ಫ್ಯಾಕ್ಟ್‌ಚೆಕ್: ಚೀತಾಗಳನ್ನು ಕರೆತಂದ ವಿಮಾನದಲ್ಲಿದುದ್ದು ಚೀತಾದ ಚಿತ್ರವಲ್ಲ, ವಿಮಾನ ಭಾರತದ್ದು ಅಲ್ಲ

ನಮೀಬಿಯಾದಿಂದ ವಿಶೇಷ ಕಾರ್ಗೋ ವಿಮಾನದಲ್ಲಿ ಚೀತಾಗಳನ್ನು ಭಾರತಕ್ಕೆ ಕರೆತರಲಾಗಿದೆ. ಭಾರತದಲ್ಲಿ ಚೀತಾ ಸಂತತಿ ನಶಿಸಿಹೋಗಿ 70 ವರ್ಷಗಳ ನಂತರ ಎಂಟು ಚೀತಾಗಳು ನಮೀಬಿಯಾದಿಂದ ಭಾರತಕ್ಕೆ ಬಂದಿವೆ. ನಮೀಬಿಯಾದಿಂದ ಭಾರತಕ್ಕೆ ಕರೆತಂದ ವಿಮಾನದ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಚೀತಾಗಳನ್ನು ನಮೀಬಿಯಾದಿಂದ ಭಾರತಕ್ಕೆ ಕರೆತಂದ ವಿಶೇಷ ವಿಮಾನವನ್ನು ಇದಕ್ಕೆಂದೇ ಸಿದ್ದಪಡಿಲಾಗಿದ್ದು, ಈ ಸಂದರ್ಭಕ್ಕಾಗಿ ಭಾರತೀಯ ಬೋಯಿಂಗ್ ವಿಮಾನವನ್ನು ಚಿರತೆಯ ಹೋಲಿಕೆಯಲ್ಲಿ ರಚಿಸಲಾಗಿದೆ ಎಂದು ಹೇಳಿಕೊಂಡು, ಇದು ಭಾರತದ ಹೆಮ್ಮೆ ಎಂದೆಲ್ಲ ANI ರೀತಿಯ ಮುಖ್ಯವಾಹಿನಿಗಳು ಸುದ್ದಿಯನ್ನು ಭಿತ್ತರಿಸಿವೆ.

ಹಿಂದೂಸ್ತಾನ್ ಟೈಮ್ಸ್, ಝೀ ನ್ಯೂಸ್ ಮತ್ತು ಫ್ರೀ ಪ್ರೆಸ್ ಜರ್ನಲ್ ಈ ಚಿತ್ರವನ್ನು ಪ್ರಕಟಿಸಿದ್ದು, ಚಿತ್ರದಲ್ಲಿ ಚೀತಾಗಳನ್ನು ಸಾಗಿಸುತ್ತಿರುವ ಭಾರತೀಯ ವಿಮಾನ ಎಂದು ಪ್ರತಿಪಾದಿಸಿ ವರದಿ ಮಾಡಿವೆ.

Image Credit: Zee News

ಹಾಗಿದ್ದರೆ ಈ ವಿಮಾನ ನಿಜವಾಗಿಯೂ ಭಾರತದಲ್ಲೆ ತಯಾರಾಗಿದ್ದೆ? 8 ಚೀತಾಗಳನ್ನು ತರಲೆಂದೇ ಈ ವಿಶೇಷ ವಿಮಾನವನ್ನು ರಚಿಸಲಾಯಿತೆ ?  ಮುಖ್ಯವಾಹಿನಿಗಳು ಮಾಡಿರುವ ಸುದ್ದಿಯ ನಿಜವೇ ಎಂದು ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಮುಖ್ಯವಾಹಿನಿಯಲ್ಲಿ ಪ್ರತಿಪಾದನೆ ಮಾಡಿರುವ ಚೀತಾ ಚಿತ್ರದ ವಿಮಾನ ಎಂದು ವೈರಲ್ ಆಗಿರುವ ಸುದ್ದಿ ಸುಳ್ಳು ಎಂದು ‘ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್-ಚೆಕ್ ತಂಡವು  ವರದಿ ಮಾಡಿದೆ. ವಿಮಾನದ ಮೂಗಿನ ಮೇಲಿನ ಚಿತ್ರವು ಹುಲಿಯ ಚಿತ್ರವಾಗಿದ್ದು, ಚೀತಾದ ಚಿತ್ರವಲ್ಲ ಎಂದು ಹೇಳಿದೆ. ಅಲ್ಲದೆ ಇದು ಭಾರತದಲ್ಲಿ ತಯಾರಾದ ಅಥವಾ ಭಾರತದ ವಿಮಾನವಲ್ಲ ಎಂದು ಉಲ್ಲೇಖಿಸಿದೆ.

Image Credit: Wikimedia

 

ಟ್ರಾನ್ಸೇರೋ ಬೋಯಿಂಗ್ 747-400 ವಿಮಾನದ ಮುಂಭಾಗದಲ್ಲಿ ಅಮುರ್ ಹುಲಿಯ ಮುಖವನ್ನು ಮುದ್ರಿಸಲಾಗಿದೆ ಎಂದು ಡೈಲಿಮೇಲ್ ಲೇಖನವು ಹೇಳಿದೆ. ಚಿತ್ರಿಸಿದ ವಿಮಾನವು ಅಮುರ್ ಟೈಗರ್ ಸೆಂಟರ್ ಮತ್ತು ಟ್ರಾನ್ಸೇರೊ ಏರ್ಲೈನ್ಸ್‌ನ ಜಂಟಿ ಯೋಜನೆಯಾಗಿದೆ ಮತ್ತು ಮಾಸ್ಕೋ ವ್ನುಕೊವೊ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು ಎಂದು ಲೇಖನವು ಗಮನಿಸುತ್ತದೆ. ಈ ವಿಮಾನಕ್ಕೆ ‘ಟೈಗರ್ ಫ್ಲೈಟ್’ ಎಂದು ಹೆಸರಿಸಲಾಗಿದೆ, ಈ ಯೋಜನೆಯು ಹುಲಿ ಸಂರಕ್ಷಣಾ ಪ್ರಯತ್ನಗಳಿಗೆ ಗಮನ ಸೆಳೆಯುವ ಗುರಿಯನ್ನು ಹೊಂದಿದೆ.

Image Credit: Daily Mail

ವೈರಲ್ ಪೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ವಿಮಾನದ ಮಾಲೀಕತ್ವದ ಹಿನ್ನಲೆ ಲಭ್ಯವಾಗಿದೆ. ಪ್ಲೇನ್ಸ್‌ಪಾಟರ್ಸ್ ಎಂಬ ವೆಬ್‌ಸೈಟ್‌ನಲ್ಲಿ ನಾವು ವಿಮಾನದ ಮಾಲೀಕತ್ವದ ಡೇಟಾವನ್ನು ನೋಡಿದ್ದೇವೆ. ಜೂನ್ 2015 ರಲ್ಲಿ ಹುಲಿಯ ಥೀಮ್‌ನೊಂದಿಗೆ ವಿಮಾನವನ್ನು ವಿಶೇಷ ಬಣ್ಣಗಳಿಂದ ಚಿತ್ರಿಸಲಾಗಿದೆ ಎಂದು ವೆಬ್‌ಸೈಟ್ ಉಲ್ಲೇಖಿಸುತ್ತದೆ. ಕೇರಿಂಗ್ ದಿ ಟೈಗರ್ಸ್ ಟುಗೆದರ್ ಯೋಜನೆಗಾಗಿ ಬಣ್ಣವನ್ನು ಮಾಡಲಾಗಿದೆ. ಪಟ್ಟಿಯಲ್ಲಿ ಭಾರತ ಸರ್ಕಾರವನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ.

Image Credit: Planestoppers

ವಿಮಾನದ ಒಂದು ಬದಿಯಲ್ಲಿ ಟೆರ್ರಾ ಅವಿಯಾ ಲೋಗೋವನ್ನು ಸ್ಪಷ್ಟವಾಗಿ ಕಾಣಬಹುದು. ಡಿಡಿ ಇಂಡಿಯಾದ ಟ್ವೀಟ್ ಅನ್ನು ಗಮನಿಸಲಾಗಿದ್ದು, ಈ ವಿಮಾನವು ಟೆರ್ರಾ ಏವಿಯಾ ಮೊಲ್ಡೊವಾದ ಚಿಸಿನಾವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆಲೆಗೊಂಡಿರುವ ವಿಮಾನಯಾನ ಸಂಸ್ಥೆಗೆ ಸೇರಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಚೀತಾಗಳನ್ನು ನಮೀಬಿಯಾದಿಂದ ಭಾರತಕ್ಕೆ ಕರೆತಂದ ವಿಮಾನದ ಮುಂಭಾಗದಲ್ಲಿ ಇರುವುದು ಚೀತಾದ ಚಿತ್ರವಲ್ಲ. ಅದು ಹುಲಿಯ ಚಿತ್ರ ಮತ್ತು ಇದು ಭಾರತದ ಒಡೆತನದ ವಿಮಾನವಲ್ಲ. ಹಾಗಾಗಿ ಮುಖ್ಯವಾಹಿನಿ ಮಾಧ್ಯಮಗಳು ಸುದ್ದಿಯನ್ನು ತಪ್ಪಾಗಿ ಹಂಚಿಕೊಂಡಿವೆ ಎನ್ನುವುದು ಸ್ಪಷ್ಟವಾಗಿದೆ.

ಹುಲಿಯ ಚಿತ್ರವಿರುವ ವಿಶೇಷ ವಿಮಾನದ ಮೂಲಕ ಎಂಟು ಚೀತಾಗಳ ಮೊದಲ ಬ್ಯಾಚ್ ಅನ್ನು ಭಾರತಕ್ಕೆ ತರಲಾಗಿದ್ದು. ಭಾರತದಲ್ಲಿ ತೆರೆದ ಅರಣ್ಯ ಮತ್ತು ಹುಲ್ಲುಗಾವಲು ಪರಿಸರ ಚಿರತೆಗಳ ಮರುಸ್ಥಾಪನೆಯಲ್ಲಿ ಮಹತ್ವದ ಪಾತ್ರವಹಿಸಲಿದೆ ಎಂದು ಹೇಳಲಾಗಿದೆ. ಆದರೆ ಈ ಪ್ರಾಣಿಗಳನ್ನು ಈಗ ತರುವ ಅವಶ್ಯಕತೆ ಏನಿತ್ತು ಎನ್ನುವ ಚರ್ಚೆಯು ನಡೆಯುತ್ತಿದೆ. ಇದರ ಪರಿಣಾಮ ಏನು ಎಂದು ಕಾದು ನೋಡಬೇಕಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಗುಜರಾತಿಗಳನ್ನು ಮುಗಿಸಿ ಬಿಡುತ್ತೇನೆ ಎಂದು ಕೇಜ್ರಿವಾಲ್ ಧಮ್ಕಿ ಹಾಕಿಲ್ಲ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights