eng vs ind: ಇಂಗ್ಲೆಂಡ್‌ ವಿರುದ್ಧ ಭರ್ಜರಿ ಜಯ; ಚಾಂಪಿಯನ್‌ ಶಿಪ್ ಫೈನಲ್‌ಗೆ ಟೀಂ ಇಂಡಿಯಾ!

ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ನಡುವೆ ನಡೆದ 4ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು, ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯ ಗೆಲುವನ್ನು ತನ್ನ ಮುಡಿಗೇರಿಸಿಕೊಂಡಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಒಂದು ಇನ್ನಿಂಗ್ಸ್‌ ಹಾಗೂ 25 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. 3-1 ಸಮೀಕರಣದಲ್ಲಿ ಟೆಸ್ಟ್‌ ಗೆದ್ದಿರುವ ಟೀಂ ಇಂಡಿಯಾ, ಈ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ಗೆ ಆಯ್ಕೆಯಾಗಿದ್ದು, ಪೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೆಣೆಸಾಡಲಿದೆ.

ಕಳೆದ ಎರಡು ದಿನಗಳಿಂದ ನಡೆದ ಇಂಗ್ಲೆಂಡ್‌ ಜೊತೆಗಿನ ಅಂತಿಮ ಟೆಸ್ಟ್‌ನ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 160 ರನ್​ಗಳ ಮುನ್ನಡೆ ಸಾಧಿಸಿತ್ತು. ಈ ರನ್‌ಗಳನ್ನು ಬೆನ್ನತ್ತಿ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್‌ ತಂಡ ಆರಂಭದಲ್ಲೇ ವಿಕೆಟ್​ಗಳನ್ನ ಕಳೆದುಕೊಳ್ಳಲು ಪ್ರಾರಂಭಿಸಿತು. ಇದರಿಂದಾಗಿ 2ನೇ ಇನ್ನಿಂಗ್ಸ್‌ನಲ್ಲಿ 135 ರನ್‌ಗಳಿಗೆ ಆಲ್‌ ಓಟ್‌ ಆಯಿತು. ಇದರಿಂದಾಗಿ ಮೊದಲ ಇನ್ನಿಂಗ್ಸ್‌ನಲ್ಲೇ 365 ರನ್‌ ಸಿಡಿಸಿದ್ದ ಟೀಂ ಇಂಡಿಯಾ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡದೆಯೇ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್‌ ತಂಡ 205 ರನ್​ಗಳನ್ನು ಕಲೆಹಾಕಿತ್ತು. ಇದರ ಬೆನ್ನತ್ತಿದ್ದ ಟೀಂ ಇಂಡಿಯಾ 365 ರನ್‌ ಬಾರಿಸಿತ್ತು. ಇರಡನೇ ಇನ್ನಿಂಗ್‌ನಲ್ಲಿ ಕೇವಲ 135 ರನ್‌ಗಳಿಗೆ ಸೋಲುಂಡ ಇಂಗ್ಲೆಂಡ್‌ ತಂಡದ ಒಟ್ಟು ರನ್‌ಗಳು ಟೀಂ ಇಂಡಿಯಾದ ಮೊದಲ ಇನ್ನಿಂಗ್‌ನ ರನ್‌ಗಳಿಗಿಂತ ಕಡಿಯಾಗಿದ್ದರಿಂದ ಒಂದು ಇನ್ನಿಂಗ್ಸ್‌ ಹಾಗೂ 25 ರನ್‌ಗಳ ಅಂತರದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ.

ಇಂಗ್ಲೆಂಡ್‌ ವಿರುದ್ಧ ಗೆಲುವು ಸಾಧಿಸಿದ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಇದೀಗ ಲಾರ್ಡ್ಸ್​ನಲ್ಲಿ ನಡೆಯಲಿರುವ ಫೈನಲ್‌ ಟೆಸ್ಟ್‌ ಸರಣಿಯಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಪಟ್ಟಕ್ಕಾಗಿ ಸೆಣಸಾಡಲಿದೆ.

ಇದನ್ನೂ ಓದಿ: ತಿವಾರಿ-ದಿಂಡಾ: ಒಂದೇ ತಂಡದಲ್ಲಿದ್ದು ವಿಭಿನ್ನ ಪಕ್ಷಗಳಿಗೆ ಸೇರ್ಪಡೆಯಾದ ಆತ್ಮೀಯ ಗೆಳೆಯರ ಸಂದರ್ಶನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights