ಕೊರೊನಾ ಸಮಯದಲ್ಲಿ ದೇಶದಲ್ಲಿ 49 ಲಕ್ಷ ಸಾವುಗಳು ಸಂಭವಿಸಿವೆ: ಅಧ್ಯಯನ ವರದಿ

ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ, ಇದೂವರೆಗೆ ಸುಮಾರು 4.9 ದಶಲಕ್ಷ ಸಾವುಗಳು ಸಂಭವಿಸಿವೆ. ಈ ಪ್ರಕಾರ, ಸರ್ಕಾರದ ಅಧಿಕೃತ ಅಂಕಿಅಂಶಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸಾವುಗಳು ಸಂಭವಿಸಿರಬಹುದು ಎಂದು ಆ ಅಧ್ಯಯನ ವರದಿ ಹೇಳಿದೆ.

ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಈ ವರ್ಷದ ಜೂನ್ ವರೆಗೆ ದಾಖಲಾಗಿರುವ ಎಲ್ಲಾ ರೀತಿಯ ಸಾವುಗಳ ಪ್ರಮಾಣವನ್ನು ವಾಷಿಂಗ್ಟನ್ ಮೂಲದ ಸೆಂಟರ್ ಫಾರ್ ಗ್ಲೋಬಲ್ ಡೆವಲಪ್‌ಮೆಂಟ್‌ನ ವರದಿಯಲ್ಲಿ ದಾಖಲು ಮಾಡಲಾಗಿದೆ ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರು ತಿಳಿಸಿದ್ದಾರೆ.

ಸರ್ಕಾರದ ಅಧಿಕೃತ ಅಂಕಿ-ಅಂಶದ ಪ್ರಕಾರ 4,14,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಇದರ ಪ್ರಕಾರ ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರೆಜಿಲ್ ನಂತರ ವಿಶ್ವದಲ್ಲಿ ಅತಿ ಹೆಚ್ಚು ಸಾವುಗಳನ್ನು ದಾಖಲಿಸಿದ ಮೂರನೇ ದೇಶ ಭಾರತವಾಗಿದೆ. ಆದರೆ ಈ ಅಧ್ಯಯನವು ದೇಶಾದ್ಯಂತದ ಮಾರಣಾಂತಿಕ ಕಾಯಿಲೆಗೆ ಸಾವನ್ನಪ್ಪಿದವರ ಬಗ್ಗೆ ತಜ್ಞರಿಂದ ಹೆಚ್ಚು ಮಾಹಿತಿಯನ್ನು ಕಲೆ ಹಾಕಿದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊರೊನಾ ಸೋಂಕಿನ ಏರಿಕೆ ಹೆಚ್ಚಾಗಿ, ಸಾಂಕ್ರಾಮಿಕ ರೋಗ ಮತ್ತು ಅಪಾಯಕಾರಿ ಡೆಲ್ಟಾ ಪ್ಲಸ್ ರೂಪಾಂತರಿಯಿಂದ ಮೇ ತಿಂಗಳಲ್ಲಿ ಕನಿಷ್ಠ 1,70,000 ಜನರು ಬಲಿಯಾಗಿದ್ದಾರೆ ಎಂದು ಅಧಿಕೃತ ದತ್ತಾಂಶಗಳು ದೃಢಪಡಿಸಿವೆ.

ಇದನ್ನೂ ಓದಿ: ’40 ಕೋಟಿ ಭಾರತೀಯರು ಅಪಾಯದಲ್ಲಿದ್ದಾರೆ’ ಕೇಂದ್ರ ಆರೋಗ್ಯ ಸಚಿವಾಲಯ ಹೀಗೆ ಹೇಳಲು ಕಾರಣವೇನು?

“ದುಃಖಕರ ಸಂಗತಿಯೆಂದರೆ, ಸಾವಿರಕ್ಕಿಂತಲೂ ಲಕ್ಷಗಳಲ್ಲಿ ಹಲವಾರು ಜನರು ಸಾವನ್ನಪ್ಪಿರಬಹುದು” ಎಂದು ವರದಿ ಹೇಳಿದೆ. ಸಾಂಕ್ರಾಮಿಕ ಸಮಯದಲ್ಲಿ 3.4 ಮಿಲಿಯನ್ ಮತ್ತು 4.9 ಮಿಲಿಯನ್ ಹೆಚ್ಚುವರಿ ಸಾವುಗಳು ಸಂಭವಿಸಿವೆ ಎಂದು ಅಂದಾಜಿಸಲಾಗಿದೆ. ಆದರೆ, ಎಲ್ಲಾ ಹೆಚ್ಚುವರಿ ಸಾವುಗಳಿಗೂ ಕೊರೊನಾ ರೋಗವೇ ಕಾರಣ ಎಂದು ವರದಿಯಲ್ಲಿ ಹೇಳಲಾಗಿಲ್ಲ.

ಕೊರೊನಾದಿಂದ ಸಾವನ್ನಪ್ಪಿದವರ ನಿಜವಾದ ಸಂಖ್ಯೆಯನ್ನು ಅಳೆಯಲು ಈ ಸಮಯದಲ್ಲಿ ಉಂಟಾಗಿರುವ ಹೆಚ್ಚುವರಿ ಸಾವುಗಳು ಉತ್ತಮ ಮಾರ್ಗವೆಂದು ಹಲವು ತಜ್ಞರು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾ ಪರಿಸ್ಥಿತಿಯು ಅತೀ ಕೆಟ್ಟದಾಗಿದೆ ಮತ್ತು ಸಾವುಗಳು ಅಂದಾಜು 6,00,000 ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ. ಆದರೆ, ನ್ಯೂಯಾರ್ಕ್ ಟೈಮ್ಸ್ ಅಂಕಿಅಂಶಗಳನ್ನು ಒಕ್ಕೂಟ ಸರ್ಕಾರ ತಳ್ಳಿಹಾಕಿದೆ.

ಭಾರತದ ಜನಸಂಖ್ಯೆಯ ಮೂರನೇ ಎರಡರಷ್ಟು ಜನಸಂಖ್ಯೆಯು ಸುಮಾರು 1.4 ಶತಕೋಟಿ ಜನರು ಕೊರೊನಾ ಪರೀಕ್ಷೆಗೆ ಒಳಗಾಗದೆ ಮನೆಯಲ್ಲಿ ಅನೇಕ ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ತಜ್ಞರು ದೂಷಿಸಿದ್ದಾರೆ.

ಇತ್ತ, ಈ ವರ್ಷದ ಏಪ್ರಿಲ್ ಆರಂಭದಲ್ಲಿ ಅಪ್ಪಳಿಸಿದ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆಕ್ಸಿಜನ್ ಸಿಗದೇ ಜನರು ಒದ್ದಾಡುತ್ತಿರುವ, ಪ್ರಾಣ ಬಿಟ್ಟ ಸಾವಿರಾರು ಪ್ರಕರಣಗಳು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದವು. ಆದರೆ ಆಕ್ಸಿಜನ್ ಕೊರತೆಯಿಂದಾದ ಸಾವುಗಳ ಯಾವುದೇ ವರದಿಯನ್ನು ರಾಜ್ಯಗಳು ನೀಡಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ವಾದಿಸಿದೆ.

ಇದನ್ನೂ ಓದಿ: ‘ಆಮ್ಲಜನಕದ ಕೊರತೆಯಿಂದಾದ ಸಾವುಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ’ ರಾಜ್ಯಗಳನ್ನು ದೂಷಿಸಿದ ಕೇಂದ್ರ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights