AIADMK ಜೊತೆಗೆ BJP ಮೈತ್ರಿ ಮಾಡಿಕೊಂಡಿರುವ ಉದ್ದೇಶ ಆ ಪಕ್ಷವನ್ನು ಮುಗಿಸುವುದು: ದಿನೇಶ್ ಗುಂಡೂರಾವ್

ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಉದ್ದೇಶ ಒಂದೇ, ಅದು ಆ ಪಕ್ಷವನ್ನು ಮುಗಿಸುವುದು ಎಂದು ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಚಾರ ಉಸ್ತುವಾರಿ ವಹಿಸಿಕೊಂಡಿರುವವರಲ್ಲಿ ಒಬ್ಬರಾದ ಕರ್ನಾಟಕದ ದಿನೇಶ್‌ ಗುಂಡುರಾವ್‌, ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ಉದ್ದೇಶವೊಂದೇ ಅದನ್ನು ರಾಜಕೀಯವಾಗಿ ಮುಗಿಸುವುದು ಎಂದು ಚೆನ್ನೈನಲ್ಲಿ ಹೇಳಿದ್ದಾರೆ.

ಎಲ್ಲಾ ವಿರೋಧ ಪಕ್ಷಗಳನ್ನು ನಾಶ ಮಾಡಿ ದೇಶಾದ್ಯಂತ ಒಂದು ಪಕ್ಷ-ಒಬ್ಬ ವ್ಯಕ್ತಿ ಆಳಬೇಕೆಂಬುದು ಬಿಜೆಪಿಯ ದುರುದ್ದೇಶವಾಗಿದೆ. ಆದರೆ, ಅವರ ಹುನ್ನಾರ ಫಲಿಸುವುದಿಲ್ಲ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಡಿಎಂಕೆ, ಎಡರಂಗ, ವಿಸಿಕೆ ಮೈತ್ರಿಕೂಟಗಳು ಭರ್ಜರಿ ಗೆಲುವು ಸಾಧಿಸಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಿಎಂಕೆ-ಕಾಂಗ್ರೆಸ್‌ ನೇತೃತ್ವದ ಮೈತ್ರಿ ಪಕ್ಷಗಳು ಇಂದು (ಭಾನುವಾರ) ಕ್ಷೇತ್ರ ಹಂಚಿಕೆ ವಿಚಾರವಾಗಿ ಡಿಎಂಕೆ ಪಕ್ಷದ ಚೆನ್ನೈ ಕಚೇರಿಯಲ್ಲಿ ಸಭೆ ಸೇರಲಿವೆ. ಡಿಎಂಕೆ ಜೊತೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದು, ಕಾಂಗ್ರೆಸ್ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಕನ್ಯಾಕುಮಾರಿ ಲೋಕಸಭಾ ಉಪ ಚುನಾವಣೆಯ ಸಂಬಂಧ ಕೂಡ ಇಂದಿನ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ತಮಿಳುನಾಡು ಕಾಂಗ್ರೆಸ್‌ ಅಧ್ಯಕ್ಷ ಕೆ.ಎಸ್‌.ಅಲಗಿರಿ ತಿಳಿಸಿದ್ದಾರೆ.

ಇದನ್ನೂ ಓದಿ: ಆಂಧ್ರ v/s ಬಿಜೆಪಿ: ಮಾರಲು ನೀವು ಯಾರು? ಕೊಳ್ಳಲು ಅವರು ಯಾರು?; ವೈಜಾಗ್ ಸ್ಟೀಲ್ ಪ್ಲಾಂಟ್ ಖಾಸಗೀಕರಣದ ವಿರುದ್ಧ ಗುಡುಗಿತು ತೆಲುಗು ರಾಜ್ಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights