ನಮ್ಮ ಗೋಳು ನಿಮಗೆ ಕೇಳಿಸುತ್ತಿಲ್ಲವೇ? ಸರ್ಕಾರದ ವಿರುದ್ಧ ಹೊರ ರಾಜ್ಯಗಳಲ್ಲಿರುವ ಕನ್ನಡಿಗರ ಆಕ್ರೋಶ

ಕೊರೋನಾ ವೈರಸ್​ ಹರಡುವೆಯನ್ನು ತಡೆಯುವುದಕ್ಕಾಗಿ ಲಾಕ್​ಡೌನ್​ ವಿಸ್ತರಣೆಯಾಗುತ್ತಲೇ ಇದೆ. ಯಾವ ಮುನ್ಸೂಚನೆಯೂ ಇಲ್ಲದೆ ಜಾರಿಯಾದ ಲಾಕ್‌ಡೌನ್‌ನಿಂದಾಗಿ ತಮ್ಮೂರುಗಳಿಗೆ ಹಿಂದುರುಗಲಾಗದೇ ನೆರೆ ರಾಜ್ಯದಲ್ಲಿ ಸಿಲುಕಿರುವ ಕನ್ನಡಿಗರು ಆಕ್ರೋಶಗೊಂಡಿದ್ದಾರೆ.

ರಾಜ್ಯಕ್ಕೆ ಬರಲು ಅನುಮತಿ ಕೋರಿ 56 ಸಾವಿರ ಜನರು ತಮ್ಮ ಜಿಲ್ಲೆಗಳ ಜಿಲ್ಲೆಯ ಡಿಸಿ ಮತ್ತು ರಾಜ್ಯದ ನೊಡಲ್ ಅಧಿಕಾರಿಗಳ ಬಳಿ ಕನ್ನಡಿಗರು ನೊಂದಾಯಿಸಿಕೊಂಡಿದ್ದಾರೆ.

ಶಿಕ್ಷಣ ಪಡೆಯಲು, ಉದ್ಯೋಗ ಹರಸಿಕೊಂಡು, ಪ್ರವಾಸ ಹಾಗೂ ಕೆಲಸದ ನಿಮಿತ್ತ ಇತರೆ ರಾಜ್ಯಕ್ಕೆ ಸಾಕಷ್ಟು ಮಂದಿ ತೆರಳಿದ್ದರು. ಇವರಲ್ಲಿ 56,622 ಜನರು ರಾಜ್ಯಕ್ಕೆ ಬರಲು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 4,068 ಜನರಿಗೆ ರಾಜ್ಯಕ್ಕೆ ಬರಲು ಅನುಮತಿ ಸಿಕ್ಕಿದೆ. ಇನ್ನುಳಿದಂತೆ ಡಿಸಿಗಳ ಬಳಿ 45,326 ಹಾಗೂ ನೊಡಲ್ ಅಧಿಕಾರಿಗಳ ಬಳಿ 6,749 ಸೇರಿ ಒಟ್ಟು 52,075 ಅರ್ಜಿ ಬಾಕಿ ಉಳಿದಿವೆ.

ಕೆಲಸದ ನಿಮಿತ್ತ ಗುರುಗ್ರಾಮಕ್ಕೆ ತೆರಳಿ ಅಲ್ಲಿಯೇ ಸಿಲುಕಿರುವ ಸುದರ್ಶನ್​ ಎಂಬುವವರು, “ಈ ಭಾಗದಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿದೆ. ಹೀಗಾಗಿ ನಮಗೆ ನಮ್ಮ ರಾಜ್ಯಕ್ಕೆ ತೆರಳಬೇಕು. ಈ ಬಗ್ಗೆ ಸದಾನಂದ ಗೌಡರಿಗೆ ಕೇಳಿದರೆ, 1 ಸಾವಿರ ಜನರು ಆದ ಹೊರತಾಗಿಯೂ ರೈಲಿನ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಮತ್ತೋರ್ವ ರಾಜಕಾರಣಿ ಬಸ್ಸಿನ ವ್ಯವಸ್ಥೆ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಾರೆ. ಯಾರಿಂದಲೂ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲ,” ಎಂದು ಬೇಸರ ಹೊರಹಾಕುತ್ತಾರೆ.

“ನಾವು ಕರ್ನಾಟಕಕ್ಕೆ ಬಂದ ನಂತರ 14 ದಿನ ಕ್ವಾರಂಟೈನ್​ನಲ್ಲಿಯೇ ಇರುತ್ತೇವೆ. ಎಲ್ಲೆಂದರಲ್ಲಿ ಅಡ್ಡಾಡುವುದಿಲ್ಲ. ಹೀಗಾಗಿ, ನಮ್ಮ ರಾಜ್ಯಕ್ಕೆ ತೆರಳಲು ನಮಗೆ ಅವಕಾಶ ನೀಡಿ,” ಎಂದು ಅವರು ಕೋರಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights