿಂಕಿ ಚೌಧರಿ ಮಂಗಳವಾರ ದೆಹಲಿ ಪೊಲೀಸರ ಮುಂದೆ ಶರಣಾಗಿದ್ದಾರೆ.

ಆಗಸ್ಟ್‌ 08 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಪಿಂಕಿ ಚೌಧರಿ ವಿರುದ್ದ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಅಂದಿನಿಂದ ತಲೆ ಮರೆಸಿಕೊಂಡಿದ್ದ ಪಿಂಕಿ ಚೌಧರಿ, ಮಂಗಳವಾರ ತನ್ನ ಬೆಂಬಲಿಗರ ಹೆಗಲ ಮೇಲೆ ಕುಳಿತು, ಜೈ ಶ್ರೀ ರಾಮ್ ಘೋಷಣೆಗಳ ಜೊತೆಗೆ ಮೆರವಣಿಗೆಯಲ್ಲಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ದೆಹಲಿ ಪೊಲೀಸರಿಗೆ ಶರಣಾಗುವುದಾಗಿ ಆರೋಪಿ ಪಿಂಕಿ ಚೌಧರಿ, ವಿಡಿಯೊವನ್ನು ಸೋಮವಾರ ಬಿಡುಗಡೆ ಮಾಡಿದರು. ವಿಡಿಯೊದಲ್ಲಿ ತಾನು ಮತ್ತು ತನ್ನ ಬೆಂಬಲಿಗರು ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಅಮಿತ್ ಶಾ ಭೇಟಿ ವೇಳೆ ಜಾಹೀರಾತಿಗಾಗಿ 89 ಲಕ್ಷ ಖರ್ಚು ಮಾಡಿದ ಸರ್ಕಾರ!

“ಜಂತರ್ ಮಂತರ್‌ನಲ್ಲಿ ನಾನು ಅಥವಾ ನನ್ನ ಸಂಘಟನೆಯ ಯಾವುದೇ ಕಾರ್ಯಕರ್ತನು ಯಾವುದೇ ತಪ್ಪು ಮಾಡಿಲ್ಲ ಎಂದು ನಾನು ದೃಢವಾಗಿ ಹೇಳುತ್ತೇನೆ. ನಾನು ನ್ಯಾಯಾಲಯವನ್ನು ಗೌರವಿಸುತ್ತೇನೆ. ನಾಳೆ, ಆಗಸ್ಟ್ 31 ರಂದು, ಮಧ್ಯಾಹ್ನ 12 ಗಂಟೆಯ ಸುಮಾರಿಗೆ ನನ್ನನ್ನು ಕನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಶರಣಾಗುತ್ತೇನೆ ಮತ್ತು ತನಿಖೆಯ ಸಮಯದಲ್ಲಿ ಪೊಲೀಸರೊಂದಿಗೆ ಸಹಕರಿಸುತ್ತೇನೆ ” ಎಂದು ಪಿಂಕಿ ವಿಡಿಯೊದಲ್ಲಿ ಹೇಳಿದ್ದರು.

ದೆಹಲಿಯ ಜಂತರ್ ಮಂತರ್‌ನಲ್ಲಿ ಭಾನುವಾರ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ ಪ್ರಕರಣ ಮತ್ತು ಕೊರೊನಾ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಹಲವರನ್ನು ಬಂಧಿಸಲಾಗಿದೆ.

“ಹಿಂದೂಸ್ತಾನ್ ಮೇ ರೆಹನಾ ಹೋಗಾ, ಜೈ ಶ್ರೀ ರಾಮ್ ಕೆಹನಾ ಹೋಗಾ (ಭಾರತದಲ್ಲಿ ಉಳಿಯಬೇಕಿದ್ದರೇ, ಜೈ ಶ್ರೀ ರಾಮ್ ಎಂದು ಹೇಳಬೇಕು)” ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಸಂಸತ್ತಿನಿಂದ ಕೇವಲ ಒಂದು ಕಿಮೀ ದೂರದಲ್ಲಿರುವ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಜನರು ಇಂತಹ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದರು.

ಉತ್ತಮ್ ಉಪಾಧ್ಯಾಯ, ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ, ಪ್ರೀತ್ ಸಿಂಗ್, ದೀಪಕ್ ಸಿಂಗ್, ದೀಪಕ್ ಕುಮಾರ್, ವಿನೋದ್ ಶರ್ಮಾ, ವಿನಿತ್ ಬಾಜ್‌ಪೈ ಮತ್ತು ಸುಶೀಲ್ ತಿವಾರಿ ಸೇರಿದಂತೆ ಇತರರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಜೆಡಿಎಸ್‌ ಮುಳುಗುತ್ತಿರುವ ಪಕ್ಷ; ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ: ಅರುಣ್‌ ಸಿಂಗ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights