IPL 2021ಕ್ಕೆ ದಿನಾಂಕ ಫಿಕ್ಸ್‌: ಏಪ್ರಿಲ್‌ 09ರಿಂದ ಮೇ 30ರ ವರೆಗೆ ಐಪಿಎಲ್‌ ಹಂಗಾಮ!

2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ವೇಳಪಟ್ಟಿಯಲ್ಲಿ ಬಿಸಿಸಿಐ ಪ್ರಕರಟಿಸಿದ್ದು, ಐಪಿಎಲ್‌ 2021ರ ಮೊದಲ ಆಟ ಏಪ್ರಿಲ್‌ 09ರಂದು ಆರಂಭವಾಗಲಿದ್ದು, ಮೇ 30ರಂದು ಫೈನಲ್‌ ಪಂದ್ಯ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಭಾನುವಾರ ಪ್ರಕಟಿಸಿದೆ.

ಚೆನ್ನೈನರುವ ಕ್ರಿಕೆಟ್‌ ಮೈದಾನದಲ್ಲಿ ಐಪಿಎಲ್‌ 2021ರ ಟೂರ್ನಿ ಉದ್ಘಾಟನೆಯಾಗಲಿದ್ದು, ಮೊದಲ ಪಂದ್ಯವು ಹಾಲಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ನಡೆಯಲಿದೆ.

ಈ ಬಾರಿಯ ಐಪಿಎಲ್ ಟೂರ್ನಿಯು ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ನಗರಗಳಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.

2021ರ ಐಪಿಎಲ್‌ ಟೂರ್ನಿಯು 14ನೇ ಆವೃತ್ತಿಯದ್ದಾಗಿದ್ದು, ಇದರ ಪೈನಲ್‌ ಪಂದ್ಯವು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 30 ರಂದು ನಡೆಯಲಿದೆ.

“56 ಲೀಗ್ ಪಂದ್ಯಗಳ ಪೈಕಿ ಚೆನ್ನೈ, ಮುಂಬೈ, ಕೋಲ್ಕತಾ ಮತ್ತು ಬೆಂಗಳೂರು ನಗರಗಳಲ್ಲಿ ತಲಾ 10 ಪಂದ್ಯಗಳು ನಡೆಯಲಿವೆ.  ಅಹಮದಾಬಾದ್ ಮತ್ತು ದೆಹಲಿಯಲ್ಲಿ ತಲಾ 8 ಪಂದ್ಯಗಳನ್ನು ಆಯೋಜಿಸಲಾಗಿದೆ.

“ಕಳೆದ ವರ್ಷ ಯುಎಇಯಲ್ಲಿ ಎಲ್ಲಾ ಸುರಕ್ಷತಾ ಪ್ರೋಟೋಕಾಲ್ ಗಳೊಂದಿಗೆ ಪಂದ್ಯಾವಳಿಯನ್ನು ಸುರಕ್ಷಿತವಾಗಿ ಮತ್ತು ಯಶಸ್ವಿಯಾಗಿ ಆಯೋಜಿಸಿದ ನಂತರ, ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯೊಂದಿಗೆ ನಮ್ಮದೇ ದೇಶದಲ್ಲಿ ಐಪಿಎಲ್ ಅನ್ನು ನಡೆಸುವ ವಿಶ್ವಾಸವನ್ನು ಬಿಸಿಸಿಐ ಹೊಂದಿದೆ ಮತ್ತು ಭಾಗವಹಿಸುವ ಎಲ್ಲ ಜನರು ಅತ್ಯುನ್ನತ ಸ್ಥಾನದಲ್ಲಿರಲಿದ್ದಾರೆ.”ಪ್ರಕಟಣೆ ಹೇಳಿದೆ.

ಇದನ್ನೂ ಓದಿ: eng vs ind: ಇಂಗ್ಲೆಂಡ್‌ ವಿರುದ್ಧ ಭರ್ಜರಿ ಜಯ; ಚಾಂಪಿಯನ್‌ ಶಿಪ್ ಫೈನಲ್‌ಗೆ ಟೀಂ ಇಂಡಿಯಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights