‘ಒಂದು ರಾಷ್ಟ್ರ – ಒಂದು ಚುನಾವಣೆ’ ಜಾರಿಗೆ ಚುನಾವಣಾ ಆಯೋಗ ಸಿದ್ದವಾಗಿದೆ: ಚುನಾವಣಾ ಆಯುಕ್ತ

ಕೇಂದ್ರ ಸರ್ಕಾರ ಜಾರಿಗೆ ತರಲು ಯತ್ನಿಸುತ್ತಿದ್ದ “ಒನ್‌ ನೇಷನ್‌ – ಒನ್‌ ಎಲೆಕ್ಷನ್” ವ್ಯವಸ್ಥೆಯನ್ನು ಜಾರಿಗೆ ತರು ಚುನಾವಣಾ ಆಯೋಗ ಸಿದ್ದವಾಗಿದೆ ಎಂದು ಚುನಾವಣಾ ಆಯುಕ್ತ ಸುನೀಲ್‌ ಅರೋರಾ ಹೇಳಿದ್ದಾರೆ.

ಚುನಾವಣಾ ಕಾನೂನುಗಳಿಗೆ ತಿದ್ದುಪಡಿಗಳ ನಂತರ ‘ಒನ್ ನೇಷನ್ ಒನ್ ಚುನಾವಣೆ’ ಜಾರಿಗೆ ತರಲು ಚುನಾವಣಾ ಆಯೋಗ ಸಿದ್ದವಾಗಿದೆ ಎಂದು ನ್ಯೂಸ್‌ 18 ಜೊತೆ ಮಾಡನಾಡಿರುವ ಅವರು ಹೇಳಿದ್ದಾರೆ.

ನವೆಂಬರ್ ನಲ್ಲಿ ಪ್ರಧಾನಿ ಮೋದಿಯವರು. ಚುನಾವಣೆಗಳು ದೇಶದ ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತವೆ. ಭಾರತದಲ್ಲಿ ತಿಂಗಳಿಗೊಮ್ಮೆ ವಿವಿಧ ಪ್ರದೇಶಗಳಲ್ಲಿ ಚುನಾವಣೆಗಳು ನಡೆಯುತ್ತವೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯುಂಟಾಗುತ್ತವೆ. ಅದಕ್ಕಾಗಿ ಒನ್‌ ನೇಷನ್‌- ಒನ್‌ ಎಲೆಕ್ಷನ್‌ ವ್ಯವಸ್ಥೆ ಜಾರಿಗೆ ತರಬೇಕು ಎಂದು ಪ್ರಧಾನಿ ಮೋದಿ ನವೆಂಬರ್‌ನಲ್ಲಿ ಹೇಳಿದ್ದರು.

‘ಒಂದು ರಾಷ್ಟ್ರ, ಒಂದು ಚುನಾವಣೆ’ ಪದ್ಧತಿಗೆ ಕಾಂಗ್ರೆಸ್ ಪಕ್ಷ ವೂ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಬೆಂಬಲ ನೀಡಿಲ್ಲ. ಈ ಚುನಾವಣೆಗಳು ಅಪ್ರಾಯೋಗಿಕವಾದದ್ದು ಎಂದು ವಿರೊಧ ಪಕ್ಷಗಳು ಹೇಳಿವೆ.

2015ರಲ್ಲಿ ಇ.ಎಂ.ಸುದರ್ಶನ ನಾಚಿಯಪ್ಪನ್ ನೇತೃತ್ವದ ಸಿಬ್ಬಂದಿ- ಸಾರ್ವಜನಿಕ ಕುಂದುಕೊರತೆ ಸಮಿತಿ, ಕಾನೂನು ಮತ್ತು ನ್ಯಾಯ ಕುರಿತ ಸಂಸದೀಯ ಸ್ಥಾಯಿ ಸಮಿತಿಯೂ ಈ ವ್ಯವಸ್ಥೆಯನ್ನು ಶಿಫಾರಸು ಮಾಡಿತ್ತು. 2018ರಲ್ಲಿ ಕಾನೂನು ಆಯೋಗವು ತನ್ನ ಕರಡು ವರದಿಯಲ್ಲಿ ಅಲ್ಲಾ ಚುನಾವಣೆಗಳನ್ನು ಒಟ್ಟಿಗೆ ನಡೆಸಬೇಕು ಎಂದು ಅನುಮೋದಿಸಿತ್ತು.


ಇದನ್ನೂ ಓದಿ: ಗುರುದ್ವಾರಕ್ಕೆ ಭೇಟಿ ನೀಡಿದ ಮೋದಿ; ‘ಈ ನಾಟಕ ಬೇಡ’ ಎಂದ ನಟ್ಟಿಗರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights