ಏಕಕಾಲಕ್ಕೆ ಎರಡು ಇಲಿಗಳನ್ನು ನುಂಗಿದ ಎರಡು ತಲೆಯ ಹಾವು : ವೀಡಿಯೊ ವೈರಲ್!
ಎರಡು ತಲೆಯ ಹಾವು ಏಕಕಾಲದಲ್ಲಿ ಎರಡು ಇಲಿಗಳನ್ನು ನುಂಗಿದ ವೀಡಿಯೊ ವೈರಲ್ ಆಗಿದ್ದು ನೋಡುಗರನ್ನು ದಿಗ್ಭ್ರಮೆಗೊಳಿಸಿದೆ.
ವನ್ಯಜೀವಿ ಉತ್ಸಾಹಿ ಮತ್ತು ಜನಪ್ರಿಯ ಯೂಟ್ಯೂಬರ್ ಬ್ರಿಯಾನ್ ಬಾರ್ಝಿಕ್ ಇತ್ತೀಚೆಗೆ ಎರಡು ತಲೆಯ ಹಾವು ಎರಡು ಇಲಿಗಳನ್ನು ಏಕಕಾಲದಲ್ಲಿ ನುಂಗುವ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.
“ಎರಡು ತಲೆಯ ಬೆನ್ ಮತ್ತು ಜೆರ್ರಿ ತಿನ್ನುವುದು” ಎಂದು ಬರೆದು ವೀಇಡಯೋವನ್ನು ಹಂಚಿಕೊಂಡಿದ್ದಾರೆ. ಎರಡು ಇಲಿಗಳನ್ನು ತಿನ್ನಲು ಹಾವಿನ ಪ್ರತಿಯೊಂದು ತಲೆ ಸ್ವತಂತ್ರವಾಗಿ ಕೆಲಸ ಮಾಡುವುದನ್ನು ವೀಡಿಯೊ ತೋರಿಸುತ್ತದೆ.
ಕಳೆದ ವಾರ ಪೋಸ್ಟ್ ಮಾಡಿದ ಈ ವೀಡಿಯೊ 2.7 ಲಕ್ಷ ವೀಕ್ಷಣೆಗಳು ಮತ್ತು ನೂರಾರು ಕಾಮೆಂಟ್‌ಗಳನ್ನು ಗಳಿಸಿದೆ. ವೀಡಿಯೊ ವೀಕ್ಷಿಸಿದ ನಂತರ ಅನೇಕ ವೀಕ್ಷಕರು ಪ್ರಶ್ನೆಗಳನ್ನು ಕೇಳಿದರೆ, ಇತರರು ಆಶ್ಚರ್ಯಚಕಿತರಾದ ಪ್ರತಿಕ್ರಿಯೆಗಳನ್ನು ಕಳುಹಿಸಿದ್ದಾರೆ.
ಎರಡು ತಲೆಗಳನ್ನು ಹೊಂದಿರುವ ಹಾವನ್ನು ಬೈಸ್ಫಾಲಿ ಎಂದು ಕರೆಯಲಾಗುತ್ತದೆ. ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗದ ಪ್ರಕಾರ, “ಎರಡು ಮೊನೊಜೈಗೋಟಿಕ್ ಅವಳಿಗಳನ್ನು ಬೇರ್ಪಡಿಸಲು ವಿಫಲವಾದಾಗ ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಬೈಸ್ಫಾಲಿ ಸಂಭವಿಸುತ್ತದೆ, ಮತ್ತು ತಲೆಗಳು ಒಂದೇ ದೇಹದ ಮೇಲೆ ಸೇರಿಕೊಳ್ಳುತ್ತವೆ.”
ಎರಡು ತಲೆಯ ಹಾವುಗಳು ಕಾಡಿನಲ್ಲಿ ಬದುಕುಳಿಯುವ ಸಾಧ್ಯತೆಯಿಲ್ಲ ಎಂದು ಆಯೋಗ ಸೇರಿಸಿದೆ “ಏಕೆಂದರೆ ಎರಡು ಮಿದುಳುಗಳು ವಿಭಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಮಿದುಳುಗಳು ವಿಭಿನ್ನ ಕಾರ್ಯ ಮಾಡುವುದರಿಂದ ಆಹಾರ ಭೇಟೆಯಾಡುವುದು ಕಷ್ಟವಾಗುತ್ತದೆ. ಜೊತೆಗೆ ಭೇಟೆ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ”