ಯುಪಿ : ಯುವತಿಯನ್ನು ಅಪಹರಿಸಿ ಬಲವಂತವಾಗಿ ಮತಾಂತರಗೊಳಿಸಿದ ಯುವಕ…!
ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳೊಂದಿಗೆ ಬಲವಂತವಾಗಿ ಮತಾಂತರಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.
ಹೌದು… ಬಿಜ್ನೋರ್ನಲ್ಲಿ ಯುವಕನೊಬ್ಬ ಬಲವಂತವಾಗಿ ಯುವತಿಯನ್ನು ಮತಾಂತರಗೊಳಿಸಿದ ಹಿನ್ನೆಲೆ ಆತನನ್ನು ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಾಕಿಬ್ ಯುವತಿಯನ್ನು ಅಪಹರಿಸಿ ಬಲವಂತವಾಗಿ ತನ್ನ ಧರ್ಮಕ್ಕೆ ಮತಾಂತರಗೊಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಧಂಪೂರಿನ ಯುವತಿಯೊಬ್ಬಳು ಕಾಣೆಯಾಗಿದ್ದಳು. ಇಬ್ಬರನ್ನು ಪತ್ತೆ ಹಚ್ಚಿದ ಬಳಿಕ ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ತನ್ನ ಧರ್ಮಕ್ಕೆ ಯುವಕ ಮತಾಂತರಗೊಳಿಸಿದ್ದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಸಾಕಿಬ್ ತನ್ನ ನಿಜವಾದ ಹೆಸರನ್ನು ಬದಲಿಸಿ ತನ್ನನ್ನು ತಾನು ಸೋನು ಎಂದು ಹುಡುಗಿಗೆ ಪರಿಚಯಿಸಿಕೊಂಡಿದ್ದಾನೆ. ಬಳಿಕ ಅವನು ಅವಳನ್ನು ಅಪಹರಿಸಿ ತನ್ನ ಧರ್ಮಕ್ಕೆ ಮತಾಂತರಗೊಳಿಸಲು ಪ್ರಯತ್ನಿಸಿದ್ದಾನೆ. ಈತನ ವಿರುದ್ಧ ಕಾನೂನುಬಾಹಿರ ಧಾರ್ಮಿಕ ಮತಾಂತರ ಮತ್ತು ಎಸ್‌ಸಿ / ಎಸ್‌ಟಿ ಕಾಯ್ದೆಯ ವಿರುದ್ಧ ಸುಗ್ರೀವಾಜ್ಞೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದಕ್ಕೂ ಮುನ್ನ ನವೆಂಬರ್‌ನಲ್ಲಿ ಉತ್ತರ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಧರ್ಮ ಪರಿವರ್ತನೆ ನಿಷೇಧದ ಸುಗ್ರೀವಾಜ್ಞೆ ಅನ್ನು ಜಾರಿಗೆ ತರಲಾಗಿದೆ. ಹೊಸ ಕಾನೂನಿನ ಪ್ರಕಾರ ವಿವಾಹಕ್ಕಾಗಿ ಬಲವಂತದ ಮತಾಂತರಗಳನ್ನು ನಡೆಸಿದ ಆರೋಪಿಗೆ ಒಂದರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 15,000 ದಂಡವನ್ನು ವಿಧಿಸಲಾಗುತ್ತದೆ.