ನಕಲಿ ಟಿಆರ್‌ಪಿ ಹಗರಣ: ಮುಂಬೈ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ!

ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ರಿಗ್ಗಿಂಗ್ ಹಗರಣದಲ್ಲಿ ಮುಂಬೈ ಪೊಲೀಸರು ಮಂಗಳವಾರ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ಅಪರಾಧ ಗುಪ್ತಚರ ಘಟಕವು ಚಾರ್ಜ್‌ಶೀಟ್ ಅನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ವಿತರಣಾ ಮುಖ್ಯಸ್ಥರು ಸೇರಿದಂತೆ 12 ಜನರನ್ನು ಅಪರಾಧ ಶಾಖೆ ಈವರೆಗೆ ಬಂಧಿಸಿದೆ ಎಂದು ವರದಿಯಾಗಿದೆ. ಕೆಲವು ಟೆಲಿವಿಷನ್ ಚಾನೆಲ್‌ಗಳು ಟಿಆರ್‌ಪಿ ಸಂಖ್ಯೆಯನ್ನು ರಿಗ್ಗಿಂಗ್ ಮಾಡುತ್ತಿವೆ ಎಂದು ಆರೋಪಿಸಿ ರೇಟಿಂಗ್ ಏಜೆನ್ಸಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಹನ್ಸಾ ರಿಸರ್ಚ್ ಗ್ರೂಪ್ ಮೂಲಕ ದೂರು ನೀಡಿದಾಗ ಕಳೆದ ತಿಂಗಳು ನಕಲಿ ಟಿಆರ್‌ಪಿ ಹಗರಣ ಬೆಳಕಿಗೆ ಬಂದಿದೆ. ಮಾದರಿ ಮನೆಗಳಲ್ಲಿ ವೀಕ್ಷಕರ ಡೇಟಾವನ್ನು ದಾಖಲಿಸುವ ಬಾರೋಮೀಟರ್‌ಗಳನ್ನು ಸ್ಥಾಪಿಸುವ ಕಾರ್ಯವನ್ನು ಹನ್ಸಾಗೆ ವಹಿಸಲಾಗಿತ್ತು.

ಟಿಆರ್ಪಿ ಯಾವ ಟಿವಿ ಕಾರ್ಯಕ್ರಮಗಳನ್ನು ಹೆಚ್ಚು ವೀಕ್ಷಿಸಲಾಗುತ್ತದೆ ಎಂಬುದನ್ನು ನಿರ್ಣಯಿಸುವ ಸಾಧನವಾಗಿದೆ ಮತ್ತು ನಿರ್ದಿಷ್ಟ ಚಾನಲ್‌ನ ವೀಕ್ಷಕರ ಆಯ್ಕೆ ಮತ್ತು ಜನಪ್ರಿಯತೆಯನ್ನು ಸಹ ಸೂಚಿಸುತ್ತದೆ. ಗೌಪ್ಯ ಮನೆಗಳ ಗುಂಪಿನಲ್ಲಿ ಟೆಲಿವಿಷನ್ ಚಾನೆಲ್ ವೀಕ್ಷಕರ ಆಧಾರದ ಮೇಲೆ ಇದನ್ನು ಲೆಕ್ಕಹಾಕಲಾಗುತ್ತದೆ ಮತ್ತು ಅಂತಹ ಸ್ಥಳಗಳಲ್ಲಿ ಅಳತೆ ಮಾಪಕಗಳನ್ನು ಸ್ಥಾಪಿಸಲಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights