ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿ ಫೋಟೋ ತೆಗೆಯುವ ವೇಳೆ ಕ್ಯಾಮರಾದ ಕ್ಯಾಪ್ ತೆಗೆದಿರಲಿಲ್ಲವೇ ? ಈ ಸ್ಟೋರಿ ಓದಿ

ಸಫಾರಿ ಜಾಕೇಟ್, ಸಫಾರಿ ಟೋಪಿ ಮತ್ತು ಸನ್ ಗ್ಲಾಸ್‌ ಧರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ವಿಶೇಷವಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 72ನೇ ವರ್ಷದ ಹುಟ್ಟುಬ್ಬವನ್ನು ಬಹಳ ವಿಷೇಶವಾಗಿ ಆಚರಿಸಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದ ವಿಶೇಷ ಆವರಣಕ್ಕೆ ಚಿರತೆಗಳನ್ನು ಬಿಡುಗಡೆ ಮಾಡುವ ವೇಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕೆಲವು ಚಿತ್ರಗಳನ್ನು ಸೆರೆಹಿಡಿದು ಪ್ರಧಾನಿಯವರು ಛಾಯಾಗ್ರಹಣದ ಮೇಲಿನ ತಮ್ಮ ಪ್ರೀತಿಯನ್ನು ಪ್ರದರ್ಶಿಸಿದ್ದರು.

'Nikon camera with Canon cover': BJP fact checks Trinamool tweet on PM Modi

ಕುನೋ ರಾಷ್ಟ್ರೀಯ ಉದ್ಯಾನವನದ ಚಿರತೆಗಳ ಫೋಟೋ ಸೆರೆ ಹಿಡಿಯುವಾಗ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕ್ಯಾಮರಾದ ಮುಂದಿನ ಕ್ಯಾಪ್ ತೆಗೆಯದೆ ಫೋಟೋವನ್ನು ಕ್ಲಿಕ್ಕಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಟೊಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಮರಾದ ಕ್ಯಾಪ್ ತೆಗೆಯದೇಯೇ ಫೊಟೋ ಕ್ಲಿಕ್ಕಿಸಿದ್ದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪ್ರಧಾನಿ ಮೋದಿ ಅವರ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ ಚಿರತೆಗಳ ಫೋಟೋ ತೆಗೆಯುತ್ತಿದ್ದ ಪ್ರಧಾನಿಯವರ ಒಂದು ಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಲಾಗಿದೆ ಎಂದು ಇಂಡಿಯಾ ಟುಡೇ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ.

ಇದರಲ್ಲಿ ಕ್ಯಾಮೆರಾ ಹಿಡಿದಿರುವ ಪ್ರಧಾನಿ ಮೋದಿ, ಅದರ ಲೆನ್ಸ್‌ ಕವರ್ ತೆಗೆಯದೇ ಫೋಟೋ ಸೆರೆಯಿಡಿಯುತ್ತಿದ್ದಾರೆ. ಈ ಚಿತ್ರ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿ, ಬರೀ ಫೋಟೋ ತೆಗೆಸಿಕೊಳ್ಳುವವರಿಗೆ ಫೋಟೋ ತೆಗೆಯಲು ಹೇಗೆ ಬರಲು ಸಾಧ್ಯ? ಎಂದೆಲ್ಲಾ ಟ್ರೋಲ್ ಮಾಡಲಾಗಿತ್ತು.

ಈ ಕ್ಲೂಗಳನ್ನು ಆಧಾರವಾಗಿಟ್ಟುಕೊಂಡು ಸರ್ಚ್ ಮಾಡಿದಾಗ, ಇದು ಸುಳ್ಳು ಎಂದು ನಿರೂಪಿಸಿವ ವಿಡಿಯೋವನ್ನು BJP ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಈವೆಂಟ್‌ ನ ವಿಡಿಯೋವನ್ನು ಹಂಚಿಕೊಂಡ  ಪೋಸ್ಟ್‌ ಲಭ್ಯವಾಗಿದೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೃಶ್ಯಗಳನ್ನು ಸೆರೆ ಹಿಡಿಯುವಾಗ ಕ್ಯಾಮರಾದ ಮುಚ್ಚಳವನ್ನು ತೆಗೆಯಾಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಎಡಿಟ್ ಮಾಡಲಾಗಿರುವ ಚಿತ್ರವನ್ನು ಬಳಸಿಕೊಂಡು ದೇಶದ ಪ್ರಧಾನಿಯವರನ್ನು ಹೀಗೆ ಅವಮಾನಿಸುವ ಬದಲು ನಿಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಿ ಎಂದು BJP  ನಾಯಕರು ಪ್ರತಿಕ್ರಿಯಿಸಿದ್ದಾರೆ.

Prime Minister Narendra Modi

ಕ್ಯಾನನ್ ಲೆನ್ಸ್ ಕವರ್ ಹೊಂದಿರುವ ನಿಕಾನ್ ಕ್ಯಾಮೆರಾವನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಬಿಜೆಪಿ ನಾಯಕ ಸುಕಾಂತ ಮಜುಂದಾರ್ ಗಮನಸೆಳೆದಿದ್ದಾರೆ. ಕನಿಷ್ಠ ಸಾಮಾನ್ಯ ಜ್ಞಾನ ಇರುವವರನ್ನು ಪಕ್ಷದಲ್ಲಿರಿಸಿಕೊಳ್ಳಿ ಎಂದು ಬಿಜೆಪಿ ನಾಯಕ ಸುಕಾಂತ ಮಜುಂದಾರ್ “ಟಿಎಂಸಿ ರಾಜ್ಯಸಭಾ ಸಂಸದ ನಿಕಾನ್ ಕ್ಯಾಮೆರಾದ ಎಡಿಟೆಡ್ ಚಿತ್ರವನ್ನು ಕ್ಯಾನನ್ ಕವರ್‌ನೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ನಕಲಿ ಪ್ರಚಾರವನ್ನು ಹರಡಲು ಇಂತಹ ಕೆಟ್ಟ ಪ್ರಯತ್ನ” ಎಂದಿದ್ದಾರೆ.

 

ಮುಂದುವರಿದು, “ಮಮತಾ ಬ್ಯಾನರ್ಜಿ ಅವರೇ, ಕನಿಷ್ಠ ಸಾಮಾನ್ಯ ಜ್ಞಾನವನ್ನು ಹೊಂದಿರುವ ಉತ್ತಮ ವ್ಯಕ್ತಿಯನ್ನು ನಿಮ್ಮ ಪಕ್ಷದಲ್ಲಿ ನೇಮಿಸಿಕೊಳ್ಳಿ” ಎಂದು ಸುಕಾಂತ ಮಜುಂದಾರ್ , ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 72ನೇ ವರ್ಷದ ಹುಟ್ಟುಬ್ಬವನ್ನು ನಮೀಬಿಯಾದಿಂದ ಬಂದ ಚಿರತೆಗಳೊಂದಿಗೆ ಆಚರಿಸಿಕೊಂಡು, ಅವುಗಳ ಫೋಟೋವನ್ನು ಕ್ಲಿಕ್ಕಿಸಿ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಆದರೆ ಕೆಲ ತೃಣಮೂಲ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಿಗರು ಮೂಲ ಫೋಟೋವನ್ನು ಎಡಿಟ್ ಮಾಡುವ ಮೂಲಕ ಪ್ರಧಾನಿಯವರ ಫೋಟೋವನ್ನು ತಿರುಚಿ ಹಂಚಿಕೊಂಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಈ ಕೀಟ ಕಚ್ಚಿದರೆ ಸಾವು ಖಚಿತವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights