ದೇಶದ ಸಂಕಷ್ಟಕ್ಕೆ ಸರ್ಕಾರದ ಗೊಂದಲದ ನಿಯಮಗಳೇ ಕಾರಣ; ಮುಂದೇನು ಮಾಡಬೇಕು 

ಆರ್ಥಿಕ ಚಟುವಟಿಕೆ ಮತ್ತು ಪ್ರಯಾಣ ಪುನರಾರಂಭ ಹಾಗೂ ಕೊರೊನಾ ಸೋಂಕು ವ್ಯಾಪಕವಾಗಿ ಹರಡು ಆರಂಭಿಸಿರುವ ಸಂದರ್ಭದ ಸವಾಲುಗಳನ್ನು ಮುಂದಿನ ದಿನಗಳಲ್ಲಿ ಭಾರತವು ಎದುರಿಸಲಿದೆ. ಮುಂದಿನ ದಿನಗಳಲ್ಲಿ ಕೊರೊನಾ ವೈರಸ್‌ ಕಳೆದ ಮೂರು ತಿಂಗಳುಗಳಿಗಿಂತ ಹೆಚ್ಚು ವೇಗವಾಗಿ ಹರಡಬಹುದಾದ ಸಾಧ್ಯತೆಗಳಿವೆ.

ಸೋಂಕಿನ ಹರಡುವಿಕೆಯ ವೇಗವನ್ನು ಲಾಕ್‌ಡೌನ್‌ನಿಂದ ನಿಯಂತ್ರಿಸಲು ಸಾಧ್ಯವಾಗಿತ್ತು. ಆದರೆ, ಈಗ ಜನರು ತಮ್ಮ ಸುರಕ್ಷತೆಗಾಗಿ ನಿಯಮಗಳನ್ನು ರೂಪಿಸಿಕೊಂಡು ಕೆಲಸಗಳನ್ನು ಪುನಾರಂಭಿಸಬೇಕಾಗಿದೆ. ಇದರಿಂದಾಗಿ ಸೋಂಕಿನ ವಿರುದ್ಧ ಮತ್ತಷ್ಟು ಹೋರಾಟ ನಡೆಸಬಹುದು.

ದುಡಿಯವ ಜನರು ವೈಯಕ್ತಿಕ ನೈರ್ಮಲ್ಯ ಮತ್ತು ಸಾಮಾಜಿಕ ಅಂತರದ ಬಗ್ಗೆ ಹೆಚ್ಚಿನ ಅರಿವು ಹೊಂದಬೇಕಿತ್ತು. ಆದರೆ, ಅರಿವು ಮೂಢಿಸಲು ವಿಫಲ ಪ್ರಯತ್ನಗಳಷ್ಟೇ ನಡೆದವು. ಅಲ್ಲದೆ, ಆರ್ಥಿಕತೆ ಮತ್ತು ಜನರ ಜೀವನದ ಸಂಕಷ್ಟಕ್ಕೆ ಕಾರಣವಾದ ಮೂಲವೆಂದರೆ ಬಹು ಅಧಿಕಾರಿ ವರ್ಗ ಮತ್ತು ಬದಲಾಗುತ್ತಿರುವ ನಿಯಮಗಳಿಂದ ಉಂಟಾಗುವ ಗೊಂದಲ ಮತ್ತು ನಿರ್ಲಕ್ಷ್ಯಗಳೇ ಆಗಿರಬಹುದು. ಇಂತಹ ಸಂದರ್ಭದಲ್ಲಿ ಒಮ್ಮತದ ನಿರ್ಧಾರ, ಸಮಾಲೋಚನೆಯು ಅಗತ್ಯವಾಗಿರುತ್ತದೆ. ಜೊತೆಗೆ, ಸೋಂಕಿನ ಡೇಟಾವನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಬೇಕಾಗುತ್ತದೆ.

ಡೇಟಾದ ಮೂಲಕ ಉತ್ತಮ ನೀತಿಗಳನ್ನು ರೂಪಿಸುವುದು 

ಪ್ರಪಂಚದ ಕೆಲವು ಭಾಗಗಳಲ್ಲಿ, ಕೊರೊನಾ ಸೋಂಕಿತರ ಕುರಿತಾದ ದತ್ತಾಂಶವನ್ನು ಸಾರ್ವಜನಿಕವಾಗಿ ತೆರೆದಿಡಲಾಗಿದೆ ಅಥವಾ ಕನಿಷ್ಠ ಸಂಶೋಧಕರೊಂದಿಗೆ ಹಂಚಿಕೊಳ್ಳಲಾಗಿದೆ. ಇದು, ಜಾರಿಗೊಳಿಸಬೇಕಾದ ಅಗತ್ಯ ನಿಯಮಗಳನ್ನು ರೂಪಿಸಲು ಹಾಗೂ ಜನರು ಸೋಂಕಿನ ಬಗ್ಗೆ ಅರ್ಥ ಮಾಡಿಕೊಳ್ಳಲು ಮತ್ತು ವೈರಸ್‌ ಹರಡುವಿಕೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅಧಿಕಾರ ನೀಡುತ್ತದೆ.

ಇದೀಗ, ಭಾರತದಲ್ಲಿ ಗಣನೀಯ ಸಂಖ್ಯೆಯ ಪ್ರಕರಣಗಳಿವೆ. ರೋಗಿಗಳ ಡೇಟಾ ಸೆಟ್ ಹಾಗೂ ಅವರ ಸಮಸ್ಯೆಳು ಮತ್ತು ಇತರ ವಿವರಗಳು ಕೊರೊನಾ ಹರಡುವಿಕೆಯನ್ನು ಅರ್ಥಮಾಡಿಕೊಳ್ಳಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇಟಲಿಯಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ಜನರು ಸೋಂಕಗೆ ಒಳಗಾಗಿದ್ದರೆ, ಭಾರತದಲ್ಲಿ 50 ವರ್ಷ ವಯಸ್ಸು ಅಥವಾ ಆ ಸರಾಸರಿಯಲ್ಲಿರಬಹುದು. ವ್ಯಾಕ್ಸಿನೇಷನ್‌ ಆಥವಾ ಕೆಲವು ರೀತಿಯ ವೈರಸ್‌ಗಳಿಗೆ ಜನರು  ಒಳಗಾಗಿರುವ ಹಿಂದಿನ ಮಾಹಿತಿಯನ್ನು ಅರ್ಥಮಾಡಿಕೊಂಡರೆ, ಅಂತಹ ಜನರು ಇತರರಿಗಿಂತ ಹೆಚ್ಚು ಸುರಕ್ಷಿತವಾಗಬಹುದು.

ಭಾರತೀಯ ಜನಸಂಖ್ಯೆಯ ಗುಣಲಕ್ಷಣಗಳು ವುಹಾನ್, ಇಟಲಿ ಅಥವಾ ನ್ಯೂಯಾರ್ಕ್ ಜನರು ಕೊರೊನಾ ವೈರಸ್‌ಗೆ ಪ್ರತಿಕ್ರಿಯಿಸುವುದಕ್ಕಿಂತ ಭಿನ್ನವಾದ ಲಕ್ಷಣಗಳನ್ನು ಹೊಂದಿರಬಹುದು.  ಅಲ್ಲಿಯ ಜನರ ಹಿಂದಿನ ರೋಗಗಳು ವಿಭಿನ್ನವಾಗಿವೆ. ಹಾಗಾಗಿ, ಲಾಕ್‌ಡೌನ್ ಸಡಿಲವಾಗುತ್ತಿರುವ ಈ ಸಂದರ್ಭದಲ್ಲಿ ಅಂತಹ ಡೇಟಾಗಳನ್ನು ಸಂಶೋಧಕರು ಮತ್ತು ನಿಯಮ ರೂಪಿಸುವವರು ಅಧ್ಯಯನ ಮಾಡಬೇಕು. ಆಗ ಮಾತ್ರ ಉತ್ತಮ ಕಾರ್ಯಯೋಜನೆ ರೂಪಿಸಲು ದಾಧ್ಯವಾಗುತ್ತದೆ.

ಆರೋಗ್ಯ ಸೇತು ಅಪ್ಲಿಕೇಶನ್‌ನ ಬಳಕೆಯು ಮುಂದಿನ ದಿನಗಳಲ್ಲಿ ಹೆಚ್ಚಿನ ಡೇಟಾವನ್ನು ಸಂಗ್ರಹಿಸುತ್ತದೆ. ಇದು ಸ್ವಾಗತಾರ್ಹ. ಅಲ್ಲದೆ, ಡೇಟಾ ಗೌಪ್ಯತೆಗಾಗಿ ಸಾಕಷ್ಟು ನಿಬಂಧನೆಗಳನ್ನು ಮಾಡಿದ ನಂತರ, ಭಾರತದಲ್ಲಿನ ಕೊರೊನಾ ಪ್ರಕರಣಗಳು, ಸಾವುಗಳು, ಗುಣಮುಖರಾದವರ ಮಾಹಿತಿ ಮತ್ತು ಇತರ ಕ್ಲಿನಿಕಲ್ ಗುಣಲಕ್ಷಣಗಳ ಮಾಹಿತಿಯು ಭಾರತದಲ್ಲಿ ಸೋಂಕಿನ ಹರಡುವಿಕೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಉತ್ತಮ ಕಾರ್ಯಯೋಜನೆಗಳನ್ನು ರೂಪಿಸಲು ಸಂಶೋಧಕರಿಗೆ ಸಹಾಯ ಮಾಡುತ್ತದೆ.

ನಿಯಮಗಳ ಬಹುಸಂಖ್ಯೆ ಮತ್ತು ಆರ್ಥಿಕತೆಯ ಮೇಲೆ ಅವುಗಳ ಪ್ರಭಾವ 

ಮುಂಬರುವ ದಿನಗಳಲ್ಲಿ ಒಂದು ದೊಡ್ಡ ಸಮಸ್ಯೆ ತಲೆದೂರಬಹದು. ನಡವಳಿಕೆ, ಪ್ರಯಾಣ, ಕ್ವಾರಂಟೈನ್‌ ಇತ್ಯಾದಿಗಳ ಬಗ್ಗೆ ಗೊಂದಲ ಉಂಟಾಗುವ ಸಾಧ್ಯತೆಯಿದೆ. ಅಲ್ಲದೆ, ನಿಯಮಗಳು ಸ್ಥಳದಿಂದ ಸ್ಥಳಕ್ಕೆ ಮತ್ತು ದಿನದಿಂದ ದಿನಕ್ಕೆ ಬದಲಾಗಬಹುದು.

ಸಧ್ಯದ ಪರಿಸ್ಥಿತಿಯಲ್ಲಿ ಆರ್ಥಿಕತೆ ಸಂಕಷ್ಟದಲ್ಲಿದೆ. ನಿಯಮಗಳು ಆಗಾಗ್ಗೆ ಬದಲಾಗುತ್ತಿರುವುದರಿಂದ ಆರ್ಥಿಕತೆ ಸುಧಾರಿಸಿಕೊಳ್ಳಲು ಹೆಚ್ಚು ಕಷ್ಟಕರವಾಗಿದೆ. ಹಾಗಾಗಿ, ಒಂದು ದೊಡ್ಡ ದೇಶದಲ್ಲಿ ವಿಕೇಂದ್ರಿಕೃತ ನಿರ್ಧಾರಗಳು ಹಾಗೂ ನಿಯಮಗಳನ್ನು ಕೂಪಿಸುವುದು ಉತ್ತಮ. ಆಗ, ಜನರು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ದುಡಿಮೆಗೆ ಹಿಂತಿರುಗಲು ಸಾಧ್ಯವಾಗುತ್ತದೆ.

ಸಮನ್ವಯದ ಕೊರೆತೆಯಿಂದಾಗಿ ಎಲ್ಲೆಡೆ ಗೊಂದಲ ಉಂಟಾಗುತ್ತಿದೆ. ನಾವು ಈಗಾಗಲೇ ಗಮನಿಸಿರುವಂತೆ ವಿಮಾನಯಾನವು ಹೆಚ್ಚಿನ ಸಮಸ್ಯೆಯನ್ನು ಉಂಟುಮಾಡಿದೆ. ಹಲವಾರು ಜನರು ವಿವಿಧ ರಾಜ್ಯಗಳಿಗೆ ಪ್ರಯಾಣಕ್ಕಾಗಿ ವಿಮಾನದಲ್ಲಿ ಸೀಟುಗಳನ್ನು ಬುಕ್‌ ಮಾಡಿದ್ದರು. ಆದರೆ, ಯಾವ ಮಾಹಿತಿಯೂ ಇಲ್ಲದೆ ಹಲವು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಸರಿಯಾದ ಸಮನ್ವಯವಿಲ್ಲದೆ, ಜನರು ವಿಮಾನ ನಿಲ್ದಾಣಗಳಿಗೆ ಬಂದು ಹಿಂದಿರುಗಿ ಮರಳಿದ್ದಾರೆ. ಇದು ಇತ್ತೀಚೆಗಿನ ನಮ್ಮ ಮುಂದಿನ ಉದಾಹರಣೆ. ಹಾಗಾಗಿ ಎಲ್ಲಾ ಹಂತದಲ್ಲಿಯೂ ಸಮನ್ವಯದ ಅಗತ್ಯವಿದೆ.

ಬಹುತೇಕ ಎಲ್ಲ ಹಂತದ ಸರ್ಕಾರಗಳು – ಕೇಂದ್ರ, ರಾಜ್ಯ, ಜಿಲ್ಲೆ, ನಗರ, ಪಂಚಾಯಿತಿಗಳು, ಗ್ರಾಮ ಪಂಚಾಯತಿಗಳು, ಹಾಗೆಯೇ ಸರ್ಕಾರೇತರ ಸೇವಾ ಸಂಸ್ಥೆಗಳಾದ ವಿಮಾನಯಾನ ಸಂಸ್ಥೆಗಳು, ಆರ್‌ಡಬ್ಲ್ಯೂಎಗಳು (ನಿವಾಸಿ ಕಲ್ಯಾಣ ಸಂಘಗಳು), ಮಾರುಕಟ್ಟೆ ಸಂಘಗಳು, ಉಪಕುಲಪತಿಗಳು, ಶಾಲೆ ಮತ್ತು ಕಾಲೇಜು ಪ್ರಾಂಶುಪಾಲರುಗಳು ಅಧಿಕಾರ ಮತ್ತು ಜವಾಬ್ದಾರಿಯುತವಾಗಿ ಕೆಲಸ ಮಾಡುವವರು ಸುರಕ್ಷತವಾಗಿರಲು ಯಾವ ರೀತಿಯ ನಿಯಮಗಳನ್ನು ಮಾಡಬಹುದು ಎಂಬ ಚಿಂತಿಸುತ್ತಾರೆ ಹಾಗೂ ಪ್ರಯತ್ನಿಸುತ್ತಿದ್ದಾರೆ.

ಇದು ಸಾಧ್ಯವಾಗಬೇಕಾದರೆ, ಎಲ್ಲಾ ಹಂತದಲ್ಲಿಯೂ ಉಂಟಾಗಬಹುದಾದ ಗೊಂದಲವನ್ನು ನಿವಾರಿಸಲು ಎಲ್ಲರ ನಡುವೆ ಸಮಸ್ವಯ ಹಾಗೂ ಸಮಾಲೋಚನೆ ಇರಬೇಕು.  ಕಿರುಕುಳ, ಅನಿಯಂತ್ರಿತ ಅಧಿಕಾರ ಮತ್ತು ಅವ್ಯವಸ್ಥೆಯನ್ನು ತಪ್ಪಿಸಲು ಹಾಗೂ ಸುರಕ್ಷತೆ ಮತ್ತು ಅನುಕೂಲತೆಗಳ ಸಮನ್ವಯವನ್ನು ಸಾಧಿಸಲು ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳು ಹಾಗೂ ಇತರ ಸಂಸ್ಥೆಗಳು ನಡುವೆ ಸಮತೋಲನವನ್ನು ಕಂಡುಕೊಳ್ಳಬೇಕಾಗುತ್ತದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights