ಐಟಿಒ ಸರ್ಕಲ್ನಲ್ಲಿ ಪೋಲಿಸ್ ರೈತರ ನಡುವೆ ಘರ್ಷಣೆ : ರಣರಂಗವಾಯ್ತು ನವದೆಹಲಿ!
ದೆಹಲಿಯ ಐಟಿಒ ಸರ್ಕಲ್ ನಲ್ಲಿ ಪೋಲಿಸ್ ಹಾಗೂ ರೈತರ ನಡುವೆ ಘರ್ಷಣೆ ನಡೆದಿದ್ದು ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ನವದೆಹಲಿ ಘರ್ಷಣೆಯಿಂದಾಗಿ ರಣರಂಗವಾಗಿದೆ.
ಸಿಂಘು, ಗಾಜಿಯಾಪುರದಿಂದ ತಂಡೋಪತಂಡವಾಗಿ ಬರುತ್ತಿದ್ದ ರೈತರನ್ನು ಮಾರ್ಗ ಮಧ್ಯೆ ತಡೆದ ಪೊಲೀಸರ ಮೇಲೂ ಹಲ್ಲೆ ಮಾಡಲಾಗಿದೆ. ಘರ್ಷಣೆಯಲ್ಲಿ ರೈತರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ. ಜೊತೆಗೆ ಸಾರ್ವಜನಿಕ ಬಸ್ ಗಳನ್ನು ಅಡ್ಡಹಾಕಲಾಗಿದೆ.
ಆದರೆ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಲು ಪೊಲೀಸರು ಬಸ್ ಅಡ್ಡಹಾಕಲು ಕ್ರಮ ಕೈಗೊಂಡರಾ..? ಅಥವಾ ರೈತರು ಈ ಬಸ್ ಗಳನ್ನು ಹಿಮ್ಮೆಟ್ಟಿಸಿ ಮುಂದೆ ಸಾಗಿದ್ರು ಇದರಲ್ಲಿ ಸಾರ್ವಜಿನ ಆಸ್ತಿ ಹಾಳಾಗಿದೆ ಎಂದು ಹೇಳಲು ಬಸ್ ಗಳನ್ನು ಅಡ್ಡಲಾಗಿ ನಿಲ್ಲಿಸಲಾಗಿದಿಯಾ? ಅನ್ನೋ ಅನುಮಾನ ಶುರುವಾಗಿದೆ. ಆದರೆ ಟ್ರ್ಯಾಕ್ಟರ್ ಗಳ ಮೂಲಕ ಬಸ್ ಗಳನ್ನು ತಳ್ಳಲು ರೈತರು ಮುಂದಾಗಿದ್ದಾರೆ. ಬಸ್ ಗಳ ಗಾಜುಗಳನ್ನು ಪುಡಿಪುಡಿ ಮಾಡಲಾಗಿದೆ. ಬ್ಯಾರಿಕೇಡ್ ಗಳನ್ನು ಭೇದಿಸಿ ಸಿಕ್ಕ ಸಿಕ್ಕಲ್ಲಿ ಬೈಕ್, ಟ್ರ್ಯಾಕ್ಟರ್ ಗಳನ್ನು ಹತ್ತಿಸುತ್ತಿದ್ದಾರೆ.
ನವದೆಹಲಿಯಲ್ಲಿ ಗಣರಾಜ್ಯೋತ್ಸವದ ಇತಿಹಾಸದಲ್ಲಿ ಈ ರೀತಿಯ ಘಟನೆ ಹಿಂದೆದು ಕಂಡರಿಯದ ಘರ್ಷಣೆ ನಡೆಯುತ್ತಿದೆ.
ಭುಗಿಲೆದ್ದ ಹಿಂಸಾಚಾರದಿಂದಾಗಿ ದೆಹಲಿಯಲ್ಲಿ ಕೆಂಪುಕೋಟೆಯ ಮೆಟ್ರೋ ಸಂಚಾರ ಬಂದ್ ಮಾಡಲಾಗಿದೆ. ಘರ್ಷಣೆಯಲ್ಲಿ ಹಲವಾರು ಪೊಲೀಸರಿಗೆ ಗಾಯವಾಗಿದೆ. ಬೈಕ್, ಕಾರ್ ಗಳ ಮೂಲಕ ಪಂಜಾಬಿಗಳು ರ್ಯಾಲಿ ನಡೆಸಿದ್ದಾರೆ. ಸಂಸತ್ ಭವನದಿಂದ 5 ಕಿ.ಮೀಟರ್ ದೂರದಲ್ಲಿ ರೈತರ ಪ್ರತಿಭಟನೆ ಸಾಗಿ ಬರುತ್ತಿದ್ದು ಶಾಂತಿಯುತವಾಗಿ ನಡೆಯಬೇಕಿದ್ದ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದೆ.
ಟ್ರ್ಯಾಕ್ಟರ್ ಗಳ ಮೇಲೂ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದಾರೆ.

