FACT CHECK : ‘ಬ್ರೇಕಿಂಗ್ ನ್ಯೂಸ್’ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ ಮುಖ್ಯವಾಹಿನಿ ಮಾಧ್ಯಮಗಳು

ಫೆಬ್ರವರಿ  27, 2024 ರಂದು (ಮಂಗಳವಾ) ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕದಿಂದ ಮೂವರು ಕಾಂಗ್ರೆಸ್‌ ಅಭ್ಯರ್ಥಿಗಳು ಮತ್ತು ಓರ್ವ ಬಿಜೆಪಿ- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಗೆಲುವನ್ನು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಾಕನ್, ನಾಸಿರ್ ಹುಸೇನ್ ಹಾಗೂ ಜಿ.ಸಿ. ಚಂದ್ರಶೇಖರ್ ಅವರು ಜಯ ಗಳಿಸಿದ್ದರು. ನಾಸಿರ್ ಹುಸೇನ್ ಗೆಲುವಿನ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಸಿರ್ ಹುಸೇನ್ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಈ ವೇಳೆ ‘ಪಾಕಿಸ್ತಾನ್‌ ಝಿಂದಾಬಾದ್ʼ ಘೋಷಣೆ ಕೂಗಿದ್ದಾರೆ ಎಂದು ಕನ್ನಡದ ಎಲ್ಲ ಮುಖ್ಯವಾಹಿನಿ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಪ್ರಕಟಿಸಿದ್ದವು.

“ನಾಸಿರ್‌ ಹುಸೇನ್‌ ಅವರ ಪಕ್ಕದಲ್ಲೇ ಇದ್ದ ವ್ಯಕ್ತಿ ಪಾಕಿಸ್ತಾನ್‌ ಝಿಂದಾಬಾದ್, ಪಾಕಿಸ್ತಾನ್‌ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಪಕ್ಕದಲ್ಲಿದ್ದ ಕೆಲ ಕಾರ್ಯಕರ್ತರು ಆತನ ಬಾಯಿಮುಚ್ಚಿಸಿರುವ ವಿಡಿಯೋ ವೈರಲ್‌ ಆಗಿದೆ” ಎಂದು ಟಿವಿ ಚಾನಲ್‌ ಗಳು ಸುಳ್ಳು ಸುದ್ದಿ ಹರಡಿವೆ. ಜೊತೆಗೆ ಬಿಜೆಪಿ ನಾಯಕರಿಂದ ಪ್ರತಿಕ್ರಿಯೆಯನ್ನೂ ಕೇಳಿವೆ. ಬಿಜೆಪಿ ನಾಯಕರು ವಿಧಾನ ಸೌಧ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಕಾರ್ಯದರ್ಶಿ, ಕಾಂಗ್ರೆಸ್ ನ ನಸೀರ್ ಹುಸೇನ್ ಗೆದ್ದ ನಂತರ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳು ಮೊಳಗಿದೆ ಎಂದು ಆಪಾದಿಸಿದ್ದರು.

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ - Vistara News Pakistan Zindabad Slogan In Vidhana Soudha: ಪಾಕಿಸ್ತಾನ ಜಿಂದಾಬಾದ್ ನಾಸಿರ್ ಹುಸೇನ್ ಕೂಗಿದ ಬೆಂಬಲಿಗರು - YouTubeStudents Raise Pakistan Zindabad Slogans At A College In Bengaluru | Public TV - YouTubeLIVE: Pakistan Zindabad Slogans at Vidhana Soudha | ರಿಪಬ್ಲಿಕ್ ಕನ್ನಡದಲ್ಲಿ EXCLUSIVE ವಿಡಿಯೋ - YouTube

ಪಾಕಿಸ್ತಾನ್ ಝಿಂದಾಬಾದ್‌ ಘೋಷಣೆ ಕೂಗಲಾಗಿದೆ ಎಂಬ ವಿಚಾರವಾಗಿ ರಾಜ್ಯ BJP ನಾಯಕರು ಇಂದು (28 ಫೆ) ಸದನದಲ್ಲಿ ಗದ್ದಲ  ಎಬ್ಬಿಸಿ ಪಾಕ್ ಪರ ಘೋಷಣೆ ಕೂಗಿದವರನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದಿದ್ದರು.

ವಾಸ್ತವವೇನು ?

ಸುದ್ದಿ ಮಾದ್ಯಮಗಳು ವರದಿ ಮಾಡಿದ ವಿಡಿಯೋ ಹಾಗೂ ಇತರ ಹಲವು ವಿಡಿಯೋಗಳನ್ನು ಪರಿಶೀಲಿಸಿದಾಗ, ಕನ್ನಡ ಸುದ್ದಿ ಮಾದ್ಯಮಗಳು ಸುಳ್ಳು ಸುದ್ದಿ  ಎನ್ನುವುದು ಬಯಲಾಗಿದೆ. ನಾಸೀರ್‌ ಹುಸೇನ್‌ ಗೆಲುವನ್ನು ಸಂಭ್ರಮಿಸುತ್ತಿರುವಾಗ ಅವರ ಬೆಂಬಲಿಗರು ಅವರ ಪಕ್ಕದಲ್ಲೇ ನಿಂತುಕೊಂಡು ‘ನಾಸೀರ್ ಸಾಬ್ ಝಿಂದಾಬಾದ್’ ಎಂದು ಘೋಷಣೆ ಕೂಗಿರುವುದು ಸ್ಪಷ್ಟವಾಗಿ ವಿಡಿಯೋಗಳಲ್ಲಿ ಸೆರೆಯಾಗಿದೆ. ನಾಸೀರ್‌ ಹುಸೇನ್‌ ಗೆಲುವನ್ನು ಸಂಭ್ರಮಿಸುತ್ತಿರುವಾಗ ನೂರಾರು ಬೆಂಬಲಿಗರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಸೇರಿದ್ದರು. ಅವರು ‘ನಾಸೀರ್ ಸಾಬ್ ಝಿಂದಾಬಾದ್’ ಎಂದು ಕೂಗಿದ್ದಾರೆ ಹೊರತು ಪಾಕಿಸ್ತಾನ ಝಿಂದಾಬಾದ್‌ ಎಂದು ಕೂಗಿಲ್ಲ ಎನ್ನುವುದು ಬಯಲಾಗಿದೆ.

ವಿಧಾನ ಸೌಧದಲ್ಲಿ ರಾಜ್ಯ ಸಭೆಗೆ ನಡೆದ ಚುನಾವಣೆ ಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಅವರ ಪರವಾಗಿ ಅವರ ಬೆಂಬಲಿಗರು “ನಾಸೀರ್ ಸಾಬ್ ಜಿಂದಾಬಾದ್” ಎಂದು ಕೂಗಿದ್ದಾರೆ. ಅದರೆ ಕರ್ನಾಟಕದ ಬಹುತೇಕ ಮಾಧ್ಯಮಗಳು “ಪಾಕಿಸ್ತಾನ್ ಜಿಂದಾಬಾದ್” ಎಂದು ತಪ್ಪಾಗಿ ವರದಿ ಮಾಡಿವೆ.

ಪಾಕಿಸ್ತಾನ್‌ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿರುವ ಸಂದರ್ಭದಲ್ಲಿ ಸ್ಥಳದಲ್ಲೇ ಹಾಜರಿದ್ದ ಮತ್ತೊಬ್ಬ ಪತ್ರಕರ್ತ ಕೂಡ ಅಂತಹ ಯಾವುದೇ ಘೋಷಣೆಗಳನ್ನು ಕೂಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಾಸಿರ್ ಸಾಬ್ ಜಿಂದಾಬಾದ್ ಎಂದು ಬೆಂಬಲಿಗರು ಕೂಗಿದ್ದನ್ನೇ ಪಾಕಿಸ್ತಾನ ಜಿಂದಾಬಾದ್ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಆಲ್ಟ್‌ನ್ಯೂಸ್‌ನ ಜುಬೇರ್ ಟ್ವೀಟ್ ಮಾಡಿದ್ದಾರೆ.

 

ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವಿಡಿಯೋ ಮತ್ತು ಬಿಜೆಪಿ ವಿಧಾನಸಭಾ ಅಧಿವೇಶನದಲ್ಲಿ ಮಾಡಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ವಿಡಿಯೋವನ್ನು  ಎಫ್ ಎಲ್ ಎಸ್‌ಗೆ ಕಳುಹಿಸಿ ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ದೇಶವಿರೋಧಿ ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ ಅಂಥವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಎಫ್.ಎಸ್.ಎಲ್ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಎಂದು ತಿಳಿಸಿದ್ದಾರೆ. 
ವಾಸ್ತವವಾಗಿ ವಿಡಿಯೋದಲ್ಲಿ ನಾಸೀರ್ ಹುಸೇನ್ ಅವರ ಬೆಂಬಲಿಗರು ’ನಾಸೀರ್‌ ಸಾಬ್‌ ಜಿಂದಾಬಾದ್’ ಎಂದು ಕೂಗಿರುವುದು ಸ್ಪಷ್ಟವಾಗಿದೆ. ಆದರೂ ಸರ್ಕಾರ ವಿಡಿಯೋವನ್ನು ಎಫ್.ಎಸ್.ಎಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದು ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

 


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights