ದೆಹಲಿ ಚಲೋ: ವಿಶೇಷ ಅಧಿವೇಶನ ಕರೆದು ಕಾಯ್ದೆಗಳನ್ನು ಹಿಂಪಯುವಂತೆ ರೈತರ ಒತ್ತಾಯ!

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ನೀತಿಗಳನ್ನು ವಿಶೇಷ ಅಧಿವೇಶನ ಕರೆದು ಹಿಂಪಡೆಯುವಂತೆ ಹೋರಾಟ ನಿರತ ರೈತರು ಒತ್ತಾಯಿಸಿದ್ದಾರೆ.

ರೈತರ ಪ್ರತಿಭಟನೆ 08ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸರ್ಕಾರ ಜೊತೆಗೆ ನಾಲ್ಕನೇ ಸುತ್ತಿನ ರೈತರ ಸಭೆ ನಡೆಯಲಿದೆ. ಸಂಸತ್ತಿನ ತುರ್ತು ಅಧಿವೇಶನವನ್ನು ಕರೆಯಲು ಮತ್ತು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಲು ಇಂದಿನ ಮಾತುಕತೆ ಕೇಂದ್ರ ಸರ್ಕಾರಕ್ಕೆ “ಕೊನೆಯ ಅವಕಾಶ” ಎಂದು ರೈತರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೇ, ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೇ ದೆಹಲಿಯ ಇತರ ಪ್ರಮುಖ ರಸ್ತೆಗಳನ್ನು ಬಂದ್ ಮಾಡುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದರು.

ಜೊತೆಗೆ, ಮೊದಲ ಸುತ್ತಿನ ಮಾತುಕತೆ ವಿಫಲವಾದಾಗ, ಪ್ರತಿಭಟನೆಗಳು ಮತ್ತಷ್ಟು ತಿಂಗಳುಗಳು ಮುಂದುವರೆಯಲಿದ್ದು, ಇನ್ನಷ್ಟು ತೀವ್ರಗೊಳ್ಳಲಿವೆ ಎಂದು 32 ರೈತ ಸಂಘಟನೆಗಳು ಹೇಳಿಕೆ ನೀಡಿದ್ದವು. ದೇಶಾದ್ಯಂತ ಮತ್ತಷ್ಟು ರೈತ ಸಂಘಟನೆಗಳು ಈಗಾಗಲೇ ದೆಹಲಿಗೆ ಹೋಗಿ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ತಿಳಿಸಿವೆ.

Read Also: Fact Check: ಭಗವಾನ್ ರಾಮ್ ವಿರುದ್ಧದ ಈ ಬ್ಯಾನರ್ ರೈತರ ಪ್ರತಿಭಟನೆಯದ್ದಾ..?

“ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲು ಸರ್ಕಾರಕ್ಕೆ ಡಿಸೆಂಬರ್ 3 ಕೊನೆಯ ಅವಕಾಶವಾಗಿದೆ. ಇಲ್ಲದಿದ್ದರೆ ಈ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುತ್ತದೆ. ಇದರಿಂದ ಕೇಂದ್ರ ಸರ್ಕಾರ ಕೆಳಗಿಯುತ್ತದೆ” ಎಂದು ಲೋಕ ಸಂಘರ್ಷ ಮೋರ್ಚಾದ ಪ್ರತಿಭಾ ಶಿಂಧೆ ತಿಳಿಸಿದ್ದರು.

ಇಂದು, ಮಹಾರಾಷ್ಟ್ರದ ಪ್ರತಿ ಜಿಲ್ಲೆಗಳಲ್ಲಿ ಮತ್ತು ಡಿಸೆಂಬರ್ 5 ರಂದು ಗುಜರಾತ್‌ನಲ್ಲಿ ರೈತರು ಸರ್ಕಾರದ ಪ್ರತಿನಿಧಿಗಳ ಪ್ರತಿಕೃತಿಗಳನ್ನು ದಹಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಅವರ ಕ್ಯಾಬಿನೆಟ್ ಸಹೋದ್ಯೋಗಿ ಪಿಯೂಷ್ ಗೋಯಲ್ ಅವರನ್ನು ಬುಧವಾರ ತಮ್ಮ ಮನೆಯಲ್ಲಿ ಭೇಟಿಯಾಗಿ ರೈತ ಮುಖಂಡರ ಜೊತೆ ನಡೆಸುವ ಸಭೆ ಬಗ್ಗೆ ಚರ್ಚಿಸಿದ್ದಾರೆ.

ಪ್ರತಿಭಟನಾ ನಿರತ ರೈತರು ಇಂದಿನ ಸಭೆಯನ್ನು ಕೊನೆಯ ಅವಕಾಶ ಎಂದಿರುವ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ: ದೆಹಲಿ ಗಡಿ ರಸ್ತೆಗಳು ಬಂದ್‌: ರೈತರ ಹೋರಾಟಕ್ಕೆ ವೈದ್ಯರು, ವಿದ್ಯಾರ್ಥಿಗಳು, ವಕೀಲರ ಬೆಂಬಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights