ರಾಜಸ್ಥಾನ BJP ಯಾತ್ರಾ ರಾಜಕೀಯ: ವಸುಂಧರಾ ರಾಜೇ ಮತ್ತು ಸತೀಶ್ ಪೂನಿಯಾ ನಡುವೆ ನಾಯಕತ್ವ ಸೆಣೆಸಾಟ!
ರಾಜಸ್ಥಾನದ ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಅವರು ಶೇಖಾವತಿ ಪ್ರದೇಶದಲ್ಲಿ ಹದಿನೈದು ದಿನಗಳ ಯಾತ್ರೆಯನ್ನು ಕೈಗೊಂಡಿದ್ದಾರೆ. ಅವರನ್ನು ಸ್ವಾಗತಿಸಲು ಅಲ್ಲಿಯ ಕಾರ್ಯಕರ್ತರು ಭಾರೀ ಪ್ರಮಾಣ ಜನಸಂಖ್ಯೆಯನ್ನು ಕರೆತಂದಿದ್ದರು. ಇದರ ನಡುವೆ, ಮಾಜಿ ಮುಖ್ಯಮಂತ್ರಿ ಮತ್ತು ರಾಜಸ್ಥಾನದ ಬಿಜೆಪಿಯ ಹಿರಿಯ ನಾಯಕಿ ವಸುಂಧರಾ ರಾಜೇ ಅವರು ಮಾರ್ಚ್ 8 ರಂದು ತಮ್ಮ ಜನ್ಮದಿನದಂದು ಧಾರ್ಮಿಕ ಯಾತ್ರೆ ಕೈಗೊಳ್ಳಲು ಯೋಜಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಾಟ್ ಸಮುದಾಯಕ್ಕೆ ಸೇರಿರುವ ಸತೀಶ್ ಪೂನಿಯಾ ಅವರಿಗೆ 2019 ರಲ್ಲಿ ರಾಜ್ಯದಲ್ಲಿ ಪಕ್ಷದ ನೇತೃತ್ವವನ್ನು ನೀಡಲಾಗಿದೆ. ಅವರು ರಾಜಸ್ಥಾನ್ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ನಾಯಕರಾಗಿದ್ದಾಗ ತಮ್ಮ ರಾಜಕೀಯವನ್ನು ಪ್ರಾರಂಭಿಸಿದ್ದರು. ಅಂದಿನಿಂದಲೂ ನಿರಂತರವಾಗಿ ಚುನಾವಣಾ ರಾಜಕೀಯದಲ್ಲಿ ಸೋಲು ಅನುಭವಿಸಿದ್ದ ಅವರು 2018 ರಲ್ಲಿ ರಾಜಸ್ಥಾನದ ಅಂಬರ್ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಈಗ ರಾಜ್ಯ ಪಕ್ಷದ ಅಧ್ಯಕ್ಷರಾಗಿರುವುದರಿಂದ ಸಾಮಾನ್ಯ ಬಿಜೆಪಿ ಕಾರ್ಯಕರ್ತರು ನೈತಿಕವಾಗಿ ಬಲಗೊಂಡಿದ್ದಾರೆ ಎಂದು ಭಾವಿಸುತ್ತಾರೆ. ಸಾಮಾನ್ಯವಾಗಿ ವಿಚಾರವಾದಿ ಎಂದು ಪರಿಗಣಿಸಲಾಗಿದ್ದರೂ, ಸತೀಶ್ ಪೂನಿಯಾ ಅವರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ‘ಜಾಟ್’ ನಾಯಕನಾಗಿರುವ ಅವರ ಚಿತ್ರಣವನ್ನು ಎಚ್ಚರಿಕೆಯಿಂದ ಬೆಳೆಸಲಾಗುತ್ತಿದೆ.
ಮತ್ತೊಂದೆಡೆ, ವಸುಂಧರಾ ರಾಜೆ ಅವರು ಮುಖ್ಯಮಂತ್ರಿಯಾಗಿದ್ದ ಎರಡು ಅವಧಿಯಲ್ಲಿ ‘ಜಾಟ್’ ನಾಯಕಿಯಾಗಿ ತಮ್ಮ ಪ್ರಬಲ್ಯವನ್ನು ಬೆಳೆಸಿಕೊಂಡಿದ್ದಾರೆ. ರಾಜೇ ಗ್ವಾಲಿಯರ್ನ ಸಿಂಧಿಯಾ ರಾಜಮನೆತನಕ್ಕೆ ಸೇರಿದವರು. ಅವರು ಜಾಟ್ ಮನೆತನದವರನ್ನು ಧೋಲ್ಪುರದಲ್ಲಿ ವಿವಾಹವಾಧರು. ಸಿಂಧಿಯಾ ಎಂಬ ಪದವು ಶಿಂಧೆ ಎಂದು ಆಂಗ್ಲೀಕರಿಸಲಾಗಿದೆ. ಅಲ್ಲದೆ, ಈಗ ಮಹಾರಾಷ್ಟ್ರದಲ್ಲಿ ಶಿಂಧೆ ಎಂದೂ ಜನಪ್ರಿಯವಾಗಿದೆ. ಇದು ಕುನ್ಬಿ ಮೂಲದ ಹಿಂದೂ ಮರಾಠ ರಾಜವಂಶವಾಗಿದ್ದು, ಹಿಂದಿನ ಗ್ವಾಲಿಯರ್ ರಾಜ್ಯವನ್ನು ಆಳ್ವಿಕೆ ಮಾಡಿತ್ತು.
ಇದನ್ನೂ ಓದಿ: BJPಗೆ ಬಹಿರಂಗ ಎಚ್ಚರಿಕೆ: ಗ್ರಾಮಕ್ಕೆ ಪ್ರವೇಶಿಸಿದರೆ ನಿಮ್ಮ ಜೀವಕ್ಕೆ ನೀವೇ ಜವಾಬ್ದಾರರು!
ರಾಜೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಜೆಪಿಯ ಜಾಟ್ ನಾಯಕರಾದ ಅಜ್ಮೀರ್ನ ಸನ್ವರ್ ಮಲ್ ಜಾಟ್, ಭರತ್ಪುರದ ಡಾ.ದಿಗಂಬರ್ ಸಿಂಗ್, ನಾಗೌರ್ನಲ್ಲಿ ಅಜಯ್ ಕಿಲಾಕ್, ಅಮ್ರಾ ರಾಮ್ ಮತ್ತು ಬಾರ್ಮರ್ನಲ್ಲಿ ಕೈಲಾಶ್ ಚೌಧರಿ, ಬಿಕಾನೆರ್ನ ಲುಂಕರನ್ಸರ್ನಲ್ಲಿ ಸುಮಿತ್ ಗೋದರಾ, ರಾಹುಲ್ ಕಸ್ವಾನ್ ಚುರುದಲ್ಲಿ, ಅಲ್ವಾರ್ನ ಧರಂಪಾಲ್ ಚೌಧರಿ, ಇತರರು ರಾಜೇ ಅವರ ಬೆಳವಣಿಗೆ ನೋಡಿ ಬಿಜೆಪಿ ತೊರೆದರು ಎಂಬ ವದಂತಿಗಳು ಈಗಲೂ ಚಾಲ್ತಿಯಲ್ಲಿವೆ. ವಿವಿಧ ಆರ್ಎಸ್ಎಸ್ ಸಂಘಟನೆಗಳು, ಎಬಿವಿಪಿ ಮತ್ತು ಬಿಜೆಪಿಯಲ್ಲಿ ಪಕ್ಷದ ಸಿದ್ಧಾಂತಕ್ಕೆ ನಿಷ್ಠರಾಗಿರುವ ಜಾಟ್ ನಾಯಕರುಗಳ ಸಂಖ್ಯೆ ಬಹಳ ಕಡಿಮೆ ಇದ್ದಾರೆ. ಆದರೆ ಸತೀಶ್ ಪೂನಿಯಾ ಅವರನ್ನು ಇದಕ್ಕೆ ಹೊರತಾಗಿ ಪರಿಗಣಿಸಲಾಗಿದೆ. ಈಗ ರಾಜ್ಯದಲ್ಲಿ ಪಕ್ಷದ ಚುಕ್ಕಾಣಿ ಪೂನಿಯಾ ಅವರ ಕೈಯಲ್ಲಿದ್ದು, ಅವರ ರಾಜಕೀಯ ಸಾಮರ್ಥ್ಯವನ್ನು ಅನ್ವೇಷಿಸಲು ಸಜ್ಜಾಗಿದ್ದಾರೆ. ಅದ್ದರಿಂದ ಯಾತ್ರೆಗಳನ್ನು ಆರಂಭಿಸಿದ್ದಾರೆ.
ಮಾರ್ಚ್ 8 ರಂದು ರಾಜೆ ಅವರು ತಮ್ಮ ಜನ್ಮದಿನದ ಪ್ರಯುಕ್ತ ಕಾಮನ್ ಪ್ರದೇಶದ ಸುತ್ತಮುತ್ತಲಿನ ದೇವಾಲಯಗಳ ಮಾರ್ಗದಲ್ಲಿ ಯಾತ್ರೆ ನಡೆಸಲು ಯೋಜಿಸಿದ್ದಾರೆ. ಪಕ್ಷದ ಒಳಗಿನವರು ಇದನ್ನು ಕೇಂದ್ರ ನಾಯಕತ್ವಕ್ಕೆ ತನ್ನ ಜನಪ್ರಿಯತೆಯನ್ನು ತೋರಿಸುವ ರಾಜೆ ನಡೆಸುತ್ತಿರುವ ಕೊನೆಯ ಪ್ರಯತ್ನವೆಂದು ಹೇಳುತ್ತಿದ್ದಾರೆ. 2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜೆ ತನ್ನ ಮುಂದಿನ ನಡೆಯನ್ನು ನಿರ್ಧರಿಸುವ ಮೊದಲು ಜನರ ಪ್ರತಿಕ್ರಿಯೆ ಮತ್ತು ಕೇಂದ್ರ ನಾಯಕತ್ವದ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜೇ ಮೂರನೇ ಬಾರಿಗೆ ರಾಜಸ್ಥಾನದ ಮುಖ್ಯಮಂತ್ರಿಯಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ.
ವಸುಂಧರಾ ರಾಜೆ ಮತ್ತು ಸತೀಶ್ ಪೂನಿಯಾ ಇಬ್ಬರಿಗೂ ಅವರ ಮಹತ್ವಾಕಾಂಕ್ಷೆ ಫಲಕಾರಿಯಾಗಲು ಜಾಟ್ ಮತಗಳು ಮತ್ತು ಬೆಂಬಲ ಮುಖ್ಯವಾಗಿದೆ. ರಾಜಸ್ಥಾನದಲ್ಲಿ ಜಾಟ್ಗಳನ್ನು ಬೆಳೆಸಲು ರಾಜೇ ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದ್ದರೂ, ಅವರು ಹೊರಗಿನವರಾಗಿ ಉಳಿಸಿದ್ದರು. ಅನೇಕರು ಅವರನ್ನು ಜಾಟ್ ಎಂಧು ಪರಿಗಣಿಸಲಿಲ್ಲ. – ಅರ್ಧ ಜಾಟ್, ಸಿಂಧಿಯಾ ಜಾಟ್ ಎಂದು ನೋಡಲಾಗುತ್ತಿತ್ತು. ರಾಜಸ್ಥಾನಕ್ಕೆ ‘ಪೂರಾ ಜಾಟ್’ (ಜಾಟ್ ಸಮುದಾಯದಲ್ಲಿ ಹುಟ್ಟಿದವರು) ಅಗತ್ಯವಿದೆ ಎಂದು ಬೆನಿವಾಲ್ ತನ್ನ ಭಾಷಣಗಳಲ್ಲಿ ಹೇಳುತ್ತಾ, ರಾಜೇ ಅವರನ್ನು ಅರ್ಧ ಜಾಟ್ ಎಂದು ಬಿಂಬಿಸಿ ಹಲವು ಬಾರಿ ಹೇಳಿದ್ದಾರೆ. ಈಗ ಸತೀಶ್ ಪೂನಿಯಾ ಅವರು ಅದೇ ಸಾಲಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಹಾಗಾಗಿ ಯಾತ್ರೆ ಆರಂಭಿಸಿರುವ ಪೂನಿಯಾ ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ತಮ್ಮನ್ನು ತಾವು ‘ಪೂರಾ ಜಾಟ್’ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ. ಇದು ರಾಜೆಯನ್ನು ಬೆಚ್ಚಿಬೀಳಿಸಿದೆ. ಹಾಗಾಗಿ ಅವರ ಹುಟ್ಟುಹಬ್ಬದ ಯಾತ್ರೆಯ ಮೂಲಕ ತಮ್ಮ ಪ್ರಬಲ್ಯವನ್ನು ಮತ್ತೊಮ್ಮೆ ತೋರಿಸಲು ಉದ್ದೇಶಿಸಿದ್ದಾರೆ ಎಂದು ಮೂಲ ಹೇಳುತ್ತದೆ.
ಇದನ್ನೂ ಓದಿ: BJP ಭ್ರಷ್ಟರನ್ನು ಖರೀದಿಸಬಹುದು; ನಿಷ್ಟರನ್ನಲ್ಲ: ಕೇಸರಿ ಪಡೆಗೆ ಮಮತಾ ಟಾಂಗ್
ಕಳೆದ ವಾರ ಗೃಹ ಸಚಿವ ಅಮಿತ್ ಷಾ ಅವರನ್ನು ಸಾಕಷ್ಟು ಸಮಯದ ನಂತರ ವಸುಂಧರಾ ರಾಜೆ ಭೇಟಿ ಮಾಡಿದ್ದರು. ಬಂಗಾಳ, ಅಸ್ಸಾಂ, ತಮಿಳುನಾಡು ಮತ್ತು ಕೇರಳದಂತಹ ಇತರ ರಾಜ್ಯಗಳ ನಿರ್ಣಾಯಕ ಚುನಾವಣೆಗಳಲ್ಲಿ ಪಕ್ಷವು ಕಾರ್ಯನಿರತವಾಗಿರುವ ಸಂದರ್ಭದಲ್ಲಿ, ರಾಜಸ್ಥಾನದಲ್ಲಿ ಪಕ್ಷವು ಯಥಾಸ್ಥಿತಿಯನ್ನು ಬಯಸುತ್ತಿದೆ. ಈ ವೇಳೆ ಕೇಂದ್ರ ನಾಯಕತ್ವದ ವಿರುದ್ಧ ಅವರ ಉದ್ದೇಶಿತ ಪ್ರದರ್ಶನವನ್ನು ತೋರಿಸಲು ರಾಜೆ ಮುಂದಾಗಿದ್ದಾರೆ.
ಏತನ್ಮಧ್ಯೆ, ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಇತರ ನಾಯಕರೂ ಸಹ ತಮ್ಮ ಅವಕಾಶಗಳನ್ನು ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ತಮ್ಮ ಕ್ಷೇತ್ರದಲ್ಲಿ ಜೋಧ್ಪುರ ಮತ್ತು ಜೈಸಲ್ಮೇರ್ ಪ್ರದೇಶದಲ್ಲಿ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆ. ಶೇಖಾವತಿ ಪ್ರದೇಶ ಮತ್ತು ಶಕ್ಮಾಭರಿ ಶಕ್ತಿ ಪೀಠದಲ್ಲಿ ತಮ್ಮ ನೆಲೆಗಳಿಂದ ದೂರವಿರುವ ರಾಮ್ದೇರಾ ತೀರ್ಥಯಾತ್ರೆಯು ಗಜೇಂದ್ರ ಸಿಂಗ್ಗೆ ಸಹಾಯ ಮಾಡಬಹುದು ಎಂಬ ಲೆಕ್ಕಾಚಾರವಿದೆ.
ಸದ್ಯ ರಾಜಸ್ಥಾನ ಬಿಜೆಪಿಯಲ್ಲಿ ನಾಯಕತ್ವಕ್ಕಾಗಿ ಸೆಣಸಾಟ ನಡೆಯುತ್ತಿದೆ. ಪಕ್ಷದ ಚುಕ್ಕಾಣಿಯ ಜೊತೆಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನದ ಮಹತ್ವಾಕಾಂಕ್ಷೆಯು ಪ್ರಮುಖ ನಾಯಕರಲ್ಲಿ ಮನೆ ಮಾಡಿದೆ. ಇದಕ್ಕಾಗಿ ಎಲ್ಲರೂ ಯಾತ್ರೆಗಳ ಮೂಲಕ ಜನರತ್ತ ಹೊರಟಿದ್ದಾರೆ. ಆದರೆ, ಮುಂದಿನ ಚುನಾವಣೆಯ ವೇಳೆಗೆ ರಾಜೆ ಅವರ ನಿರ್ಧಾರ ಏನಾಗಬಹುದು, ಬಿಜೆಪಿ ಹೈಕಮಾಂಡ್ ಯಾರಿಗೆ ಚುಕ್ಕಾಣಿ ನೀಡಬಹುದು ಎಂದುಬು ಸದ್ಯದ ದೂರದ ಮಾತಾಗಿ ಉಳಿಸಿದೆ.
ಇದನ್ನೂ ಓದಿ: ಚುನಾವಣಾ ಸಮೀಕ್ಷೆ: ಅಸ್ಸಾಂನಲ್ಲಿ BJPಗೆ ಭರ್ಜರಿ ಜಯ; ಉಳಿದ ರಾಜ್ಯಗಳ ಕತೆ ಏನು?

