ಫ್ಯಾಕ್ಟ್‌ಚೆಕ್: ನಿರ್ಮಲಾ ಸೀತಾರಾಮನ್ ಮಗಳು ಮಿಲಿಟರಿ ಅಧಿಕಾರಿಯೇ ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮಗಳೊಂದಿಗೆ ನಿಂತಿರುವ ಫೋಟೋವೊಂದು ವೈರಲ್ ಆಗಿದೆ. ಸೇನಾ ಅಧಿಕಾರಿಯ ಸಮವಸ್ತ್ರದಲ್ಲಿ ನಿರ್ಮಲಾ ಸೀತಾರಾಮನ್ ಅವರ ಪಕ್ಕದಲ್ಲಿ ನಿಂತಿರುವ ಮಹಿಳೆ ನಿರ್ಮಲಾ ಅವರ ಮಗಳು ಎಂದು ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

Image may contain: 2 people, people smiling, people standing and outdoor

“ನಿರ್ಮಲಾ ಸೀತಾರಾಮನ್ ಅವರ ಮಗಳು ಈಗ ಭಾರತೀಯ ಸೇನೆಯ ಭಾಗವಾಗಿದ್ದು, ನಮ್ಮ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅವರು MLA ಅಥವಾ MLC ಆಗಲು ಬಯಸಲಿಲ್ಲ ” ಬಡವರ ಮಕ್ಕಳು ಮಾತ್ರ ಸೇನೆಗೆ ಸೇರುತ್ತಾರೆ, ರಾಜಕಾರಣಿಯ ಮಕ್ಕಳು ರಾಜಕೀಯಕ್ಕೆ ಬಂದು ಲಾಭ ಮಾಡಿಕೊಳ್ಳುತ್ತೇರೆ ಎಂಬ ಮಾತಿಗೆ ಇವರು ಅಪವಾದ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

ಇದೇ ವೈರಲ್ ಫೊಟೋವನ್ನು ಏನ್‌ಸುದ್ದಿ.ಕಾಂನ ಓದುಗರು ನಮ್ಮ ವಾಟ್ಸಾಪ್‌ಗೂ ಕಳುಹಿಸಿ ಇದು ನಿಜವೇ ಎಂದು ಪರಿಶೀಲಿಸಲು ವಿನಂತಿಸಿದ್ದಾರೆ. ಹಾಗಿದ್ದರೆ ಈ ವೈರಲ್ ಫೋಟೋದೊಂದಿಗೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್ ನಲ್ಲಿ ಸರ್ಚ್ ಮಾಡಿದಾಗ, ಇದೇ ಫೋಟೋ 2018 ರಲ್ಲಿ ವೈರಲ್ ಆಗಿತ್ತು. ಬೂಮ್ ಇದನ್ನು ಫ್ಯಾಕ್ಟ್‌ಚೆಕ್ ಮಾಡುವ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು ಎಂದು ವರದಿ ಮಾಡಿದೆ.

ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮಗಳ ಬಗ್ಗೆ ಮಾಹಿತಿಗಾಗಿ ಮತ್ತಷ್ಟು ಸರ್ಚ್ ಮಾಡಿದಾಗ, ನಿರ್ಮಲಾ ಸೀತಾರಾಮನ್ ಅವರಿಗೆ ವಂಗ್ಮಯಿ ಪರಕಲಾ ಎಂಬ ಮಗಳಿದ್ದಾಳೆ. ಸೀತಾರಾಮನ್ ಅವರು ಸಲ್ಲಿಸಿದ ಆಸ್ತಿಗಳ (ಚರ ಮತ್ತು ಸ್ಥಿರ) ವಿವರಗಳ ಪಟ್ಟಿಯಲ್ಲಿ (ಅಂದರೆ ಅವರ ಮಗಳ ಹೆಸರನ್ನು) ವಂಗ್ಮಯಿ ಎಂದು ತಿಳಿಸಿದ್ದಾರೆ.

 

ನಿರ್ಮಲ ಸೀತಾರಾಮನ್ ಪಕ್ಕದಲ್ಲಿ ವೈರಲ್ ಫೋಟೋದಲ್ಲಿ ಇರುವ ಮಹಿಳೆ ಯಾರು?

ಗೂಗಲ್ ಸಹಾಯದಿಂದ ಸರ್ಚ್ ಮಾಡಿದಾಗ, ನಿರ್ಮಲಾ ಸೀತಾರಾಮನ್ ಅವರ ಪಕ್ಕದಲ್ಲಿ ನಿಂತಿರುವ ಮಹಿಳೆಯು ಸೇನಾಧಿಕಾರಿ ನಿಕಿತಾ ವೀರಯ್ಯ ಎಂಬ ಮಾಹಿತಿ ಲಭ್ಯವಾಗಿದೆ. ನಿಕಿತಾ ವೀರಯ್ಯ ಅವರ ಫೇಸ್ಬುಕ್ ಪ್ರೊಫೈಲ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವು ಬಗ್ಗೆ ಬರೆದುಕೊಂಡಿದ್ದಾರೆ. ನಿಕಿತಾ ವೀರಯ್ಯ ಸೇನೆಯಲ್ಲಿ ಸೇವೆಸಲ್ಲಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ಸೇನಾ ವಕ್ತಾರ ಕರ್ನಲ್ ಅಮನ್ ಆನಂದ್ ಅವರನ್ನೂ ಬೂಮ್ ಸಂಪರ್ಕಿಸಿದಾಗ,  ವೈರಲ್ ಪೋಸ್ಟ್‌ನಲ್ಲಿರುವ ಅಧಿಕಾರಿ ವೀರಯ್ಯ ಎಂದು ಖಚಿತಪಡಿಸಿದ್ದಾರೆ ಎಂದು ಬೂಮ್ ವರದಿ ಮಾಡಿದೆ.

ನಿರ್ಮಲಾ ಸೀತಾರಾಮನ್ ಅವರ ಕುಟುಂಬದ ಬಗ್ಗೆ ವಿವರಣೆಯಿರುವ ವಿಡಿಯೋವನ್ನು BOOM ಕಂಡುಹಿಡಿದಿದ್ದು, ಯೂಟ್ಯೂಬ್ ವೀಡಿಯೊದಲ್ಲಿ, ನಿರ್ಮಲಾ ಸೀತಾರಾಮನ್ ಅವರ ಕುಟುಂಬದೊಂದಿಗೆ ನೋಡಬಹುದು, ಫೇಸ್‌ಬುಕ್ ಪೋಸ್ಟ್‌ನಲ್ಲಿ ಕಂಡುಬರುವ ಅಧಿಕಾರಿ ವಂಗ್ಮಯಿ ಅಲ್ಲ ಎಂದು ಸ್ಪಷ್ಟಪಡಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಇರುವ ಮಹಿಳಾ ಸೇನಾಧಿಕಾರಿ ನಿಕಿತಾ ವೀರಯ್ಯ ನಿರ್ಮಲಾ ಅವರ ಮಗಳಲ್ಲ. ನಿರ್ಮಲಾ ಸೀತಾರಾಮನ್ ಅವರ ಸ್ವಂತ ಮಗಳ ಹೆಸರು ವಂಗ್ಮಯಿ. ಸಾಮಾನ್ಯವಾಗಿ ರಾಜಕಾರಣಿಯ ಮಕ್ಕಳು ಕೂಡ ರಾಜಕೀಯಕ್ಕೆ ಬರುವುದು ಸಾಮಾನ್ಯ, ಇಂದು ಕುಟುಂಬ ರಾಜಕಾರಣ ಎಂಬುದು ಸಾಮಾನ್ಯವಾಗಿದೆ. ಆದರೆ ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ನಿರ್ಮಲಾ ಸೀತಾರಾಮನ್ ಅವರ ಮಕ್ಕಳು ಸೇನೆಯಲ್ಲಿ ಕೆಲಸ ಮಾಡುತ್ತ ಮಾದರಿಯಾಗಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಟ್ಟಿನಲ್ಲಿ ಕಾರ್ಮಿಕರಿಗೆ ಊಟ- ಕೆಂಪೇಗೌಡ ಪ್ರತಿಮೆ ಅನಾವರಣದ ವೇಳೆ ಕಾರ್ಯಕ್ರಮವಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.