2023ರ ವರೆಗೆ BCCI ಕ್ರಿಕೆಟ್‌ ವೇಳಾಪಟ್ಟಿ ಬಿಡುಗಡೆ: ಟೀಂ ಇಂಡಿಯಾಗೆ ಬ್ಯಾಕ್‌ ಟು ಬ್ಯಾಕ್‌ ಟೂರ್ನಿಗಳು!

ಕೊರೊನಾದಿಂದಾಗಿ ಸುಮಾರು ತಿಂಗಳುಗಳ ಕಾಲ ಕ್ರಿಕೆಟ್‌ ಆಟ ಸಂಪೂರ್ಣ ಬಂದ್‌ ಆಗಿತ್ತು. ಇದೀಗ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾದ ನಂತರ ಐಪಿಲ್‌, ಇಂಡಿಯಾ-ಆಸ್ಟ್ರೇಲಿಯಾ ಕ್ರಿಕೆಟ್‌ ಸರಣಿ ಮುಗಿದಿದ್ದು, ಇಂಗ್ಲೆಂಡ್‌ ಜೊತೆ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ನಿರತವಾಗಿದೆ. ಈ ನಡುವೆ, ಬಿಸಿಸಿಐ 2023ರವರೆಗಿನ ಟೀ ಇಂಡಿಯಾದ ಕ್ರಿಕೆಟ್‌ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪ್ರಸ್ತುತ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಕ್ರಿಕೆಟ್ ಸರಣಿಯನ್ನು ಆಡುತ್ತಿದೆ. ಇಲ್ಲಿಂದ 2023ರವರೆಗೂ ಟೀಂ ಇಂಡಿಯಾ ನಾನ್ ಸ್ಟಾಪ್ ಟೂರ್ನಿಗಳನ್ನು ಆಡಲಿದೆ.

ಬಿಸಿಸಿಐ ಬಿಡುಗಡೆ ಮಾಡಿರುವ ವೇಳಾಪಟ್ಟಿ ಹೀಗಿದೆ:

* 2021ರ ಏಪ್ರಿಲ್ ನಿಂದ ಮೇನಲ್ಲಿ – ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್ 2021)

* 2021ರ ಜೂನ್ ನಿಂದ ಜುಲೈನಲ್ಲಿ – ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, ಭಾರತ ವಿರುದ್ಧ ಶ್ರೀಲಂಕಾ(3 ಏಕದಿನ, 5 ಟಿ20), ಏಷ್ಯಾ ಕಪ್

* 2021ರ ಜುಲೈನಲ್ಲಿ ಭಾರತ ವಿರುದ್ಧ ಜಿಂಬಾಬ್ವೆ(3 ಏಕದಿನ ಪಂದ್ಯ)

* 2021ರ ಜುಲೈನಿಂದ ಸೆಪ್ಟೆಂಬರ್ – ಭಾರತ ವಿರುದ್ಧ ಇಂಗ್ಲೆಂಡ್ (5 ಟೆಸ್ಟ್)

* 2021ರ ಅಕ್ಟೋಬರ್ ನಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ(3 ಏಕದಿನ, 5 ಟಿ20)

* 2021ರ ಅಕ್ಟೋಬರ್ ನಿಂದ ನವೆಂಬರ್ – ಐಸಿಸಿ ಟಿ20 ವಿಶ್ವಕಪ್

* 2021ರ ನವೆಂಬರ್ ನಿಂದ ಡಿಸೆಂಬರ್ – ಭಾರತ ವಿರುದ್ಧ ನ್ಯೂಜಿಲೆಂಡ್ (2 ಟೆಸ್ಟ್, 3 ಟಿ20), ಭಾರತ ವಿರುದ್ಧ ದಕ್ಷಿಣ ಆಫ್ರಿಕಾ(3 ಟೆಸ್ಟ್, 3 ಟಿ20)

* 2022ರ ಜನವರಿಯಿಂದ ಮಾರ್ಚ್ – ಭಾರತ ವಿರುದ್ಧ ವೆಸ್ಟ್ ಇಂಡೀಸ್(3 ಏಕದಿನ, 3 ಟಿ20), ಭಾರತ ವಿರುದ್ಧ ಶ್ರೀಲಂಕಾ (3 ಟೆಸ್ಟ್, 3 ಟಿ20)

* 2022ರ ಏಪ್ರಿಲ್ ನಿಂದ ಮೇ – ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2022)

* 2022ರ ಜೂನ್ ನಲ್ಲಿ ಟೀಂ ಇಂಡಿಯಾಕ್ಕೆ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳು ನಿಗದಿಪಡಿಸಲಾಗಿಲ್ಲ.

* 2022ರ ಜುಲೈನಿಂದ ಆಗಸ್ಟ್ – ಭಾರತ ವಿರುದ್ಧ ಇಂಗ್ಲೆಂಡ್ (3 ಏಕದಿನ, 3ಟಿ20), ಭಾರತ ವಿರುದ್ಧ ವೆಸ್ಟ್ ಇಂಡೀಸ್ (3 ಏಕದಿನ, 3 ಟಿ20)

* 2022ರ ಸೆಪ್ಟೆಂಬರ್ – ಏಷ್ಯಾ ಕಪ್

* 2022ರ ಅಕ್ಟೋಬರ್ ನಿಂದ ನವೆಂಬರ್ – ಐಸಿಸಿ ವರ್ಲ್ಡ್ ಟಿ 20(ಆಸ್ಟ್ರೇಲಿಯಾ)

* 2022ರ ನವೆಂಬರ್ ನಿಂದ ಡಿಸೆಂಬರ್ – ಭಾರತ ವಿರುದ್ಧ ಬಾಂಗ್ಲಾದೇಶ (2 ಟೆಸ್ಟ್, 3 ಟಿ20), ಭಾರತ ವಿರುದ್ಧ ಶ್ರೀಲಂಕಾ (5 ಏಕದಿನ)

* 2023ರ ಜನವರಿ – ಭಾರತ ವಿರುದ್ಧ ನ್ಯೂಜಿಲೆಂಡ್ (3 ಏಕದಿನ, 3 ಟಿ20)

* 2023ರ ಫೆಬ್ರವರಿ ನಿಂದ ಮಾರ್ಚ್ – ಭಾರತ ವಿರುದ್ಧ ಆಸ್ಟ್ರೇಲಿಯಾ(4 ಟೆಸ್ಟ್, 3 ಏಕದಿನ, 3 ಟಿ20)

ಇದನ್ನೂ ಓದಿ: ಸಚಿನ್‌ ಭಾರತ ರತ್ನ ಪ್ರಶಸ್ತಿಗೆ ಅರ್ಹರಲ್ಲ: ಆರ್‌ಜೆಡಿ ನಾಯಕ ಶಿವಾನಂದ್‌ ತಿವಾರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights