FACT CHECK | ಕರ್ನಾಟಕ ಸರ್ಕಾರ ಹಿಂದಿ ಭಾಷಿಕರ ವಿರುದ್ದ ತಾರತಮ್ಯ ಮಾಡುತ್ತಿದೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ಬೆಂಗಳೂರಿನ ರಾಜಾಜಿನಗರದ ನಮ್ಮ ಮೆಟ್ರೊ ರೈಲ್ವೆ ನಿಲ್ದಾಣದಲ್ಲಿ ‘ಬಟ್ಟೆ ಗಲೀಜಾಗಿದೆ’ ಎಂಬ ಕಾರಣಕ್ಕೆ ಪ್ರಯಾಣಿಕರೊಬ್ಬರನ್ನು ಮೆಟ್ರೊ ನಿಲ್ದಾಣದೊಳಗೆ ಬಿಡದೆ ಭದ್ರತಾ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದರು, ನಂತರ ಘಟನೆಯ ವಿಡಿಯೊ ಆಧರಿಸಿ ಸೆಕ್ಯುರಿಟಿ ಗಾರ್ಡ್‌ ಯಾದವ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಆದರೆ ಈ ಘಟನೆಗೆ ಸಂಬಂಧಿಸಿಂತೆ ಸಾಮಾಜಿಕ ಮಾಧ್ಯಮಗಳಲ್ಲಿ ರಾಜ್ಯ ಸರ್ಕಾರದ ವಿರುದ್ದ ಸುಳ್ಳು ಮತ್ತು ದ್ವೇಷದ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಹಿಂದಿ ರಾಜ್ಯಗಳ ಜನರ ವಿರುದ್ದ ತಾರತಮ್ಯ ನೀತಿ ಅನುಸರಿಸುತ್ತಿದ್ದ ಕರ್ನಾಟಕ ಸರ್ಕಾರ ತಮ್ಮದೆ ರಾಜ್ಯದ ರೈತನಿಗೂ ಬಟ್ಟೆ ಕೊಳಕಾಗಿದೆ ಎಂದು ಮೆಟ್ರೋ ರೈಲು ಪ್ರವೇಶವನ್ನು ನಿರಾಕರಿಸಿದೆ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ದ್ವೇಷ ತುಂಬಿದ ಸಮಾಜವನ್ನು ಕಾಂಗ್ರೆಸ್ ಸೃಷ್ಟಿಸುತ್ತಿದೆ, ಜನರ ಭಾಷೆ, ಬಡತನದ ಬಗ್ಗೆ ಅಪಹಾಸ್ಯ ಮತ್ತು ತಾರತಮ್ಯ ಮಾಡುತ್ತಿದೆ ಎಂದು @BALA  ಎಂಬ ಎಕ್ಸ್‌ನಲ್ಲಿ ಖಾತೆ ಬಳಕೆದಾರರ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ನಮ್ಮ ಮೆಟ್ರೋ ರೈಲು ನಿಲ್ದಾಣದಲ್ಲಿ ಬಟ್ಟೆ ಕೊಳಕಾಗಿದೆ ಎಂಬ ಕಾರಣಕ್ಕೆ ಪ್ರವೇಶ ನಿರಾಕರಿಸಲ್ಪಟ್ಟ ವ್ಯಕ್ತಿ ಕರ್ನಾಟಕದವರೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಬೆಂಗಳೂರು ನಮ್ಮ ಮೆಟ್ರೋ ರಾಜಾಜಿನಗರದ ನಿಲ್ದಾಣದಲ್ಲಿ  ‘ಬಟ್ಟೆ ಗಲೀಜಾಗಿದೆ’ ಎಂಬ ಕಾರಣಕ್ಕೆ ಮೆಟ್ರೊ ನಿಲ್ದಾಣದೊಳಗೆ ಪ್ರವೇಶ ನಿರಾಕರಿಸಲ್ಪಟ್ಟ ವ್ಯಕ್ತಿ ಉತ್ತರ ಪ್ರದೇಶದವರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿಗೆ ಬಂದಿದ್ದರು, ಕೆಲಸದ ನಿಮಿತ್ತ ರಾಜಾಜಿನಗರಕ್ಕೆ ಬಂದಿದ್ದ ಅವರು ಮೆಟ್ರೊ ಮೂಲಕ ಮೆಜೆಸ್ಟಿಕ್‌ಗೆ ಹೊರಟಿದ್ದರು. ತಲೆ ಮೇಲೆ ಬಟ್ಟೆಯ ಗಂಟು ಹೊತ್ತಿದರು. ಬಟ್ಟೆಗಳು ಗಲೀಜಾಗಿದ್ದವು. ಸರಿದಿಯಲ್ಲಿ ನಿಂತು ಟಿಕೆಟ್ ಪಡೆದು ನಿಲ್ದಾಣದೊಳಗೆ ತೆರಳುತ್ತಿದ್ದರು, ಪ್ರವೇಶ ದ್ವಾರದಲ್ಲಿ ಅವರನ್ನು ತಡೆದಿದ್ದ ಸಿಬ್ಬಂದಿ, ‘ನಿನ್ನ ಬಟ್ಟೆ ಗಲೀಜಾಗಿವೆ, ನಿಲ್ದಾನದೊಳಗೆ ಬಿಡುವುದಿಲ್ಲಹೊರಗೆ ಹೋಗು ಎಂದು ಏರು ಧ್ವನಿಯಲ್ಲಿ ಬೆದರಿಸಿದರು. ಹಿಂದಿ ಮಾತನಾಡುತ್ತಿದ್ದ ವ್ಯಕ್ತಿ, ಒಳಗೆ ಬಿಡುವಂತೆ  ಬೇಡಿಕೊಂಡರೂ ಸಿಬ್ಬಂದಿ ಬಿಟ್ಟರಲಿಲ್ಲ ಎಂದು ಪ್ರಜಾವಾಣಿ ವರದಿ ಮಾಡಿದೆ.

ವಾಸ್ತವವೇನಂದರೆ ಆ ಬಡಪಾಯಿ ವ್ಯಕ್ತಿ ಕನ್ನಡಿಗನಲ್ಲ, ಮೆಟ್ರೋ ಪ್ರವೇಶಿಸದಂತೆ ತಡೆದ ಮೆಟ್ರೋ ಸಿಬ್ಬಂದಿ ಕನ್ನಡಿಗನಲ್ಲ. ಬಡವನಿಗೆ ಸಹಾಯ ಮಾಡಿದವನು ಕನ್ನಡಿಗ. ಹಾಗಾಗಿ ಇಲ್ಲಿ ತಾರತಮ್ಯ ಎಂಬ ಪ್ರಶ್ನಯೇ ಉದ್ಬವಿಸುವುದಿಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

‘ವ್ಯಕ್ತಿಯ ಸಹಾಯಕ್ಕೆ ಬಂದಿದ್ದ ಸಾರ್ವಜನಿಕರು, ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಿದ್ದರು. ‘ವ್ಯಕ್ತಿ ರೈತರಂತೆ ಕಾಣುತ್ತಿದ್ದಾರೆ. ಬಟ್ಟೆ ಗಲೀಜು ಎಂಬ ಕಾರಣ ನೀಡಿ ತಡೆಯುತ್ತಿದ್ದೀರಾ? ಬಟ್ಟೆ ಗಲೀಜಾದರೆ ಬಿಡಬಾರದೆಂದು ಯಾರಾದರೂ ಹೇಳಿದ್ದಾರಾ? ಈ ಮೆಟ್ರೊ ಇರುವುದು ವಿಐಪಿಗಾ? ನಾವು ಚೆನ್ನಾಗಿ ಬಟ್ಟೆ ಧರಿಸಿದ್ದೇವೆ. ಹಾಗಾದರೆ ಉಚಿತವಾಗಿ ಒಳಗೆ ಬಿಡುತ್ತೀರಾ?’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ‘ವ್ಯಕ್ತಿ ಬಳಿ ಅನುಮಾನಾಸ್ಪದ ವಸ್ತುಗಳು ಇದ್ದರೆ ಒಳಗೆ ಬಿಡಬೇಡಿ. ಆದರೆ, ಈ ವ್ಯಕ್ತಿ ಹತ್ತಿರ ಕೇವಲ ಬಟ್ಟೆಗಳಿವೆ. ಈ ಕಾರಣ ನೀಡಿ ಒಳಗೆ ಬಿಡದಿರುವುದು ದೊಡ್ಡ ತಪ್ಪು’ ಎಂದು ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದರು. ಇದಾದ ನಂತರ, ಸಾರ್ವಜನಿಕರೇ ವ್ಯಕ್ತಿಯನ್ನು ನಿಲ್ದಾಣದೊಳಗೆ ಕರೆದೊಯ್ದು ರೈಲು ಹತ್ತಿಸಿ ಕಳುಹಿಸಿದರು’ ಎಂದು ಪ್ರತ್ಯಕ್ಷದರ್ಶಿ ತಿಳಿಸಿದರು ಎಂದು ಪ್ರಜಾವಾಣಿ ವರದಿ ಮಾಡಿದೆ.

@BALA ಎಂಬ ಎಕ್ಸ್‌ ಖಾತೆಯಲ್ಲಿ ಈ ಹಿಂದೆಯೂ ಹಲವು ಸುಳ್ಳು ಪೋಸ್ಟ್‌ ಹಂಚಿಕೊಂಡಿದೆ. ಈಗ ಕರ್ನಾಟಕ ಸರ್ಕಾರ ಹಿಂದಿ ಭಾಷಿಕನ್ನು ಗುರಿಯಾಗಿಸಿಕೊಂಡು ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ದ್ವೇಷಪೂರಿತ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ ಎಂದು ಹಲವು ಬಳಕೆದಾರರು ಕೋಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ನಮ್ಮ ಮೆಟ್ರೊ ರೈಲ್ವೆ ನಿಲ್ದಾಣದಲ್ಲಿ ‘ಬಟ್ಟೆ ಗಲೀಜಾಗಿದೆ’ ಎಂಬ ಕಾರಣ ನೀಡಿ ಪ್ರವೇಶ ನಿರಾಕರಣೆಗೆ ಒಳಪಟ್ಟ ವ್ಯಕ್ತಿ ಕರ್ನಾಟಕದ ರೈತನಲ್ಲ ಎಂಬುದು ಸ್ಪಷ್ಟವಾಗಿದೆ. ಆತ ಉತ್ತರ ಪ್ರದೇಶದ ವ್ಯಕ್ತಿ ಎಂದು ಹಲವು ಮಾಧ್ಯಮಗಳು ವರದಿಯಲ್ಲಿ ಉಲ್ಲೇಖಿಸಿವೆ. ಕರ್ನಾಟಕ ಸರ್ಕಾರ ಹಿಂದಿ ಭಾಷಿಕರ ವಿರುದ್ದ ತಾರತಮ್ಯ ನೀತಿ ಅನುಸರಿಸುತ್ತಿತ್ತು. ಆದರೆ ಈಗ ಕರ್ನಾಟಕದ ರೈತರ ವಿರುದ್ದವೇ ಇಂತಹ ತಾರತಮ್ಯಕ್ಕೆ ಇಳಿದಿದೆ ಎಂದು ಕರ್ನಾಟಕ ಸರ್ಕಾರವನ್ನು ಗುರಿಯಾಗಿಸಿಕೊಂಡು ಸುಳ್ಳು ಪೋಸ್ಟ್‌ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : 2024ರ ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ನಕಲಿ ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights