BJPಗೆ ಬಹಿರಂಗ ಎಚ್ಚರಿಕೆ: ಗ್ರಾಮಕ್ಕೆ ಪ್ರವೇಶಿಸಿದರೆ ನಿಮ್ಮ ಜೀವಕ್ಕೆ ನೀವೇ ಜವಾಬ್ದಾರರು!

ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ದ ದೆಹಲಿ ಗಡಿಯಲ್ಲಿ ರೈತರ ಹೋರಾಟ ಆರಂಭವಾದ ನಂತರ, ಪ್ರತಿಭಟನೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಅಲ್ಲದೆ, ಬಿಜೆಪಿ ಅಧಿಕಾರದಲ್ಲಿರುವ ಹರಿಯಾಣದಲ್ಲಿಯೇ ಬಿಜೆಪಿಯನ್ನು ಜನರು ತಿರಸ್ಕರಿಸುತ್ತಿದ್ದು, ನೂರಕ್ಕೂ ಹೆಚ್ಚು ಹಳ್ಳಿಗಳು ಬಿಜೆಪಿಗೆ ಬಹಿಷ್ಕಾರ ಹಾಕಿವೆ. ಈ ಮಧ್ಯೆ ಹರಿಯಾಣದ ಗ್ರಾಮವೊಂದರ ಪ್ರವೇಶ ರಸ್ತೆಯಲ್ಲಿ “ಬಿಜೆಪಿ ಹಾಗೂ ಜೆಜೆಪಿಗರು ಗ್ರಾಮಕ್ಕೆ ಪ್ರವೇಶಿಸಿದರೆ ಅವರ ಜೀವ ಮತ್ತು ಆಸ್ತಿಪಾಸ್ತಿಗೆ ನೀವೇ ಜವಾಬ್ದಾರರು” ಎಂದು ಪೋಸ್ಟರ್‌ ಹಾಕಲಾಗಿದೆ.

ಹರಿಯಾಣ ಅಂಬಾಲಾ, ಕುರುಕ್ಷೇತ್ರ, ಕರ್ನಾಲ್, ಸಿರ್ಸಾ, ಜಿಂದ್, ಫತೇಹಾಬಾದ್, ಪಾಣಿಪತ್, ಸೋನಿಪತ್, ಜಜ್ಜರ್ ಮತ್ತು ರೋಹ್ಟಕ್ ಸೇರಿದಂತೆ ಹಲವಾರು ಜಿಲ್ಲೆಗಳ ಹಳ್ಳಿಗಳು ಆಡಳಿತಾರೂಢ ಮೈತ್ರಿಕೂಟದ ನಾಯರಿಗೆ ಪ್ರವೇಶವಿಲ್ಲ ಎಂದು ಬ್ಯಾನರ್‌ಗಳನ್ನು ಹಾಕಿದ್ದಾರೆ. ಅಲ್ಲದೆ, ಹಳ್ಳಿಗಳ ಕಾರ್ಯಕ್ರಮಗಳಿಗೆ ಬಿಜೆಪಿ ನಾಯಕರನ್ನು ಕರೆಯುವುದನ್ನೂ ನಿಷೇಧಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ರೋಹ್ಟಕ್‌ನ ಭೆನಿ ಚಂದರ್ಪಾಲ್ ಗ್ರಾಮದ ಪೋಸ್ಟರ್‌ ಒಂದು ಬಿಜೆಪಿ ಮತ್ತು ಜೆಜೆಪಿ ನಾಯಕರನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದು, ಎಚ್ಚರಿಕೆಯನ್ನೂ ನೀಡಿದೆ. ಅದರಲ್ಲಿ, “ಬಿಜೆಪಿ ಹಾಗೂ ಜೆಜೆಪಿಗರು ಗ್ರಾಮಕ್ಕೆ ಪ್ರವೇಶಿಸಿದರೆ ಅವರ ಜೀವ ಮತ್ತು ಆಸ್ತಿಪಾಸ್ತಿಗೆ ಅವದೇ ಜವಾಬ್ದಾರರಾಗಿರುತ್ತಾರೆ” ಎಂದು ಬರೆದಿದೆ.

ರಾಜ್ಯದ ಉಪಮುಖ್ಯಮಂತ್ರಿ ದುಶ್ಯಂತ್ ಚೌತಲಾ ಮತ್ತು ಅವರ ಮೊಮ್ಮಗ ರಂಜಿತ್ ಸಿಂಗ್ ಅವರ ತವರೂರಾದ ನಾನಕ್ಪುರ ಮತ್ತು ಸಿರ್ಸಾದಲ್ಲಿನ ಹಲವಾರು ಹಳ್ಳಿಗಳಲ್ಲಿ ಇಬ್ಬರಿಗೂ ಪ್ರವೇಶವನ್ನು ನಿಷೇಧಿಸಿದ್ದಾರೆ. ಬಿಜೆಪಿ ಅಥವಾ ಜೆಜೆಪಿಯ ಯಾರಾದರು ನಾಯಕರು ಗ್ರಾಮಕ್ಕೆ ಪ್ರವೇಶಿಸಿದರೆ, ಸರ್ಕಾರ ರೈತರ ಮೇಲೆ ಲಾಠಿಚಾರ್ಜ್ ಮಾಡಿದಂತೆ ಗ್ರಾಮಸ್ಥರು ಲಾಠಿಚಾರ್ಜ್ ಮಾಡುತ್ತಾರೆ ಎಂದು ಎಚ್ಚರಿಸಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಕ್ಷೇತ್ರದ ಹಳ್ಳಿಗಳಾದ ಜೈಸಿಂಗ್‌ಪುರ, ಡೇರಾ ಗಾಮಾ, ಖಿಜ್ರಾಬಾದ್ ಮತ್ತು ಕರ್ನಾಲ್ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಇದೇ ರೀತಿಯ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.

ಇದನ್ನೂ ಓದಿ: ಈ ಹಳ್ಳಿಯಲ್ಲಿ BJPಗೆ ಇಲ್ಲ ಪ್ರವೇಶ: ಕೇಸರಿ ಪಡೆಗೆ ಬಾಯ್ಕಾಟ್‌ ಹೇಳಿದ್ದಾರೆ ಗ್ರಾಮಸ್ಥರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights