ದೇಶದಲ್ಲಿ ಮುಂದುವರೆದ ಕೊರೊನಾ ಹಾವಳಿ : 1.26 ಲಕ್ಷ ಹೊಸ ಕೇಸ್: ರಾಜ್ಯಗಳ ಮಾಹಿತಿ ಇಲ್ಲಿದೆ!

ದೇಶದಲ್ಲಿ ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ 1,26,789 ಪ್ರಕರಣಗಳು ದಾಖಲಾಗಿವೆ.

ಭಾರತದಲ್ಲಿ ಒಂದೇ ದಿನ 1,26,789 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 685 ಸೋಂಕಿತರು ಬಲಿಯಾಗಿದ್ದಾರೆ. ಈ ವರೆಗೆ ಒಟ್ಟು ಸಾವಿನ ಸಂಖ್ಯೆ 1,66,862 ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 1,29,28,574 ರಷ್ಟಿದೆ, ಅದರಲ್ಲಿ 8,43,473 ಸಕ್ರಿಯ ಪ್ರಕರಣಗಳು ಮತ್ತು 1,18,51,393 ಜನರು ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ಭಾರತ ಅಮೇರಿಕಾ ಮತ್ತು ಬ್ರೆಜಿಲ್ ನಂತರದ ಮೂರನೇ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದೆ.

ಕಳೆದ ವರ್ಷ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ ಮೊದಲ ಬಾರಿಗೆ ದೈನಂದಿನ ಕೋವಿಡ್ -19 ಪ್ರಕರಣಗಳ ಸಂಖ್ಯೆ 1.25 ಲಕ್ಷವಾಗಿದೆ. ದೇಶದಲ್ಲಿ ಯಾವ ಯಾವ ರಾಜ್ಯಗಳಲ್ಲಿ ಎಷ್ಟು ಕೊರೊನಾ ಪ್ರಕರಣಗಳು ದಾಖಲಾಗಿವೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಛತ್ತೀಸ್‌ಗಢದಲ್ಲಿ – 10,310
ಕರ್ನಾಟಕ -6,976
ಉತ್ತರ ಪ್ರದೇಶ- 6,023
ದೆಹಲಿಯಲ್ಲಿ- 5,506
ಮಧ್ಯಪ್ರದೇಶ- 4,043
ಗುಜರಾತ್- 3,575
ಕೇರಳ -3,502
ತಮಿಳುನಾಡು -3,986 ಕರಣಗಳು
ಪಂಜಾಬ್ -2,997
ರಾಜಸ್ಥಾನದಲ್ಲಿ -2,801
ಪಶ್ಚಿಮ ಬಂಗಾಳದಲ್ಲಿ -2,390
ಹರಿಯಾಣ -2,366
ಆಂಧ್ರಪ್ರದೇಶ -2,331
ತೆಲಂಗಾಣ -1,914
ಬಿಹಾರ -1,527
ಜಾರ್ಖಂಡ್ -1,312
ಉತ್ತರಾಖಂಡ -1,109
ಜೆ & ಕೆ -812
ಒಡಿಶಾ -791
ಗೋವಾ- 527
ಚಂಡೀಗಢ- 39 399
ಅಸ್ಸಾಂ -195

ಬುಧವಾರದ ಒಟ್ಟಾರೆ ರಾಷ್ಟ್ರೀಯ ಅಂಕಿ ಅಂಶ ಇನ್ನೂ ಹೆಚ್ಚಾಗಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights