Fact Check : ಅಟಲ್ ಸುರಂಗದಲ್ಲಿ ಹೋಳಿ ಆಚರಣೆಯೆಂದು ತಪ್ಪಾದ ವಿಡಿಯೋ ಹಂಚಿಕೆ!
ಕಟ್ಟಡವೊಂದರಿಂದ ವರ್ಣರಂಜಿತ ಹೊಗೆಯ ಅದ್ಭುತ ಪ್ರದರ್ಶನವನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಹೋಳಿಯನ್ನು ಹಿಮಾಚಲ ಪ್ರದೇಶದ ಅಟಲ್ ಸುರಂಗದಲ್ಲಿ ಆಚರಿಸಲಾಯಿತು ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು “ಹ್ಯಾಪಿ ಹ್ಯಾಪಿ ಹೋಳಿ. ಅಟಲ್ ಟನ್ನೆಲ್, ರೋಹ್ಟಾಂಗ್, ಹಿಮಾಚಲ್ ಪ್ರದೇಶ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಆದರೆ ಈ ವೀಡಿಯೊವನ್ನು ಅಟಲ್ ಟನ್ನೆಲ್, ರೋಹ್ಟಾಂಗ್, ಹಿಮಾಚಲ್ ಪ್ರದೇಶದಿಂದ ಅಲ್ಲ, ಬದಲಿಗೆ ಸೌದಿ ಅರೇಬಿಯಾದ ಕಿಂಗ್ ಅಬ್ದುಲಾಜಿಜ್ ಸೆಂಟರ್ ಫಾರ್ ವರ್ಲ್ಡ್ ಕಲ್ಚರ್ ನಲ್ಲಿ ತೆಗೆಯಲಾಗಿದೆ. ಈ ವೀಡಿಯೊ 2018 ರಿಂದ ಅಂತರ್ಜಾಲದಲ್ಲಿದೆ ಮತ್ತು ಹೋಳಿಯೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ.
ಇದೇ ರೀತಿಯ ಸಂದೇಶದೊಂದಿಗೆ ವೀಡಿಯೊವನ್ನು ಫೇಸ್ಬುಕ್ನಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ.
Beautiful daytime fireworks show at @Ithra in Dhahran pic.twitter.com/paf8Y92wTb
— عبدالله بن خالد (@AbdullahKhaledS) October 28, 2018
ಯೂಟ್ಯೂಬರ್ ಕಳೆದ ವರ್ಷ “ದಿ ಕಿಂಗ್ ಅಬ್ದುಲಾಜಿಜ್ ಸೆಂಟರ್ ಫಾರ್ ವರ್ಲ್ಡ್ ಕಲ್ಚರ್ ಖೋಬಾರ್ನಲ್ಲಿ ವರ್ಣರಂಜಿತ ಪಟಾಕಿ” ಎಂಬ ಶೀರ್ಷಿಕೆಯೊಂದಿಗೆ ಇದನ್ನು ಹಂಚಿಕೊಂಡಿರುವುದನ್ನು ನೋಡಬಹುದು.

ಇತ್ರಾ ಎಂದೂ ಕರೆಯಲ್ಪಡುವ ಕಿಂಗ್ ಅಬ್ದುಲಾ ಜಿಜ್ ಸೆಂಟರ್ ಫಾರ್ ವರ್ಲ್ಡ್ ಕಲ್ಚರ್, ವಸ್ತುಸಂಗ್ರಹಾಲಯಗಳು, ಗ್ರಂಥಾಲಯ ಮತ್ತು ನಾಟಕ ಮತ್ತು ಪ್ರದರ್ಶನ ಸಭಾಂಗಣಗಳನ್ನು ಒಳಗೊಂಡಿದೆ. ಇದು ಸೌದಿ ಅರೇಬಿಯಾದ ಧಹ್ರಾನ್ ನಗರದಲ್ಲಿದೆ.
The lifeline of Himachal Pradesh Atal Tunnel, the longest highway tunnel in the globe will help you reach Leh in a few hours. Our Hon'ble PM Shri Narendra Modi inaugurated this spectacular wonder on 3rd October, 2020.
Repost: ‘kullumanaliadventures’@prahladspatel #DekhoApnaDesh pic.twitter.com/n32fhKotOm— Ministry of Tourism (@tourismgoi) October 21, 2020
ಆದ್ದರಿಂದ, ವೈರಲ್ ವೀಡಿಯೊ ಕಿಂಗ್ ಅಬ್ದುಲಾಜಿಜ್ ಸೆಂಟರ್ ಫಾರ್ ವರ್ಲ್ಡ್ ಕಲ್ಚರ್ನಲ್ಲಿ ವರ್ಣರಂಜಿತ ಪಟಾಕಿ ಸಿಡಿಸಿರುವುದು ಸ್ಪಷ್ಟವಾಗಿದೆ. ಇದಕ್ಕೂ ಹೋಳಿ ಹಬ್ಬಕ್ಕೂ ಯಾವುದೇ ಸಂಬಂಧವಿಲ್ಲ.

