ರೇಸ್ ಕೋರ್ಸ್ ಹಾಗೂ ಮೆಟ್ರೋಗೂ ತಟ್ಟಿದ ಕೊರೊನಾ ಭೀತಿ : ಪ್ರೇಕ್ಷಕ, ಪ್ರಯಾಣಿಕರಲ್ಲಿ ಇಳಿಕೆ

ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ನಂತರ ಕೊರೊನಾ ಭೀತಿ ಸದ್ಯ ಮೆಟ್ರೋಕ್ಕೂ ರವಾನೆಯಾಗಿದೆ. ಪರಿಣಾಮ 20-30 ರಷ್ಟು ಪ್ರಯಣಿಕರಲ್ಲಿ ಇಳಿಮುಖವಾಗಿದೆ.

ಬೆಂಗಳೂರಿನಲ್ಲಿ 6 ಜನರಿಗೆ ಕೊರೊನಾ ಸೋಂಕು ಹರಡಿರುವ ಭೀತಿಯಿಂದ ಜನ ಪ್ರಯಾಣ ಮಾಡಲು ಹೆದರುತ್ತಿದ್ದಾರೆ. ಇಷ್ಟು ದಿನ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣ ಮಾಡಲು ಹೆದರುತ್ತಿದ್ದ ಜನ ಸದ್ಯ ಮೆಟ್ರೋದಲ್ಲಿ ಓಡಾಡು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಮೆಟ್ರೋ ಪ್ರಯಾಣಿಕರಲ್ಲಿ ಭಾರಿ ಇಳಿಮುಖ ಕಂಡಿದೆ.

ಇನ್ನೂ ಬೆಂಗಳೂರು ರೇಸ್ ಕೋರ್ಸ್ ಗೂ ಕೊರೊನಾ ಭೀತಿ ತಟ್ಟಿದೆ. ಇಂದು ಮತ್ತು ರೇಸ್ ಕೋರ್ಸ್ ಬಂದ್ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಜನ ದಟ್ಟಣೆಯಿಂದ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿದ್ದು ಆರೋಗ್ಯ ಇಲಾಖೆಯ ನಿರ್ದೇಶನದಡಿ ಇಂದು ಮತ್ತು ನಾಳೆ ರೇಸ್ ಕೋರ್ಸ್ ನ್ನು ಬಂದ್ ಮಾಡಲಾಗಿದೆ.

ಕೊರೊನಾ ವೈರಸ್ ಸೋಂಕು ತಗಲುವ ಭೀತಿಯಿಂದ ಜನರು ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ. ಸದಾ ಜನರಿಂದ ಗಿಜಿಗಿಡುತ್ತಿದ್ದ ಶಾಪಿಂಗ್ ಮಾಲ್, ಹೋಟೆಲ್ ಗಳಲ್ಲಿ, ಪ್ರವಾಸಿ ತಾಣಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ.

ಇನ್ನೂ ಶುಕ್ರವಾರ ಬಂದರೆ ಸಾಕು ತಮ್ಮ ನೆಚ್ಚಿನ ನಟ-ನಟಿಯರ ಸಿನಿಮಾಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಎನ್ನುವ ಜನ ಥಿಯೇಟರ್ ಬಳಿ ಮೂಖ ಮಾಡಿ ನೋಡುತ್ತಿಲ್ಲ.

ಸಿನಿಮಾ ಥಿಯೇಟರ್ ಗಳೆಲ್ಲ ಖಾಲಿ ಹೊಡೆಯುತ್ತಿವೆ. ಏರ್ ಲೈನ್ಸ್ ಕೈಗಾರಿಕೆ, ಹೋಟೆಲ್ ಸೇರಿ ಬಹಳಷ್ಟು ವಾಣಿಜ್ಯ ಸಂಸ್ಥೆಗಳ ವ್ಯಾಪಾರ ವಹಿವಾಟು ಕ್ಷೀಣಿಸಿದೆ. ಪ್ರತಿದಿನ ಸಾವಿರಾರು ಕೋಟಿ ರೂ. ನಷ್ಟವಾಗುತ್ತಿದೆ. ಲಕ್ಷಾಂತರ ುದ್ಯೋಗಸ್ಥರ ಜೀವನ ನಿರ್ವಹಣೆಗೆ ತೊಡಕು ಉಂಟಾಗಿದೆ.

ಪ್ರವಾಸಿ ತಾಣದಲ್ಲೂ ಜನರಿಲ್ಲ. ಪ್ರವಾಸಿತಾಣಗಳಿಗೂ ಕೊರೊನಾ ವೈರಸ್ ನ ಬಿಸಿ ತಟ್ಟಿದೆ. ಪ್ರವಾಸಕ್ಕಾಗಿ ಮಾಡಿದ್ದ ಬುಕ್ಕಿಂಗ್ ಅನ್ನು ಜನರು ರದ್ದುಪಡಿಸುತ್ತಿದ್ದಾರೆ. ಹೀಗಾಗಿ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿವೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ನೋಡುವವರ ಸಂಖ್ಯೆ ಸೇ 20 ಹಾಗೂ ಏಕಪರದೆ ಚಿತ್ರಮಂದಿರಗಳಲ್ಲಿ ವೀಕ್ಷಕರ ಸಂಖ್ಯೆ ಶೇ.5 ಇಳಿದಿದೆ. ಚಿಕನ್-ಮಟನ್ ಖರೀದಿಸುವವರ ಸಂಖ್ಯೆ ಶೇ.50 ಕ್ಷೀಣಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights