ದೆಹಲಿ ಚಲೋ: ಪ್ರತಿಭಟನೆಯ ನಡುವೆ ಗುರುನಾನಕ್‌ ಜಯಂತಿ ಆಚರಣೆ; ಪೊಲೀಸರಿಗೆ ಪ್ರಸಾದ ಹಂಚಿದ ರೈತರು

ಕೇಂದ್ರ ಸರ್ಕಾರ ಕೃಷಿ ನೀತಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು, ದೆಹಲಿ ಗಡಿಯಲ್ಲಿ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ಇಂದು ಸಿಖ್‌ ಧರ್ಮ ಗುರು ಗುರುನಾನಕ್‌ ಅವರ 551ನೇ ಜಯಂತಿಯ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ರೈತರು ತಾವು ತಂದಿದ್ದ ಆಹಾರ ಪದಾರ್ಥಗಳಲ್ಲಿ ಪ್ರಸಾದ ತಯಾರಿಸಿ ಭದ್ರತಾ ಸಿಬ್ಬಂದಿ, ಪೊಲೀಸರಿಗೆ ಪ್ರಸಾದ ವಿತರಿಸಿದ್ದಾರೆ.

ದೆಹಲಿ-ಹರಿಯಾಣ ಗಡಿಯಲ್ಲಿ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸಿಖ್‌ ಸಮುದಾಯದ ರೈತರು, ಪ್ರತಿಭಟನಾ ಸ್ಥಳದಲ್ಲಿಯೇ ಗುರುನಾನಕ್‌ ಜಯಂತಿಯನ್ನು ಆರಚರಿಸಿದ್ದು, ಪ್ರಸಾದ ತಯಾರಿಸಿ,  ಪ್ರತಿಭಟನಾ ನಿರತ ರೈತರಿಗೆ ಹಾಗೂ ಗಡಿಯಲ್ಲಿ ರೈತರು ಪ್ರವೇಶಿಸದಂತೆ ತಡೆಯೊಡ್ಡಿ ನಿಂತಿರುವ ಪೊಲೀಸ್‌ ಹಾಗೂ ಭದ್ರತಾ ಸಿಬ್ಬಂದಿಗಳಿಗೆ ಪ್ರಸಾದ ವಿತರಿಸಿದ್ದಾರೆ.

ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ದೇಶದ ನಾನಾ ಭಾಗಗಳಿಂದ ದೆಹಲಿಗೆ ಜಾಥಾ ಹೊರಟಿರುವ ರೈತರನ್ನು ದೆಹಲಿ ಗಡಿಯಲ್ಲಿ ತಡೆಯಲಾಗಿದೆ.


ಇದನ್ನೂ ಓದಿ: ಆಜ್‌ತಕ್ ವರದಿಗಾರರನ್ನು ‘ಗೋದಿ ಮೀಡಿಯಾ’ಗೆ ಸ್ವಾಗತ ಎಂದ ರೈತರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights