FACT CHECK | 2014ರ ಮೊದಲು ಭಾರತದಲ್ಲಿ ಕೇವಲ 300 ಸ್ಟಾರ್ಟ್‌ಅಪ್‌ಗಳು ಮಾತ್ರ ಇದ್ದವು ಎಂಬುದು ಸುಳ್ಳು!

ನವಭಾರತ ವೇಗವಾಗಿ ಮುನ್ನಡೆಯುತ್ತಿದೆ, 2014ರಲ್ಲಿ ಭಾರತದಲ್ಲಿ ಇದ್ದದ್ದು ಕೇವಲ 300 ಸ್ಟಾರ್ಟಪ್‌ಗಳು 2014ರ ನಂತರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಬಳಿಕ ಒಂದು ಲಕ್ಷಕ್ಕೂ ಅಧಿಕ ಸ್ಟಾರ್ಟಪ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪ್ರತಿಪಾದಿಸಿ ಕನ್ನಡದ ಬಲಪಂಥೀಯ ಮಾಧ್ಯಮವಾದ ಪೋಸ್ಟ್‌ಕಾರ್ಡ್ ಕನ್ನಡ ತನ್ನಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಂಡಿದೆ.

1 ವ್ಯಕ್ತಿ ಮತ್ತು ಪಠ್ಯ 'ನವಭಾರತ ವೇಗವಾಗಿ ಮುನ್ನಡೆಯುತ್ತಿದೆ 2014 ರಲ್ಲಿ ಭಾರತದಲ್ಲಿ ಇದ್ದದ್ದು ಕೇವಲ 300 ಸ್ಟಾರ್ಟ್‌ಅಪ್ಗಳು 1,00,000+ 300 POST CARD 2014 2024 ಈಗ 1 ಲಕ್ಷಕ್ಕೂ ಅಧಿಕ ಸ್ಟಾರ್ಟ್ ಅಪ್ ಭಾರತದಲ್ಲಿವೆ ಅದಕ್ಕೆ ದೇಶದಲ್ಲಿ ಮೋದಿಜೀ ಇದ್ದರೆ ಎಲ್ಲವೂ ಸಾಧ್ಯ @PostcardKannada @ Postcard_kannada f Postcard Kannada Postcard_kannada' ಹೇಳುತ್ತಿದೆ ನ ಚಿತ್ರವಾಗಿರಬಹುದು

ಏಪ್ರಿಲ್ 28 ರಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ರವರು 2014ರಲ್ಲಿ ಕೇವಲ 350 ಸ್ಟಾರ್ಟಪ್‌ಗಳಿದ್ದವು. ಮೋದಿ ಪ್ರಧಾನಿಯಾದ ನಂತರ 300 ಪಟ್ಟು ಬೆಳವಣಿಗೆಯಾಗಿದೆ” ಎಂದಿದ್ದರು.

 

 

 

 

 

 

 

 

ಹಾಗೆಯೇ “ಮೋದಿ ಪ್ರಧಾನಿಯಾಗುವ ಮುನ್ನ ಕೇವಲ 300 ಸ್ಟಾರ್ಟಪ್‌ಗಳಿದ್ದವು. ಈಗ ಒಂದು ಲಕ್ಷಕ್ಕೂ ಅಧಿಕವಾಗಿವೆ” ಎಂದು ಯೂಟ್ಯೂಬರ್ ಗೌರವ್ ಚೌಧರಿ ಹೇಳಿದ್ದಾರೆ. ಇದನ್ನು ಎಎನ್‌ಐ ವರದಿ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಹೊಗಳುವ ಭರದಲ್ಲಿ ಈ ಹಿಂದೆ ಏನೂ ಅಭಿವೃದ್ದಿಯಾಗಿರಲಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ.  ಹಾಗಿದ್ದರೆ 2014ರ ಮೊದಲು ಭಾರತದಲ್ಲಿ ಕೇವಲ ಬೆರಳೆಣಿಕೆಯಷ್ಟು ಅಂದರೆ 300 ಸ್ಟಾರ್ಟ್‌ಟಪ್‌ಗಳು ಮಾತ್ರ ಇದ್ದವು ಎಂಬುದು ನಿಜವೇ ಎಂದು ಪರಿಶೀಳಲಿಸೋಣ.

ಫ್ಯಾಕ್ಟ್ ಚೆಕ್ :

ಈ ಕುರಿತು ಸಂಬಂಧಿತ ಕೀ ವರ್ಡ್‌ಗಳೊಂದಿಗೆ ಯೂಟ್ಯೂಬ್‌ನಲ್ಲಿ ಹುಡುಕಿದಾಗ ಅಂಕಿ ಸಂಖ್ಯೆಗಳ ಮಾಹಿತಿ ಒದಗಿಸುವ  ಸ್ಟ್ಯಾಟಿಸ್ಟ  ಅಂಕಿ ಅಂಶಗಳು ಲಭ್ಯವಾಗಿವೆ. ಅದರಂತೆ 2012ರಲ್ಲಿ ಭಾರತದಲ್ಲಿ ಬರೋಬ್ಬರಿ 5000 ಸ್ಟಾರ್ಟ್‌ಪ್‌ಗಳು ಕೆಲಸ ಮಾಡುತ್ತಿದ್ದವು. 2013ರಲ್ಲಿ 3000 ಸ್ಟಾರ್ಟಪ್‌ಗಳು ಹೊಸದಾಗಿ ನೋಂದಾಯಿಸಿಕೊಂಡಿವೆ. 2014ರಲ್ಲಿ ಆ ಸಂಖ್ಯೆ 4500ಕ್ಕೆ ತಲುಪಿದರೆ 2015ರಲ್ಲಿ 8000 ಕ್ಕೆ ಮುಟ್ಟಿತ್ತು ಎಂದು ವರದಿ ಮಾಡಿದೆ. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಹೊಸದಾಗಿ ಸ್ಟಾರ್ಟಪ್ ನೋಂದಾಯಿಸಿಕೊಳ್ಳುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕುಸಿಯುತ್ತಿದ್ದು, 2022ರಲ್ಲಿ 652 ಸ್ಟಾರ್ಟಪ್ ನೊಂದಾಯಿಸಿಕೊಂಡಿದ್ದರೆ 2023ರಲ್ಲಿ ಕೇವಲ 489ಕ್ಕೆ ಕುಸಿದಿವೆ ಎಂದು ಮಾಹಿತಿ ನೀಡಿದೆ.

 

 

 

 

 

 

 

 

 

2005 ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ಟಾರ್ಟಪ್‌ಗಳ ಬಗ್ಗೆ ಹೇಳುವುದಾದರೆ,  RedBus, JustDial ಮತ್ತು Snapdeal ನಂತಹ ಸ್ಟಾರ್ಟಪ್‌ಗಳು ಉತ್ತಮ ಲಾಭದೊಂದಿಗೆ ಕಾರ್ಯನಿರ್ವಹಿಸುತ್ತಿದ್ದವು ಎಂದು ಮಯಾಂಕ್ ವಾಧೇರ ಬರೆದ Linked.in ವರದಿ ಲಭ್ಯವಾಗಿದೆ. ವರದಿಯ ಪ್ರಕಾರ 2011 ರಲ್ಲಿ ಯುಪಿಎ ಸರ್ಕಾರವು ಉದ್ಯಮಶೀಲತೆಯನ್ನು ಉತ್ತೇಜಿಸಲು ಸರ್ಕಾರವೇ ಸ್ಟಾರ್ಟ್ಅಪ್ ಇಂಡಿಯಾ ಸ್ಟ್ಯಾಂಡಪ್ ಇಂಡಿಯಾ ಅಭಿಯಾನವನ್ನು ಪ್ರಾರಂಭಿಸಿತು. ಅದರ ಪರಿಣಾಮವಾಗಿ 2012-2015 ರ ಅವಧಿಯಲ್ಲಿ ಫ್ಲಿಪ್‌ಕಾರ್ಟ್, ಓಲಾ, ಝೊಮ್ಯಾಟೊ ಮತ್ತು ಓಯೊದಂತಹ ಇ-ಕಾಮರ್ಸ್ ಸ್ಟಾರ್ಟ್‌ಅಪ್‌ಗಳು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡವು ಎನ್ನಲಾಗಿದೆ.

 

 

 

 

 

 

 

 

 

 

 

 

ಸದ್ಯ ಭಾರತದಲ್ಲಿ 1,12,718 ಸ್ಟಾರ್ಟಪ್‌ಗಳಿವೆ ಎಂದು ಇನ್ವೆಸ್ಟ್ ಇಂಡಿಯಾ ವರದಿ ಮಾಡಿದೆ. ಆದರೆ ಅವುಗಳಲ್ಲಿ ಶೇ.95%ಗಿಂತಲೂ ಹೆಚ್ಚಿನ ಸ್ಟಾರ್ಟಪ್‌ಗಳು ವಿಫಲವಾಗಿವೆ ಎಂದು ತಜ್ಞರ ಹೇಳಿಕೆಯನ್ನು ಆಧರಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

 

 

 

 

 

 

 

 

 

 

 

 

ಒಟ್ಟಾರೆಯಾಗಿ ಹೇಳುವುದಾದರೆ, ಮೋದಿ ಪ್ರಧಾನಿಯಾಗುವ ಮೊದಲೇ ಭಾರತದಲ್ಲಿ ಹೇಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಸ್ಟಾರ್ಟಪ್‌ಗಳಿದ್ದವು. ಈಗ ಒಂದು ಲಕ್ಷಕ್ಕು ಹೆಚ್ಚಿನ ಸ್ಟಾರ್ಟಪ್‌ಗಳಿದ್ದರೂ ಬಹುತೇಕ ವಿಫಲವಾಗಿವೆ. ಹಾಗಾಗಿ ಮೋದಿ ಪ್ರಧಾನಿಯಾಗುವ ಮುನ್ನ ಕೇವಲ 300 ಸ್ಟಾರ್ಟಪ್‌ಗಳಿದ್ದವು ಎಂಬ ವಾದ ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಶ್ಚಿಮ ಬಂಗಾಳದ ಮಮತಾ ಸರ್ಕಾರ ರಂಜಾನ್‌ಗೆ ರಜೆ ನೀಡಿ, ದುರ್ಗಾ ಪೂಜೆಗೆ ರಜೆ ನಿರಾಕರಿಸುತ್ತದೆ ಎಂಬ ಅಮಿತ್ ಶಾ ಅರೋಪದಲ್ಲಿ ಸತ್ಯವಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights