ದೆಹಲಿ ಹಿಂಸಾಚಾರ : 300 ಬಂಗಾಳಿ ಮಾತನಾಡುವ ಮಹಿಳೆಯರು ಕಲ್ಲು ತೂರಾಟದಲ್ಲಿ ಭಾಗಿ!

ನವದೆಹಲಿ: ದೆಹಲಿ ಪೊಲೀಸರ ವಿಶೇಷ ಸೆಲ್ ದೆಹಲಿ ಹಿಂಸಾಚಾರದ ಮಾಸ್ಟರ್ ಮೈಂಡ್ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ವಿರುದ್ಧ ಯುಎಪಿಎ ಅಡಿಯಲ್ಲಿ ಸಲ್ಲಿಸಿದ ಚಾರ್ಜ್‌ಶೀಟ್ ನಿಂದ ಆಘಾತಕಾರಿ ವಿಚಾರ ಬಹಿರಂಗವಾಗಿದೆ. ದೆಹಲಿ ಹಿಂಸಾಚಾರದಲ್ಲಿ ಸುಮಾರು 300 ಬಂಗಾಳಿ ಮಾತನಾಡುವ ಮಹಿಳೆಯರನ್ನು ಬಳಸಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.

ಅಷ್ಟೇ ಅಲ್ಲ, ಈ ಮಹಿಳೆಯರನ್ನು ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಿಂದ ಜಫರಾಬಾದ್ ಸಿಎ ವಿರೋಧಿ ಪ್ರತಿಭಟನಾ ಸ್ಥಳಕ್ಕೆ ಕರೆಸಲಾಗಿತ್ತು. ಈ ಮಹಿಳೆಯರನ್ನು 7 ಬಸ್‌ಗಳಲ್ಲಿ ಜಾಫರಾಬಾದ್‌ಗೆ ಕರೆತರಲಾಗಿದೆ. ಚಾರ್ಜ್‌ಶೀಟ್‌ನ ಪ್ರಕಾರ, ಫೆಬ್ರವರಿ 23 ರಂದು ಅವರನ್ನು ಮೊದಲು ಬಸ್‌ಗಳಲ್ಲಿ ಶಹೀನ್ ಬಾಗ್‌ನ ಪ್ರದರ್ಶನ ಸ್ಥಳಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಈ ಮಹಿಳೆಯರಿಗೆ ಆಹಾರವನ್ನು ನೀಡಿ ನಂತರ ಅವರನ್ನು ಜಾಫರಾಬಾದ್ ಪ್ರದರ್ಶನ ಸ್ಥಳಕ್ಕೆ ಕರೆತರಲಾಗಿದೆ ಎನ್ನಲಾಗಿದೆ. ಈ ಮಹಿಳೆಯರಲ್ಲಿ ಹೆಚ್ಚಿನವರು ಬುರ್ಖಾದಲ್ಲಿದ್ದರು ಮತ್ತು ಪ್ರತಿಭಟನೆಯ ಸಮಯದಲ್ಲಿ ಕಲ್ಲು ತೂರಾಟದಲ್ಲಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.

ಬಂಗಾಳಿ ಮಾತನಾಡುವ ಈ ಮಹಿಳೆಯರಿಗೆ ಬಸ್ ಶುಲ್ಕವನ್ನು ನೀಡಲಾಯಿತು. ಈ ಸಂಪೂರ್ಣ ಯೋಜನೆಗಾಗಿ ನಕ್ಷೆಯನ್ನು ಒಮರ್ ಖಾಲಿದ್ ರಚಿಸಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ. ದೆಹಲಿ ಹಿಂಸಾಚಾರದಲ್ಲಿ ಉಮರ್ ಖಾಲಿದ್ ಪ್ರಮುಖ ಮಾಸ್ಟರ್ ಮೈಂಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ವಿಶೇಷ ತನಿಖೆ ಹೇಳಿಕೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.