ತಮಿಳುನಾಡು: ಸಿಎಎ ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಂಡು AIADMK ಅಧಿಕಾರಕ್ಕೆ ಮರಳುತ್ತದೆಯೇ?

ತಮಿಳುನಾಡಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೈಬಿಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಘೋಷಿಸಿದ್ದಾರೆ. ಚುನಾವಣೆಗೂ ಮುನ್ನ ಅವರ ಈ ಘೋಷಣೆಯು ಅಲ್ಪಸಂಖ್ಯಾತ ಸಮುದಾಯವನ್ನು ಸಮಾಧಾನ ಪಡಿಸುವ ಉದ್ದೇಶವನ್ನು ಹೊಂದಿದ್ದರೂ, ರಾಜ್ಯದಲ್ಲಿ ಮುಖ್ಯವಾಗಿ ಕೊರೊನಾ, ಲಾಕ್‌ಡೌನ್‌ ಸಂದರ್ಭದ ಇಶ್ಯೂಗಳು ಹಾಗೂ ನಿರುದ್ಯೋಗ ಸಮಸ್ಯೆಯು ಆಡಳಿತ ವಿರೋಧಿ ಅಲೆಯನ್ನು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.

ಸಿಎಎ ಪ್ರತಿಭಟನಾಕಾರರು ನ್ಯಾಯಾಲಯದ ತೀರ್ಪು-ನಿಲುವುಗಳಿಗಾಗಿ ತಾಳ್ಮೆಯಿಂದ ಕಾಯುತ್ತಿದ್ದಾರೆ. ಈ ಆಂದೋಲನವು ತಮ್ಮ ಅಭಿಪ್ರಾಯಗಳನ್ನು ಒಟ್ಟುಗೂಡಿಸಿದೆ ಎಂದು ಅವರು ಭಾವಿಸಿದ್ದಾರೆ. ಹಾಗಾಗಿ ಸಿಎಎ ಪ್ರಕರಣಗಳನ್ನು ಕೈಬಿಡುವುದಕ್ಕಿಂತಲೂ ಮುಖ್ಯವಾಗಿ ಹೊಸದಾಗಿ ರಚನೆಯಾಗುವ ಸರ್ಕಾರವು ಉದ್ಯೋಗಗಳನ್ನು ಸೃಷ್ಟಿಸುವ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಲು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದರ ಬಗ್ಗೆ ರಾಜ್ಯದ ಜನರು ಹಾಗೂ ಪ್ರತಿಭಟನಾಕಾರರು ಎದುರು ನೋಡುತ್ತಿದ್ದಾರೆ.

ರಾಜ್ಯದಲ್ಲಿ ಎದುರಾಗಿರುವ ಅವಕಾಶಗಳ ಕೊರತೆಯಿಂದಾಗಿ ರಾಜ್ಯದ ಮಧ್ಯವಯಸ್ಸಿವರು ಮತ್ತು ಯುವಜನರು ಪಶ್ಚಿಮ ಏಷ್ಯಾದ ದೇಶಗಳಲ್ಲಿ ಕೌಶಲ್ಯರಹಿತ ಅಥವಾ ಅರೆ-ನುರಿತ ಉದ್ಯೋಗಗಳಿಗಾಗಿ ವಲಸೆ ಹೋಗಿದ್ದಾರೆ. ಇಲಾಯಂಗುಡಿ ( ಶಿವಗಂಗ), ಕೈಲ್ಪಟ್ಟಿನಂ (ತೂತುಕುಡಿ), ಮತ್ತು ಕೀಲಕರಿ (ರಾಮನಾಥಪುರಂ)ನ ಮುಸ್ಲಿಮರಲ್ಲಿ ಒಂದು ಭಾಗದಷ್ಟು ಜನರು ಮಲೇಷ್ಯಾ, ಥೈಲ್ಯಾಂಡ್ ಮತ್ತು ಬ್ಯಾಂಕಾಕ್‌ನಲ್ಲಿ ರಸ್ತೆ ಬದಿಯಲ್ಲಿ ತಿನಿಸುಗಳನ್ನು ಮಾರಟ ಮಾಡುವ ಕೆಲಸಗಳಿಗೆ ಹೋಗಿದ್ದಾರೆ ಎಂದು ಅರೇಬಿಕ್ ಪ್ರಾಧ್ಯಾಪಕ ಕೆಎಂಎ ಅಹ್ಮದ್ ಜುಬೈರ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ರಾಹುಲ್‌ ಯುವಜನರನ್ನು ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಪ್ರಚೋದಿಸಿದ್ದಾರೆ; ಅವರನ್ನು ತಮಿಳುನಾಡು ಪ್ರಚಾರದಿಂದ ನಿರ್ಬಂಧಿಸಬೇಕು: ಬಿಜೆಪಿ

ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅಧ್ಯಯನ ಮಾಡಲು 2005 ರಲ್ಲಿ ಸ್ಥಾಪಿಸಲಾದ ಸಚಾರ್ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಜಾರಿಗೆ ತರಬೇಕೆಂದು ಮುಸ್ಲಿಮರ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಶಿಕ್ಷಣ ತಜ್ಞರು ಒತ್ತಾಯಿಸಿದ್ದಾರೆ.

ದೆಹಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಾಜಿಂದರ್ ಸಚಾರ್ ನೇತೃತ್ವದ ಸಮಿತಿಯು ಮುಸ್ಲಿಮರ ಉದ್ಯೋಗ ಪಾಲನ್ನು ಸುಧಾರಿಸಲು ಕ್ರಮಗಳನ್ನು ಶಿಫಾರಸು ಮಾಡಿತ್ತು. ಇದರಲ್ಲಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ತಾರತಮ್ಯವನ್ನು ಪರಿಶೀಲಿಸಲು ‘ಸಮಾನ ಅವಕಾಶ ಆಯೋಗ’ ಸ್ಥಾಪಿಸಲಾಗಿತ್ತು ಎಂದು ಅವರು ಹೇಳಿರುವುದಾಗಿ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಆದಾಗ್ಯೂ, ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಸೆಂಟರ್ ಫಾರ್ ಸ್ಟಡೀಸ್ ಇನ್ ಸೋಶಿಯಲ್ ಸೈನ್ಸಸ್ (ಕಲ್ಕತ್ತಾ) ನ ಮಾಜಿ ಪ್ರಾಧ್ಯಾಪಕ ಡಾ. ಕಾರ್ತಿಕ್ ರಾಮ್ ಮನೋಹರನ್, ಎಐಎಡಿಎಂಕೆ ಕೋಮು ದ್ವೇಷದ ಭಾಷಣಗಳು-ಮಾತುಗಳನ್ನು ಬಳಸಿಲ್ಲ ಅಥವಾ ಅದರ ನಾಯಕರು ಕೋಮುವಾದಿಗಳಲ್ಲ. ಸಿಎಎ ಪ್ರತಿಭಟನಾಕಾರರ ವಿರುದ್ಧದ ಕೇಸುಗಳನ್ನು ಹಿಂತೆಗೆದುಕೊಳ್ಳುವ ಸರ್ಕಾರದ ನಿರ್ಧಾರವು, ಕೇಸರಿ ಪಕ್ಷದೊಂದಿಗಿನ ಮೈತ್ರಿಯ ಹೊರತಾಗಿಯೂ, ಎಐಎಡಿಎಂಕೆಗೆ ಮುಸ್ಲಿಂ ಸಮುದಾಯದ ಪ್ರತಿರೋಧವನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.

ಆದರೂ, ರಾಜ್ಯದ ರಾಜಕೀಯದ ಮೇಲೆ ಸಿಎಎ ಪ್ರತಿಭಟನೆಯ ಪ್ರಭಾವವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುವುದಿಲ್ಲ. ಮುಂಬರುವ ಚುನಾವಣೆಗಳಲ್ಲಿ ಈ ವಿಷಯವು ಅಷ್ಟೊಂದು ಮಹತ್ವದ್ದಾಗಿರಬಾರದು ಎಂಬ ಅಭಿಪ್ರಾಯವಿದ್ದರೂ, ಆಡಳಿತಾರೂಢ AIADMK ಯೊಂದಿಗಿನ ಬಿಜೆಪಿಯ ಮೈತ್ರಿಯನ್ನು ಒಪ್ಪಿಕೊಳ್ಳಲು ಇನ್ನೂ ಹಿಂಜರಿಕೆ ಇದೆ ಎಂದು ಅವರು ಹೇಳಿದ್ದಾರೆ.

ವಾಸ್ತವವಾಗಿ, ಎರಡು ದಿನಗಳ ಹಿಂದೆ, ವನಿಯಂಬಾಡಿ ಶಾಸಕ ನಿಲೋಫರ್ ಕಫೀಲ್ ಅವರು ತಮ್ಮ ಕ್ಷೇತ್ರದ ಪ್ರಚಾರಕ್ಕಾಗಿ ಭೇಟಿ ನೀಡಿದಾಗ, ಮಸೀದಿಯ ಸದಸ್ಯರೊಬ್ಬರು ತಮ್ಮ ಪ್ರಚಾರ ವಾಹನಗಳು ಎಐಎಡಿಎಂಕೆ ಧ್ವಜಗಳನ್ನು ಮಾತ್ರ ಪ್ರದರ್ಶಿಸಬೇಕು. ಬಿಜೆಪಿಯ ಬಾವುಟಗಳನ್ನು ಪ್ರದರ್ಶಿಸಬಾರದು ಎಂದು ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹರಿಯಾಣ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ; ಬಹುಮತ ಗೆದ್ದು ಸರ್ಕಾರ ಉಳಿಸಿಕೊಂಡ BJP

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights