ಫ್ಯಾಕ್ಟ್‌ಚೆಕ್: ನದಿ ನೀರಿನ ಮೇಲಿನ ಈ ಹೆದ್ದಾರಿ ಭಾರತದ್ದೆ?

ಸುತ್ತಲು ಜಲ ರಾಶಿ, ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ನೀರು. ಮಧ್ಯದಲ್ಲಿ ಒಂದು ಉದ್ದದ ಹೈವೇ ನೀರು ಉಕ್ಕಿ ರಸ್ತೆಯ ಮೇಲೆ ಹರಿಯುತ್ತಿದ್ದರೆ  ಅದರ ಮೇಲೆಯೇ ಹೋಗುತ್ತಿರುವ ಬೃಹತ್ ವಾಹನಗಳು, ಇಂತಹ ಮನಮೋಹಕ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಈ ಫೋಟೋಗಳನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡವರು ಯಾರೋ ಸಾಮಾನ್ಯರಲ್ಲ, ಮಾಜಿ ನಾರ್ವೇಜಿಯನ್ ರಾಜತಾಂತ್ರಿಕ ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಎರಿಕ್ ಸೋಲ್ಹೀಮ್

ಇನ್‌ಕ್ರೆಡಿಬಲ್ ಇಂಡಿಯಾ! ನಾನು ಅಂತಿಮವಾಗಿ ಅತ್ಯಂತ ಸುಂದರವಾದ ನೀರಿನ ಹೆದ್ದಾರಿಯನ್ನು ಎದುರಿಸಿದೆ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಅದರ ಆರ್ಕೈವ್ ಲಿಂಕ್‌ಅನ್ನು ಇಲ್ಲಿ ನೋಡಬಹುದು.

ಇದೇ ವಿಡಿಯೋವನ್ನು ಕೆಲವರು ತಮ್ಮ ಫೇಸ್‌ಬುಕ್‌ನಲ್ಲೂ ಹಂಚಿಕೊಂಡಿದ್ದಾರೆ.

ಈ ಸ್ಥಳ ಭಾರತದ ಯಾವ ಪ್ರದೇಶದಲ್ಲಿ ಇದೆ ಎಂಬುದನ್ನ ಹೇಳಿಲ್ಲ, ಕೆಲವರು ಈ ಸ್ಥಳ ಭಾರತದಲ್ಲ ಎಂದು ರಿಪ್ಲೇ ಮಾಡಿದ್ದಾರೆ. ಹಾಗಿದ್ದಾರೆ ಈ ಸ್ಥಳ ಎಲ್ಲಿಯದು? ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ ಇದು ನಿಜವಾಗಿಯೂ ಭಾರತದಲ್ಲಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್ :

ವೈರಲ್ ವೀಡಿಯೊದಿಂದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್  ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಜುಲೈ 10, 2021 ರಂದು ಬ್ಯೂಟಿಫುಲ್ ಚೀನಾ ಎಂಬ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿರುವ ವಿಡಿಯೋವೊಂದು ಲಭ್ಯವಾಗಿದೆ. ಜಿಯಾಂಗ್‌ಕ್ಸಿ ಪ್ರಾಂತ್ಯದ ಯೊಂಗ್‌ಕ್ಸಿಯು-ವುಚೆಂಗ್ ರಸ್ತೆಯ ಒಂದು ಭಾಗವು ಚೀನಾದಲ್ಲಿ ಪ್ರವಾಹದ ಸಮಯದಲ್ಲಿ ನೀರಿನಲ್ಲಿ ಮುಳುಗಿರುವುದನ್ನು ತೋರಿಸುವ ವೈರಲ್ ವೀಡಿಯೊ ಚೀನಾದಿಂದ ಬಂದಿದೆ ಎಂದು BOOM ವರದಿ ಮಾಡಿದೆ.

ಬ್ಯೂಟಿಫುಲ್ ಚೀನಾ ಟ್ವಿಟರ್ ಅಕೌಂಟ್ ಚೀನಾ ದೇಶದ ಅತಿದೊಡ್ಡ ವೃತ್ತಪತ್ರಿಕೆ ಗುಂಪಿನ ಅಧಿಕೃತ ಟ್ವಿಟರ್ ಹ್ಯಾಂಡಲ್ ಆಗಿದೆ – ಪೀಪಲ್ಸ್ ಡೈಲಿ ಇದು ಚೀನೀಯರ ಜೀವನ, ಪ್ರಯಾಣ ಮತ್ತು ಸಂಸ್ಕೃತಿಯ ಕುರಿತು ಟ್ವೀಟ್ ಮಾಡುತ್ತದೆ.

ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಇದರ ಕೀವರ್ಡ್ ತೆಗೆದುಕೊಂಡು,  Twitter ನಲ್ಲಿ ‘Yongxiu-Wucheng Road’ ಗಾಗಿ ಮತ್ತಷ್ಟು ಸರ್ಚ್ ನಡೆಸಿದಾಗ ಅದೇ ರಸ್ತೆಯ ಹೆಚ್ಚಿನ ಫೋಟೋಗಳು ಲಭ್ಯವಾಗಿವೆ. ಇದು 2019 ರಿಂದ ಚೀನಾ ಸೆಂಟ್ರಲ್ ಟೆಲಿವಿಷನ್‌ನ (CCTV) ಟ್ವೀಟ್‌ನಲ್ಲಿ ಹಂಚಿಕೊಂಡ ಫೋಟೋಗಳಾಗಿದ್ದು, ನೀರಿನ ಮಟ್ಟ ಕಡಿಮೆಯಾದಾಗ ಅದೇ ರಸ್ತೆಯ ಕೆಲವು ಚಿತ್ರಗಳನ್ನು ಕಾಣಬಹುದು.

ಚೀನಾದ ಅತಿದೊಡ್ಡ ಸಿಹಿನೀರಿನ ಸರೋವರದ ಉದ್ದಕ್ಕೂ 5.05 ಕಿಮೀ ಉದ್ದದ ರಸ್ತೆಯು ಚಾಚಿದೆ ಮತ್ತು ಚೀನಾದ “ನೀರಿನ ಮೇಲಿನ ಅತ್ಯಂತ ಸುಂದರವಾದ ಹೆದ್ದಾರಿ” ಎಂದು ಹೆಸರಿಸಲ್ಪಟ್ಟಿದೆ ಎಂದು ಶೀರ್ಷಿಕೆಯೊಂದಿಗೆ ಫೋಟೋಗಳನ್ನು ಟ್ವೀಟ್ ಮಾಡಲಾಗಿದೆ.

ಚೀನಾದ ಅತಿದೊಡ್ಡ ಸಿಹಿನೀರಿನ ಸರೋವರವಾದ ಪೂರ್ವ ಚೀನಾದ ಜಿಯಾಂಗ್ಕ್ಸಿ ಪ್ರಾಂತ್ಯದ ಪೊಯಾಂಗ್ ಸರೋವರದಲ್ಲಿ ನೀರಿನ ಮಟ್ಟವು ಹೆಚ್ಚಾದಾಗ ಯೋಂಗ್ಸಿಯು-ವುಚೆಂಗ್ ಹೆದ್ದಾರಿಯು “ನೀರೊಳಗಿನ ರಸ್ತೆ” ಆಗುತ್ತದೆ ಎಂದು ಜೂನ್ 26, 2022 ರಂದು ಪೀಪಲ್ಸ್ ಡೈಲಿ ಟ್ವೀಟ್ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಚೀನಾದ ಚೀನಾದ ಜಿಯಾಂಗ್ಕ್ಸಿ ಪ್ರಾಂತ್ಯದ ಪೊಯಾಂಗ್ ಸರೋವರದ ಯೋಂಗ್ಸಿಯು-ವುಚೆಂಗ್ ಹೆದ್ದಾರಿಯ ದೃಶ್ಯಗಳನ್ನು, ಭಾರತದ ನೀರಿನಲ್ಲಿ ಮುಳುಗುವ ಉದ್ದನೆಯ ಹೈವೇ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಈ ರಸ್ತೆ ಭಾರತದ್ದಲ್ಲ, ಚೀನಾದ್ದು ಎಂದು ಖಚಿತವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಸ್ವಾಮಿ ವಿವೇಕಾನಂದರ ಪ್ರತಿಮೆಗೆ ರಾಹುಲ್ ಗಾಂಧಿ ನಮನ ಸಲ್ಲಿಸದೆ ಅಗೌರವ ತೋರಿದರೆ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights