ಅಂತರ್‌ಜಾತಿ ವಿವಾಹಕ್ಕೆ ಜಾತಿ ಮುಖ್ಯಸ್ಥನ ಅಡ್ಡಿ-ಬೆದರಿಕೆ; ಪೊಲೀಸರಿಗೆ ದೂರು ನೀಡಿದ ಯುವಕ!

ತಾನು ಪ್ರೀತಿಸಿದ ಯುವತಿಯನ್ನು ವಿವಾಹವಾಗಲು ತಮ್ಮ ಜಾತಿಯ ಮುಖ್ಯಸ್ಥ ಅನುಮತಿಸುತ್ತಿಲ್ಲ, ಮದುವೆಯಾಗದಂತೆ ಬೆದರಿಗೆ ಹಾಕುತ್ತಿದ್ದಾರೆ ಎಂದು ಮಹಾರಾಷ್ಟ್ರದ ನಾಸಿಕ್‌ ಮೂಲದ ಯುವಕನೊಬ್ಬ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಾಸಿಕ್‌ ಬಳಿಯ ಸಿನ್ನಾರ್‌ ನಿವಾಸಿಯಾಗಿರುವ 20 ವರ್ಷದ ಯುವಕ, ತಾನು ಮತ್ತೊಂದು ಜಾರಿಯ 18 ವರ್ಷದ ಯುವತಿಯನ್ನು ಪ್ರೀತಿಸಿದ್ದು, ಆಕೆಯನ್ನು ಮದುವೆಯಾಗಲು ನಿರ್ಧರಿಸಿದ್ದೇನೆ. ಆದರೆ, ತಾನು ಸೇರಿದ ಜಾತಿಯ ಮುಖ್ಯಸ್ಥ ಅಂತರ್‌ಜಾತಿಯಲ್ಲಿ ವಿವಾಹವಾಗಲು ಅವಕಾಶ ನೀಡುತ್ತಿಲ್ಲ. ತನ್ನನ್ನು ಸಮುದಾಯದಿಂದ ಹೊರಗಿಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾನೆ.

ಆತ ಈ ಬಗ್ಗೆ ಸಿನ್ನಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

Read Also: AIADMK ಜೊತೆಗೆ BJP ಮೈತ್ರಿ ಮಾಡಿಕೊಂಡಿರುವ ಉದ್ದೇಶ ಆ ಪಕ್ಷವನ್ನು ಮುಗಿಸುವುದು: ದಿನೇಶ್ ಗುಂಡೂರಾವ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights