ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ತನ್ನ ಸೊಸೆಯೊಂದಿಗೆ ಕುಳಿತಿದ್ದ ಫೋಟೋವನ್ನು ಕೆಟ್ಟದಾಗಿ ಬಿಂಬಿಸಿದ BJP ನಾಯಕ

ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಪ್ರಾರಂಭವಾದ ಕಾಂಗ್ರೆಸ್‌ನ ‘ಭಾರತ್ ಜೋಡೋ ಯಾತ್ರೆ’ 12 ದಿನಕ್ಕೆ ಕಾಲಿಟ್ಟಿದ್ದು ಎಲ್ಲಡೆ ಭಾರೀ ಜನ ಬೆಂಬಲ ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಜೊತೆಯಲ್ಲಿ ಯುವತಿಯೊಬ್ಬರು ಕುಳಿತ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

Image

“ಪಪ್ಪು ಮೆಹೆಂದಿ ಹಾಕಿಕೊಂಡು ಮಕ್ಕಳೊಂದಿಗೆ ಆಟವಾಡುತ್ತಿದ್ದಾನೆ. ಯಾತ್ರೆಗೆ ಕರೆದೊಯ್ಯುತ್ತಿರುವ 10 ಸದಸ್ಯರ ಬಗ್ಗೆ ಬೇಸರವಾಗಿದೆ” ಎಂಬ ಹೇಳಿಕೆಯನ್ನು ಬಿಜೆಪಿ ತಮಿಳುನಾಡು ಐಟಿ ಸೆಲ್ ಮುಖ್ಯಸ್ಥ ನಿರ್ಮಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಹಾಗಿದ್ದರೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಪಕ್ಕದಲ್ಲಿ ಯುವತಿಯನ್ನು ಕೂರಿಸಿಕೊಂಡಿದ್ದರೆ?  BJP ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುತ್ತಿರುವ ಆಪಾದನೆ ನಿಜವೆ ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ತಮಿಳುನಾಡಿನ BJP ಐಟಿ ಸೆಲ್ ಮುಖ್ಯಸ್ಥ ನಿರ್ಮಲ್ ಕುಮಾರ್ ಹಂಚಿಕೊಂಡಿದ್ದ ರಾಹುಲ್ ಗಾಂಧಿ ಯುವತಿಯೊಂದಿಗೆ ಕುಳಿತ್ತಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿದಾಗ,  ಗೆಟ್ಟಿ ಇಮೇಜಸ್‌ನಲ್ಲಿ ಅಪ್‌ಲೋಡ್ ಮಾಡಲಾದ ಹಲವಾರು ಚಿತ್ರಗಳು ಲಭ್ಯವಾಗಿವೆ.

ಗೆಟ್ಟಿ ಇಮೇಜಸ್‌ನಲ್ಲಿ ಲಭ್ಯವಾದ ಫೋಟೋಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಫೋಟೋಗಳು ಒಂದೇ ಆಗಿದ್ದು, ರಾಹುಲ್ ಗಾಂಧಿ ಅವರ ಪಕ್ಕದಲ್ಲಿ ಕೂತು ಮಾತನಾಡುತ್ತಿರುವ ಹೆಣ್ಣು ಮಗಳು ತನ್ನ ಸೋದರ ಸೊಸೆ ಮಿರಯಾ ವಾದ್ರಾ ಎಂದು ಉಲ್ಲೇಖಿಸಲಾಗಿದೆ. ಅಂದರೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಬರ್ಟ್ ವಾದ್ರಾ ಅವರ ಪುತ್ರಿ ಮಿರಯಾ ವಾದ್ರಾ ಎಂದು ತಿಳಿದು ಬಂದಿದೆ. ಅಂದರೆ ರಾಹುಲ್ ಗಾಂಧಿಯ ಅಕ್ಕನ ಮಗಳು ಸಂಬಂಧದಲ್ಲಿ ರಾಹುಲ್‌ಗೆ ಸೊಸೆ ಆಗುತ್ತಾರೆ.

“ಆಗಸ್ಟ್ 20, 2015 ರಂದು ನವದೆಹಲಿಯ ವೀರ್ ಭೂಮಿಯಲ್ಲಿ ಮಾಜಿ ಭಾರತದ ಪ್ರಧಾನಿ ರಾಜೀವ್ ಗಾಂಧಿಯವರ 71 ನೇ ಜನ್ಮದಿನದ ಸಮಾರಂಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸೋದರ ಸೊಸೆ ಮೀರಾಯಾ ವಾದ್ರಾ ಅವರೊಂದಿಗೆ ಮಾತನಾಡುತ್ತಿರುವ ದೃಶ್ಯಗಳು ಎಂದು ಶೀರ್ಷಿಕೆಯಲ್ಲಿ ಹೇಳಿದೆ.

“ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 71 ನೇ ಜನ್ಮ ವಾರ್ಷಿಕೋತ್ಸವದಲ್ಲಿ ಅವರಿಗೆ ಗೌರವ ಸಲ್ಲಿಸಲು” ಸೇರಿದ್ದ ಸಂದರ್ಭದಲ್ಲಿ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ. ರಾಜೀವ್ ಗಾಂಧಿ ಮೇ 21, 1991 ರಂದು ದಕ್ಷಿಣದ ತಮಿಳುನಾಡಿನ ಶ್ರೀಪೆರುಂಪುದೂರ್ ಪಟ್ಟಣದಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ಬಂಡುಕೋರ ಪ್ರತ್ಯೇಕತಾವಾದಿಗಳಿಂದ ಚುನಾವಣಾ ಪ್ರಚಾರದ ಸಮಯದಲ್ಲಿ ಹತ್ಯೆ ಮಾಡಲಾಯಿತು. ಈ ಫೋಟೋದಲ್ಲಿ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಮತ್ತು ರಾಬರ್ಟ್ ವಾದ್ರಾ ಅವರೊಂದಿಗೆ ಕುಳಿತಿರುವುದನ್ನು ಕಾಣಬಹುದು.

“ಹಿಂದೂಸ್ತಾನ್ ಟೈಮ್ಸ್ ನ ಛಾಯಾಗ್ರಾಹಕ ಸೋನು ಮೆಹ್ತಾ ಅವರು ಚಿತ್ರವನ್ನು ಕ್ಲಿಕ್ಕಿಸಿದ್ದಾರೆ. ಅದೇ ಈವೆಂಟ್‌ನಲ್ಲಿ ಕ್ಲಿಕ್ ಮಾಡಿದ ಹೆಚ್ಚಿನ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇದೇ ಚಿತ್ರವನ್ನು ಆಗಸ್ಟ್ 21, 2015 ರಂದು ಪ್ರಕಟಿಸಲಾದ “ಪ್ರಿಯಾಂಕಾ ವಾದ್ರಾ ಅವರ ಮಗಳು ಮಿರಾಯಾ ಅಪರೂಪದ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ” ಎಂಬ ಶೀರ್ಷಿಕೆಯ ಡೆಕ್ಕನ್ ಕ್ರಾನಿಕಲ್ ಫೋಟೋ ಸ್ಟೋರಿಯಲ್ಲಿ ದಾಖಲಿಸಲಾಗಿದೆ.

Priyanka Vadra with her husband Robert Vadra and daughter Miraya Vadra after paying tribute to former Prime Minister Rajiv Gandhi on his 71st birth anniversary at Vir Bhumi in New Delhi on Thursday.

ಈ ಫೋಟೋ ಆರು ವರ್ಷಗಳಷ್ಟು ಹಳೆಯದಾಗಿದೆ ಮತ್ತು ಕಾಂಗ್ರೆಸ್‌ನ ಇತ್ತೀಚಿನ  ಅಭಿಯಾನ “ಭಾರತ್ ಜೋಡೋ ಯಾತ್ರೆ” ಮೆರವಣಿಗೆಗೆ ಯಾವುದೇ ರೀತಿಯ ಸಂಬಂಧವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿಯವರು ಮಿರಯಾ ವಾದ್ರಾ ಅವರ ಜೊತೆ ಕುಳಿತಿರುವ 6 ವರ್ಷಗಳ ಹಳೆಯ ಚಿತ್ರವನ್ನು, BJPಯ ತಮಿಳುನಾಡು ಘಟಕದ ಸಾಮಾಜಿಕ ಮಾಧ್ಯಮದ ಮುಖ್ಯಸ್ಥ ಹಾಗೂ BJP ನಾಯಕ ಸಿಟಿಆರ್ ನಿರ್ಮಲ್ ಕುಮಾರ್ ಟ್ವೀಟ್  ಮಾಡುವ ಮೂಲಕ ತಪ್ಪಾಗಿ ಹಂಚಿಕೊಂಡಿದ್ದರು.

BJP  ರಾಜಕಾರಣಕ್ಕಾಗಿ ಇಷ್ಟೋಂದು ಕೀಳು ಮಟ್ಟಕ್ಕೆ ಇಳಿಯಬಾರದು ಎಂದು ವ್ಯಾಪಕವಾಗಿ ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ತಮ್ಮ ಮೊದಲ ಟ್ವೀಟ್‌ ಅನ್ನು ಡಿಲೀಟ್ ಮಾಡಿ, ನಂತರ ರೀ ಪೋಸ್ಟ್‌ ಮಾಡಿದ್ದಾರೆ. ಹಾಗಾಗಿ ಫೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಗುಜರಾತಿಗಳನ್ನು ಮುಗಿಸಿ ಬಿಡುತ್ತೇನೆ ಎಂದು ಕೇಜ್ರಿವಾಲ್ ಧಮ್ಕಿ ಹಾಕಿಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights