FACT CHECK | ವಿಶ್ವದ ಅತ್ಯುತ್ತಮ ನ್ಯಾಯದ ಪುಸ್ತಕ ‘ಕುರಾನ್’ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಘೋಷಿಸಿದೆ ಎಂಬುದು ಸುಳ್ಳು
ಹಾರ್ವರ್ಡ್ ವಿಶ್ವವಿದ್ಯಾಲಯವು ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ಅನ್ನು “ನ್ಯಾಯಕ್ಕಾಗಿ ಉತ್ತಮ ಗ್ರಂಥ” ಎಂದು ಘೋಷಿಸಿದೆ ಎಂಬ ಪೋಸ್ಟ್ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಸುದ್ದಿಯನ್ನು ಹಲವು ವೆಬ್ಸೈಟ್ಗಳು, ಫೇಸ್ಬುಕ್ ಪೋಸ್ಟ್ಗಳು ಮತ್ತು ಎಕ್ಸ್ನಂತಹ ಪ್ಲಾಟ್ಫಾರ್ಮ್ಗಳಲ್ಲಿ ಹಂಚಿಕೊಳ್ಳಲಾಗಿದೆ. ಕೆಲವು ಪೋಸ್ಟ್ಗಳು ಹಾರ್ವರ್ಡ್ನ ಕಾನೂನು ಶಾಲೆಯ ಗ್ರಂಥಾಲಯದ ಪ್ರವೇಶದ್ವಾರದಲ್ಲಿ ಕುರಾನ್ನ ಒಂದು ಶ್ಲೋಕವನ್ನು ಪ್ರದರ್ಶಿಸಲಾಗಿದೆ ಎಂದು ತಿಳಿಸಿದ್ದು, ಇದನ್ನು “ಹಾರ್ವರ್ಡ್ನಿಂದ ಕುರಾನ್ಗೆ ಶ್ರೇಯಾಂಕ” ಎಂದು ಬಿಂಬಿಸಲಾಗಿದೆ.

ಈ ಸುದ್ದಿಯು ಜನಸಾಮಾನ್ಯರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ, ವಿಶೇಷವಾಗಿ ಧಾರ್ಮಿಕ ಸಮುದಾಯಗಳಲ್ಲಿ. ಕೆಲವರು ಇದನ್ನು ಕುರಾನ್ನ ಶ್ರೇಷ್ಠತೆಗೆ ಸಾಕ್ಷಿಯೆಂದು ಭಾವಿಸಿದ್ದಾರೆ, ಆದರೆ ಇತರರು ಈ ವಾದದ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನಿಸಿದ್ದಾರೆ. ಹೀಗಾಗಿ ಈ ವಿಚಾರ ಈಗ ಸಾರ್ವಜನಿಕ ವಲಯದಲ್ಲಿ ಹಲವು ರೀತಿಯಾದ ಗೊಂದಲವನ್ನು ಕೂಡ ಮೂಡಿಸಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲಿಸಲು ಪೋಸ್ಟ್ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಸರ್ಚ್ ಮಾಡಿದಾಗ, ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಯಾವುದೇ ಪತ್ರಿಕಾ ಪ್ರಕಟಣೆಗಳು ಅಥವಾ ಹಾರ್ವರ್ಡ್ ವಿಶ್ವವಿದ್ಯಾಲಯವು ಕುರಾನ್ ಅನ್ನು ವಿಶ್ವದ ಅತ್ಯುತ್ತಮ ನ್ಯಾಯದ ಪುಸ್ತಕವೆಂದು ಘೋಷಿಸಿದ ಯಾವುದೇ ಸುದ್ದಿ ವರದಿಗಳು ಲಭ್ಯವಾಗಿಲ್ಲ.

ಜುಲೈ 1, 2012 ರಂದು ಪ್ರಕಟವಾದ ಹಾರ್ವರ್ಡ್ ಕಾನೂನು ಬುಲೆಟಿನ್ ಪ್ರಕಾರ , ‘ವರ್ಡ್ಸ್ ಆಫ್ ಜಸ್ಟೀಸ್’ ಕಾನೂನು ಮತ್ತು ನ್ಯಾಯದ ಬಗ್ಗೆ 33 ಉಲ್ಲೇಖಗಳನ್ನು ಒಳಗೊಂಡಿರುವ ಒಂದು ಗ್ಯಾಲರಿಯಾಗಿದೆ. ‘ಈ ಉಲ್ಲೇಖಗಳು 600 BCE ಮತ್ತು ಪ್ರಸ್ತುತದ ನಡುವಿನ ಅವಧಿಯನ್ನು ವ್ಯಾಪಿಸಿವೆ’ ಎಂದು ಬುಲೆಟಿನ್ ಹೇಳಿದೆ.

ಗೋಡೆಯ ಮೇಲೆ ಬರೆಯಲಾದ ಕುರಾನ್ ಉಲ್ಲೇಖದ ಒಂದು ನೋಟವನ್ನು ಹಾರ್ವರ್ಡ್ ಕಾನೂನು ಜುಲೈ 2023 ರಲ್ಲಿ ಮಾಡಿದ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಕಾಣಬಹುದು. ಈ 33 ಉಲ್ಲೇಖಗಳನ್ನು ಹಾರ್ವರ್ಡ್ ಕಾನೂನು ಶಾಲೆಯಲ್ಲಿರುವ ‘ ಮಿಲ್ಸ್ಟೈನ್ ಈಸ್ಟ್ ಇನ್ ದಿ ವಾಸರ್ಸ್ಟೈನ್ ಹಾಲ್, ಕ್ಯಾಸ್ಪರ್ಸನ್ ಸ್ಟೂಡೆಂಟ್ ಸೆಂಟರ್, ಕ್ಲಿನಿಕಲ್ ವಿಂಗ್ ಬಿಲ್ಡಿಂಗ್ ‘ ನ ಹೊರಗಿನ ಗೋಡೆಗಳ ಮೇಲೆ ಕೈಯಿಂದ ಕೆತ್ತಲಾಗಿದೆ. ಆದರೆ ಇಲ್ಲಿ ಎಲ್ಲಿಯೂ “ಕುರಾನ್ ವಿಶ್ವದ ಅತ್ಯತ್ತಮ ನ್ಯಾಯದ ಪುಸ್ತಕ ಎಂದು ಉಲ್ಲೇಖವಾಗಿರುವುದು ಕಂಡು ಬಂದಿಲ್ಲ.”

ಒಟ್ಟಾರೆಯಾಗಿ ಹೇಳುವುದಾದರೆ, ಹಾರ್ವರ್ಡ್ ವಿಶ್ವವಿದ್ಯಾಲಯವು ಕುರಾನ್ ಅನ್ನು “ನ್ಯಾಯಕ್ಕಾಗಿ ಉತ್ತಮ ಗ್ರಂಥ” ಎಂದು ಘೋಷಿಸಿದೆ ಎಂಬುದು ಸುಳ್ಳು. ಹಾರ್ವರ್ಡ್ ಕಾನೂನು ಶಾಲೆಯ “ವರ್ಡ್ಸ್ ಆಫ್ ಜಸ್ಟಿಸ್” ಪ್ರದರ್ಶನದಲ್ಲಿ ಕುರಾನ್ನ ಒಂದು ಶ್ಲೋಕವನ್ನು ಇತರ ಧಾರ್ಮಿಕ ಮತ್ತು ಐತಿಹಾಸಿಕ ಮೂಲಗಳ ಜೊತೆಗೆ ಪ್ರದರ್ಶಿಸಲಾಗಿತ್ತು, ಆದರೆ ಯಾವುದೇ ಗ್ರಂಥಕ್ಕೆ ಶ್ರೇಯಾಂಕ ನೀಡಿರಲಿಲ್ಲ.ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ ಎಂದು ಫ್ಯಾಕ್ಟ್ಲಿ ವರದಿ ಮಾಡಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಚೀನಾದಲ್ಲಿ ನಡೆದಿರುವ ಹೊಸ ವರ್ಷಾಚರಣೆಯ ಹಳೆಯ ದೃಶ್ಯಗಳನ್ನು RCB ಅಭಿಮಾನಿಗಳ ಸಂಭ್ರಮಾಚರಣೆ ಎಂದು ತಪ್ಪಾಗಿ ಹಂಚಿಕೆ

