ಫ್ಯಾಕ್ಟ್‌ಚೆಕ್: ಬೆಂಗಳೂರಿನಲ್ಲಿ ನಡೆದಿದೆಯೇ ಲವ್ ಜಿಹಾದ್ ಪ್ರಕರಣ ? ಈ ಸ್ಟೋರಿ ಓದಿ

ಆರು ತಿಂಗಳ ಹಿಂದಿನ ಭೀಕರ ಹತ್ಯೆ ಪ್ರಕರಣವನ್ನು ಭೇದಿಸಿರುವ ದೆಹಲಿ ಪೊಲೀಸರು, 26 ವರ್ಷದ ಗೆಳತಿ ಶ್ರದ್ಧಾ ವಾಕರ್‌ನನ್ನು ಕೊಂದ ಆರೋಪದ ಮೇಲೆ ಆಫ್ತಾಬ್ ಅಮೀನ್ ಪೂನಾವಾಲಾನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಆಫ್ತಾಬ್‌ ಭಯಾನಕ ಮಾಹಿತಿಯ ಬಗ್ಗೆ ಬಾಯಿಬಿಟ್ಟಿದ್ದಾನೆ. ಮೇ 18 ರ ರಾತ್ರಿ ನಡೆದ ಸಣ್ಣ ಜಗಳ ಅಮಾಯಕ ಜೀವದ ಹತ್ಯೆಗೆ ಸಾಕ್ಷಿಯಾಗಿತ್ತು.ಸಾಮಾಜಿಕ ಮಾಧ್ಯಮಗಳಲ್ಲಿ ಈ ಪ್ರಕರಣ ಲವ್ ಜಿಹಾದ್ ಎಂದು ವ್ಯಾಪಕವಾಗಿ ಚರ್ಚೆಯಾಗಿತ್ತು.

ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಗಳೂರಿನ ವಿಡಿಯೋವೊಂದು ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬ ಮಗುವಿನ ಎದುರೇ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಹೇಳಲಾಗುತ್ತಿದೆ. ಫೇಸ್‌ಬುಕ್ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಬರೆದಿದ್ದಾರೆ, “ಲವ್ ಜಿಹಾದ್ ನಂತರ ಹಿಂದೂಗಳಿಗೆ ಏನಾಗುತ್ತದೆ. ಹಿಂದೂ ಹುಡುಗಿ ಮುಸ್ಲಿಂ ಗಂಡನಿಂದ ಹೇಗೆ ಹಿಂಸೆಗೊಳಗಾಗಿದ್ದಾಳೆ ನೋಡಿ ಎಂದು ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಏನ್‌ಸುದ್ದಿ.ಕಾಂನ ಓದುಗರು ಈ ವಿಡಿಯೋವನ್ನು ನಮಗೆ ವಾಟ್ಸಾಪ್ ಮಾಡುವ ಮೂಲಕ ವಾಸ್ತವ ಏನೆಂದು ಪರಿಶೀಲಿಸುವಂತೆ ವಿನಂತಿಸಿದ್ದಾರೆ.

ಫ್ಯಾಕ್ಟ್‌ಚೆಕ್:

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಪರಿಶೀಲಿಸಿದಾಗ ವಿಡಿಯೋದೊಂದಿಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ವೀಡಿಯೊದಲ್ಲಿರುವ ವ್ಯಕ್ತಿ ಮೊಹಮ್ಮದ್ ಮುಷ್ತಾಕ್ ಜಿಕೆ ಎಂದು, ಅವನು ಬೆಂಗಳೂರಿನ IT ಕಂಪನಿಯಲ್ಲಿ ಕೆಲಸ ಮಾಡುತ್ತಾನೆಂದು ನಮೂದಿಸಲಾಗಿದೆ.

ಇದನ್ನೆ ಆಧಾರವಾಗಿಟ್ಟುಕೊಂಡು ಕೀವರ್ಡ್ ಸರ್ಚ್ ನಡೆಸಿದಾಗ, 4 ಅಕ್ಟೋಬರ್ 2022 ರಂದು ಇಂಡಿಯಾ ಟುಡೇ ಪ್ರಕಟಿಸಿದ ವೀಡಿಯೊ ವರದಿ ಲಭ್ಯವಾಗಿದೆ. ವರದಿಯ ಪ್ರಕಾರ ಹಲ್ಲೆ ಮಾಡುತ್ತಿರುವ ವ್ಯಕ್ತಿ ಮತ್ತು ಮಹಿಳೆ ಇಬ್ಬರು ದಂಪತಿಗಳಾಗಿದ್ದು, ಮೊಹಮ್ಮದ್ ಮುಷ್ತಾಕ್ ತನ್ನ ಪತ್ನಿ ಆಯಿಷಾ ಮೇಲೆ ಹಲ್ಲೆ ಮಾಡುತ್ತಿರುವಂತೆ ವಿಡಿಯೊದಲ್ಲಿ ತೋರಿಸಲಾಗಿದೆ.

ಆಯಿಷಾ ತನ್ನ ಪರಿಸ್ಥಿತಿಯನ್ನು ವಿವರಿಸುತ್ತಾ, ತನ್ನ ಪತಿ ಒಬ್ಬ ಮನೋರೋಗಿಯಾಗಿದ್ದು , ಮತ್ತೋರ್ವ ಮಹಿಳೆಯನ್ನು ಮರುಮದುವೆಯಾಗಿ ಮತ್ತು ಅವಳೊಂದಿಗೆ ಮಗುವನ್ನು ಪಡೆದ ನಂತರವೂ ವಿಚ್ಛೇದನ ನೀಡಲು ನಿರಾಕರಿಸಿದ್ದಾರೆ ಎಂದು ಆಯಿಷಾ ಹೇಳಿದ್ದಾರೆ.

ಗ್ರೌಂಡ್ ರಿಪೋರ್ಟ್ ಎಂಬ ವೆಬ್‌ಸೈಟ್ ಮಾಡಿದ ವರದಿಯ ಪ್ರಕಾರ, ವೀಡಿಯೊ 2015 ರ ಹಿಂದಿನದ್ದಾಗಿದೆ. ಮೊಹಮ್ಮದ್ ಮುಷ್ತಾಕ್ ಜಿಕೆ 30 ಮಾರ್ಚ್ 2009 ರಂದು ಆಯೇಷಾ ಬಾನು ಅವರನ್ನು ಮದುವೆಯಾಗಿದ್ದರು. ಅವರಿಗೆ 1 ಆಗಸ್ಟ್ 2013 ರಂದು ಮಗು ಜನಿಸಿದ್ದು, ನಂತರ ಪತಿ ಪತ್ನಿಯ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು ಇದರಿಂದ ಅವರು ಬೇರೆಯಾಗಲು ನಿರ್ಧರಿಸಿದರು. ಎಂದು ವರದಿಯಾಗಿದೆ.

ಇದಲ್ಲದೆ, ಮುಷ್ತಾಕ್ ಮತ್ತು ಆಯಿಷಾ ಇಬ್ಬರು ಒಂದೇ ಸಮುದಾಯಕ್ಕೆ (ಸುನ್ನಿ ಮುಸ್ಲಿಂ ಸಮುದಾಯಕ್ಕೆ) ಸೇರಿದವರಾಗಿದ್ದು 21 ಡಿಸೆಂಬರ್ 2021 ರ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನಿಂದ ದೃಢಪಟ್ಟಿದೆ. ಹಾಗಾಗಿ ಇದಕ್ಕೆ ಯಾವುದೇ ಕೋಮು ಆಯಾಮವಿಲ್ಲ ಎಂಬುದು ಸ್ಪಷ್ಟವಾಗಿದೆ.

Image Credit: Indian Kanoon

ಮಗುವಿನ ಪಾಲನೆಗಾಗಿ ಮುಷ್ತಾಕ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, “ಪತಿಯ ಎರಡನೇ ಮದುವೆಯ ಆಧಾರದ ಮೇಲೆ ಮೊದಲ ಹೆಂಡತಿ ತನ್ನ ಪತಿಯ ಮನೆಯಿಂದ ದೂರ ಉಳಿಯಲು ಮುಂದಾದರೆ, ಅವಳು ಸಾಮಾನ್ಯವಾಗಿ ತನ್ನ ಅಪ್ರಾಪ್ತ ಮಗುವಿನ ವಿಶೇಷ ಪಾಲನೆಯನ್ನು ಉಳಿಸಿಕೊಳ್ಳಬಹುದು ಎಂದು ಹೇಳುತ್ತದೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ದಂಪತಿಗಳ ವಿಚ್ಛೇದನ ಅರ್ಜಿ ವಿಚಾರಣೆಯ ತೀರ್ಪಿನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾರೆ ವೈರಲ್ ವೀಡಿಯೋದಲ್ಲಿ ಹಲ್ಲೆ ನಡೆಸುತ್ತಿರುವ ವ್ಯಕ್ತಿ ಮತ್ತು ಹಲ್ಲೆಗೊಳಗಾಗುತ್ತಿರುವ ಮಹಿಳೆ ದಂಪತಿಗಳಾಗಿದ್ದು. ಮುಷ್ತಾಕ್ ಮತ್ತು ಆಯಿಷಾ ಇಬ್ಬರು ಸುನ್ನಿ ಎಂಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬುದು ತನಿಖೆಯಿಂದ ದೃಢಪಟ್ಟಿದೆ. ಅಲ್ಲದೆ ಇದೊಂದು ಹಳೆಯ 2013 ಪ್ರಕರಣವಾಗಿದ್ದು ಈಗ ವಿಡಿಯೋವನ್ನು ಲವ್ ಜಿಹಾದ್ ಪ್ರಕರಣ ಎಂದು ಪ್ರತಿಪಾದಿಸಿ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಕೃಪೆ: ನ್ಯೂಸ್ ಮೀಟರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ‘ಸ್ಟ್ಯಾಚ್ಯೂ ಆಫ್ ಯೂನಿಟಿ’ ಪ್ರತಿಮೆ ಮೇಲೆ ರಾಜೇಶ್ ಲವ್ ಪಿಂಕಿ ಎಂದು ಗೀಚಲಾಗಿದೆಯೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.