ನಟಿ ರಶ್ಮಿಕಾ ಮಂದಣ್ಣ ಅವರಿಗೆ ಮನೆಯಲ್ಲಿ ಹೀಗೆ ಕರೆಯುತ್ತಾರಂತೆ….

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರು ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ..? ಮೊದಲ ಸಿನಿಮಾದಲ್ಲಿ ಅಭಿಮಾನಿಗಳ ಮನ ಗೆದ್ದು ಟಾಪ್ ಹಿರೋಯಿನ್ ಲಿಸ್ಟ್ ಗೆ ಸೇರಿಕೊಂಡ ನಟಿ ರಶ್ಮಿಕಾ. ಕಿರಿಕ್ ಹುಡುಗಿಯಾಗಿ ಚಂದನವನದಲ್ಲಿ ಮಿಂಚಿದ ರಶ್ಮಿಕಾಗೇ ಒಂದಲ್ಲಾ ಎರಡಲ್ಲಾ ನಾನಾ ಹೆಸರುಗಳಿವೆ. ಮತ್ತೆ ರಶ್ಮಿಕಾ ಮಂದಣ್ಣ ಯಾವುದು ಅಂದ ಕನ್ಫ್ಯೂಸ್ ಆಗಬೇಡಿ. ಇದು ಅವರ ನಿಜವಾದ ಹೆಸರೇ ಆದ್ರೆ ಅವರನ್ನ ಬೇರೆ ಬೇರೆ ಹೆಸರಿನಿಂದ ಕರೆಯುವುದುಂಟು.

ಹೌದು… ರಶ್ಮಿಕಾ ಅವರ ಪಕ್ಕಾ ಅಭಿಮಾನಿಗಳು ಒಂದೊಂದು ಹೆಸರಿನಿಂದ ಅವರನ್ನು ಕರೆಯುತ್ತಾರೆ. ಸಿನಿಮಾ ಕ್ಷೇತ್ರದಲ್ಲಿ ಅವರಿಗೆ ಮತ್ತೊಂದು ಹೆಸರಿದೆ. ಇನ್ನೂ ಮನೆಯಲ್ಲಿ ಒಂದು ಹೆಸರಿನಿಂದ ಕರೆದರೆ ಅವರಿಗಿರೋ ಪೆಟ್ ನೇಮೇ ಬೇರೆ. ಹಾಗಾದ್ರೆ ಅದು ಯಾವುದು ಅಂತ ಯೋಚನೆ ಮಾಡ್ತಾಯಿದ್ದೀರಾ..?

ಇತ್ತೀಚೆಗೆ ಕೊಡಗಿನ ಸಾರಿಯಲ್ಲಿರುವ ಫೋಟೋಗಳನ್ನು ರಶ್ಮಿಕಾ ಅವರು ತಮ್ಮ ಇನ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಇದೇ ವೇಳೆ ಅವರ ಪೆಟ್ ನೇಮ್ ಕೂಡ ಬಹಿರಂಗಗೊಂಡಿದೆ. ರಶ್ಮಿಕಾ ಅವರನ್ನು ‘ಮೋನಿ‘ ಎಂಬ ಕರೆಯಲಾಗುತ್ತದೆ. ಈ  ಹೆಸರು ಅಭಿಮಾನಿಗಳಿಗೆ ಗೊತ್ತಾಗುತ್ತಿದ್ದಂತೆ ತಮ್ಮ ಫೋಟೋಗಳಿಗೂ ಮೋನಿ ಎಂದು ಹೆಸರು ಹಾಕಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಪ್ರೀತಿ ಪಾತ್ರರಿಗೆ ‘ ಮೋನಿ’ ಎಂದು ಹೆಸರಿಟ್ಟಿದ್ದಾರೆ. ರಶ್ಮಿಕಾ ಅವರ ಫೋಟೋಗೆ ಅಭಿಮಾನಿ ಮೋನಿ ಎಂದು ಕಾಮೆಂಟ್​ ಹಾಕುತ್ತಿದ್ದಾರೆ.

ಲಾಕ್ ಡೌನ್ ನಿಂದಾಗಿ ಸದ್ಯ ರಶ್ಮಿಕಾ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದು, ಮೊನ್ನಯಷ್ಟೇ ತಮ್ಮ ಸಹೋದರಿಯೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
ಲಾಕ್​ಡೌನ್​ ಬಳಿಕ ರಶ್ಮಿಕಾ ಮಂದಣ್ಣ ನಟನೆಯ ಪಿಗರು ಸಿನಿಮಾ ತೆರೆ ಕಾಣಲಿದೆ. ಇದರ ಜೊತೆಗೆ ತೆಲುಗಿನಲ್ಲಿ ಅಲ್ಲು ಅರ್ಜುನ್​ ಜೊತೆ ಪುಷ್ಟ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಸುಲ್ತಾನ್​ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights