ನಾಳೆ ಸಾರಿಗೆ ಸಂಚಾರ ಕಂಪ್ಲೀಟ್ ಬಂದ್ : ಕೆಲಸಕ್ಕೆ ಹೋಗೋ ಬೆಂಗಳೂರಿಗರೇ ಎಚ್ಚರ.. ಎಚ್ಚರ..
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆಯಿಂದ ಮತ್ತೆ ಸಾರಿಗೆ ಸಿಬ್ಬಂದಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ರಾಜ್ಯದ ಎಲ್ಲಾ ಸಾರಿಗೆ ನಿಗಮಗಳು ಮುಷ್ಕರದಲ್ಲಿ ಭಾಗಿಯಾಗಲಿವೆ.
ಹೌದು…ಈ ಹಿಂದೆ ಸಾರಿಗೆ ಸಿಬ್ಬಂದಿ ಪ್ರತಿಭಟನೆಯ ತಡೆಗೆ ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. 3 ತಿಂಗಳ ಗಡುವು ಕೊಟ್ಟಿತ್ತು. ಆದರೆ ಆರನೇ ವೇತನ ಶಿವಾರಸ್ಸಿಗೆ ಸರ್ಕಾರ ಹಿಂದೇಟು ಹಾಕುತ್ತಿದ್ದು ಸರ್ಕಾರದ ನಡೆಗೆ ಖಂಡಿಸಿ ನಾಳೆಯಿಂದ ಸಾರಿಗೆ ನೌಕರರು ಮುಷಕರಕ್ಕೆ ಮುಂದಾಗಿದ್ದಾರೆ. ಟುಂಬ ಸಮೇತರಾಗಿ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.
ರಾಜ್ಯಾದ್ಯಂತ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ನಿಗಮಗಳ 25 ಸಾವಿರ ಬಸ್ ಗಳು ಬಂದ್ ಆಗುತ್ತವೆ. ಇದರಲ್ಲಿ ಸರಿಸುಮಾರು 30 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಬೆಂಗಳೂರಿನಲ್ಲಿ ಸರಿಸುಮಾರು 6 ಸಾವಿರ ಬಸ್ ಗಳಲ್ಲಿ ಪ್ರಯಾಣ ಮಾಡುತ್ತವೆ. ಹೀಗಾಗಿ ಬೆಂಗಳೂರಿಗರಿಗೆ ಬಸ್ ಬಂದ್ ಬಿಸಿ ತಟ್ಟಲಿದೆ. ಕೇವಲ ನಾಳೆ ಮಾತ್ರವಲ್ಲ ಮುಷ್ಕರ ಮುಗಿಯುವವರೆಗೂ ಪ್ರಯಾಣಿಕರಿಗೆ ತೊಂದರೆ ತಪ್ಪಿದ್ದಲ್ಲ.
ಈ ಬಾರಿ ಮಾತ್ರ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ತಾವು ಮುಷ್ಕರ ಕೈಬಿಡುವುದಿಲ್ಲ ಎಂದು ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ರಾಜ್ಯದ ಜನತೆಗೆ ಬಂದ್ ಬಿಸಿ ತಟ್ಟುವುದು ಪಕ್ಕ. ನಾಳೆಯಿಂದ ರಾಜ್ಯದಲ್ಲಿ ಸಂಚಾರ ಮಾಡಬೇಕು ಅನ್ನೋ ಜನ ಮಾತ್ರ ಎಚ್ಚರ ವಹಿಸಬೇಕು.