ಗ್ರಾಮ ಪಂಚಾಯತಿ ಚುನಾವಣೆ; ರಾಜ್ಯಾದ್ಯಂತ ಚುನಾವಣಾ ಬಹಿಷ್ಕಾರದ ಪರ್ವ!

ಚುನಾವಣಾ ಆಯೋಗವು ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳನ್ನು ನಡೆಸಲು ದಿನಾಂಕವನ್ನು ಪ್ರಕಟಿಸಿದೆ. ಈ ಬೆನ್ನಲ್ಲೇ ರಾಜ್ಯಾದ್ಯಂತ ಹಲವು ಗ್ರಾಮಗಳು ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿವೆ.

ಹಳ್ಳಿಗಳ ಮೂಲಭೂತ ಸೌಕರ್ಯಗಳಾದ ಸರಿಯಾದ ರಸ್ತೆ. ಒಳಚರಂಡಿ ವ್ಯವಸ್ಥೆ, ಮತ್ತು ಸ್ವಚ್ಛ ಕುಡಿಯುವ ನೀರನ ಸೌಲಭ್ಯ ತಮ್ಮ ಊರುಗಳಿಗಿಲ್ಲ. ಶೀಘ್ರವೇ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದರೆ ಮುಂದಿನ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸುವುದಾಗಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಜಿಗಳೂರು ಗ್ರಾಮಸ್ಥರು ಮತ್ತು ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮಸ್ಥರು ತಿಳಿಸಿದ್ದು, ರೋಣ ತಾಲ್ಲೂಕಿನ 10 ಗ್ರಾಮಗಳು ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿನಲ್ಲಿರುವ ಕೈಗಾರಿಕಾ ಪ್ರದೇಶಕ್ಕೆ ಒಂದಿಕೊಂಡಿರುವ ನಾಲ್ಕು ಗ್ರಾಮಗಳ ಗ್ರಾಮಸ್ಥರೂ ಕೂಡ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ. ಅಡಕನಹಳ್ಳಿಯ ಬಳಿ ಇರುವ ಏಷ್ಯನ್‌ಪೇಂಟ್ಸ್‌ ಕಾರ್ಖಾನೆಯ ಮಾಲೀಕರು ಹಳ್ಳಿಯ ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ರೈತರು ಜಮೀನು ಪಡೆದುಕೊಂಡಿದ್ದಾರೆ. ಆದರೆ. ಹಳ್ಳಿಯ ಯುವಜನರಿಗೆ ಉದ್ಯೋಗ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸ್ಥಳೀಯ ಆಡಳಿತ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಹಿಮ್ಮಾವು, ಹುಳಿಮಾವು, ಹಿಮ್ಮಾವು ಹುಂಡಿ, ಬಕ್ಕಳಿ ಗ್ರಾಮಗಳು ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಖಾಂಡ್ಯ ಹೋಬಳಿಯ ಜನರು ಸ್ಥಳೀಯ ಮೂಲಭೂತ ಸಮಸ್ಯೆಗಳನ್ನು ಅಧಿಕಾರಿಗಳು ಆಲಿಸುತ್ತಿಲ್ಲ. ಸಮಸ್ಯೆಗಳ ಸಾರಾಸಗಟಾಗಿ ಮನೆ ಮಾಡಿವೆ. ಸಮಸ್ಯೆಗಳನ್ನು ಪರಿಹರಿಸುವವರೆಗೂ ನಾವು ಮತ ಚಲಾಯಿಸುವುದಿಲ್ಲ,. ಗ್ರಾಮ ಪಂ. ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಘೋಷಿಸಿದ್ದಾರೆ. ಗ್ರಾಮಸ್ಥರ ಜೊತೆಗೆ ಅಧಿಕಾರಿಗಳು ಸಂದಾನದ ಮಾತುಕತೆ ಮಾಡಿದ್ದರೂ ಜಗ್ಗದ ಹಳ್ಳಿಗರು ಚುನಾವಣಾ ಬಹಿಷ್ಕಾರ ಶತಸಿದ್ದ ಎಂದು ಹೇಳಿದ್ದಾರೆ.

ಡಿಸೆಂಬರ್ 22 ಮತ್ತು 27 ರಂದು ಎರಡು ಹಂತದ ಚುನಾವಣೆ ನಡೆಯಲಿದೆ. ಡಿಸೆಂಬರ್ 30 ರಂದು ಫಲಿತಾಂಶ ಘೋಷಣೆಯಾಗಲಿದೆ.


ಇದನ್ನೂ ಓದಿ: ಗ್ರಾಮ ಪಂಚಾಯತಿ ಚುನಾವಣಗೆ ಬಿಜೆಪಿ ತಂತ್ರ: ಸಫಲವಾಗುತ್ತಾ 6:6 ಸ್ಟ್ಯಾಟಜಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

2 thoughts on “ಗ್ರಾಮ ಪಂಚಾಯತಿ ಚುನಾವಣೆ; ರಾಜ್ಯಾದ್ಯಂತ ಚುನಾವಣಾ ಬಹಿಷ್ಕಾರದ ಪರ್ವ!

  • December 7, 2020 at 11:08 am
    Permalink

    SARKARD KELASAGALELLA BAREE PRACHAR SAMAGRIGALAGIRUVANTE BHASAVAGIRABEKASTE… JAN NONDIDDARE ANNUVADU SARKARAKKEW TILYADE YIRUVADU VISHADADA SANGATI. BAYI, MOOGU MUCHCHI USIRADISUVANTAHA STHITINIRMANAVADEDE HEEGAGUTTE ANNISUTTE!

    Reply
  • December 7, 2020 at 11:09 am
    Permalink

    covid mantrakshateyante yella karyakku kalasa yiduttide alla?!

    Reply

Leave a Reply

Your email address will not be published.

Verified by MonsterInsights