ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ; ಬಿಜೆಪಿ ಸರ್ಕಾರಕ್ಕೆ ಮುಖಭಂಗ!

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ವಿಚಾರದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಶರತ್ ಅವರನ್ನು ಮೈಸೂರಿನ ಡಿಸಿಯನ್ನಾಗಿ ಮರು ನೇಮಕ ಮಾಡುವಂತೆ ಆಡಳಿತಾತ್ಮಕ ನ್ಯಾಯಮಂಡಳಿ ಸರಕಾರಕ್ಕೆ ಮೌಖಿಕ ಆದೇಶ ನೀಡಿದೆ ಎಂದು ಹೇಳಲಾಗಿದೆ.

ವರ್ಗಾವಣೆ ವಿರೋಧಿಸಿ ಶರತ್ ಸಿಎಟಿ ಮೊರೆ ಹೋಗಿದ್ದರು. ಈಗ ಶರತ್ ಮರು ನೇಮಕ ಮಾಡುವಂತೆ ಸಿಎಟಿ ಮೌಖಿಕ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ. ಒಂದು ವೇಳೆ ಸರಕಾರ ಈ ಸೂಚನೆ ಪಾಲಿಸದೇ ಹೋದಲ್ಲಿ 22ಕ್ಕೆ ಈ ಕುರಿತಾಗಿ ಆದೇಶ ಹೊರಡಿಸುವುದಾಗಿ ಆಡಳಿತ ನ್ಯಾಯಮಂಡಳಿಯು ರಾಜ್ಯದ ಅಡ್ವೊಕೇಟ್ ಜನರಲ್‌ಗೆ ತಿಳಿಸಿದೆ.

ನಾಲ್ಕಾರು ತಿಂಗಳ ಹಿಂದೆ ರಾಜ್ಯ ಸರಕಾರವು ಶರತ್ ಅವರನ್ನು ಅಲ್ಪ ಅವಧಿಗೆ ಎತ್ತಂಗಡಿ ಮಾಡಿ ಅವರ ಜಾಗದಲ್ಲಿ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಿತ್ತು.ಇತ್ತಿಚೆಗೆ ಮೈಸೂರಿನ ಹಲವಾರು ಜನ ಪ್ರತಿನಿಧಿಗಳು ರೋಹಿಣಿ ವಿರುದ್ಧ ತಿರುಗಿ ಬಿದ್ದಿದ್ದರು. ಕಂದಾಯ ಸಚಿವ ಅಶೋಕ್ ಸಹ ರೋಹಿಣಿ ಅವರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾರ್‍ಯಕ್ರಮಗಳನ್ನು ರೂಪಿಸಿದ ಕಾರಣ ರೋಹಿಣಿ ಸಾಕಷ್ಟು ವಿರೋಧ ಕಟ್ಟಿಕೊಂಡಿದ್ದರು.


ಇದನ್ನೂ ಓದಿ: ಕಾದು ಕಾದು ಸುಸ್ತಾದ ಸಚಿವಾಕಾಂಕ್ಷಿ ಶಾಸಕರಿಗೆ ಯಡಿಯೂರಪ್ಪರಿಂದ ಗಿಫ್ಟ್..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.