ಚಾಕಲೇಟ್ ಆಮಿಷವೊಡ್ಡಿ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ..!
ದೆಹಲಿಯಲ್ಲಿ ಕಾರ್ಖಾನೆಯ ಕೆಲಸಗಾರನಿಂದ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು ಬಾಲಕಿ ಕುಟುಂಬದಿಂದ ಆರೋಪಿಯನ್ನು ಥಳಿಸಲಾಗಿದೆ.
ದೆಹಲಿಯ ಬಾಪ ನಗರ ಪ್ರದೇಶದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 25 ವರ್ಷದ ವ್ಯಕ್ತಿಯನ್ನು ಜನರು ಥಳಿಸಿದ್ದಾರೆ. ಕಳೆದ ವಾರ ಮಗು ತನ್ನ ಮನೆಯ ಬಳಿ ಇರುವ ಜೀನ್ಸ್ ತಯಾರಿಕಾ ಕಾರ್ಖಾನೆಯ ಬಳಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಕಾರ್ಖಾನೆಯ ಕೆಲಸಗಾರನಾದ ಆರೋಪಿಯು ಆಕೆಯನ್ನು ಸಿಹಿತಿಂಡಿಗಳನ್ನು ಕೊಡಿಸುವುದಾಗಿ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಆಕೆ ಮನೆಗೆ ಹೋದಾಗ ಮಗು ತನ್ನ ಹೆತ್ತವರಿಗೆ ಘಟನೆಯ ಬಗ್ಗೆ ತಿಳಿಸಿದೆ. ಪೋಷಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೋಪಗೊಂಡ ಬಾಲಕಿ ಕುಟುಂಬ ಸದಸ್ಯರು ಮತ್ತು ಕೆಲವು ಸ್ಥಳೀಯರು ಜೀನ್ಸ್ ಕಾರ್ಖಾನೆಗೆ ಬಂದು ಆರೋಪಿಯನ್ನು ಥಳಿಸಿದ್ದಾರೆ.
ಸದ್ಯ ಾರೋಪಿಯನ್ನು ಬಂಧಿಸಲಾಗಿದ್ದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.